newsfirstkannada.com

ಇನ್ನೂ ಜಾರಿಯಾಗದ 5 ಗ್ಯಾರಂಟಿ; ಸಿದ್ದು ಸರ್ಕಾರಕ್ಕೆ ಜೆಡಿಎಸ್, ಬಿಜೆಪಿಯಿಂದ ವಾರ್ನಿಂಗ್​!

Share :

24-06-2023

  ಇನ್ನೂ ಜಾರಿಯಾಗದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು

  ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ಬಿಜೆಪಿ, ಜೆಡಿಎಸ್​​..!

  ಗ್ಯಾರಂಟಿ ಜಾರಿ ಮಾಡದಿದ್ದರೆ ಇಡೀ ರಾಜ್ಯಾದ್ಯಂತ ಹೋರಾಟ

ಬೆಂಗಳೂರು: ಗ್ಯಾರಂಟಿ ಭರವಸೆಗಳ ಸಮರ್ಪಕ ಅನುಷ್ಠಾನಕ್ಕೆ ತಿಣುಕಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಅಧಿವೇಶನದ ವೇಳೆ ಧರಣಿ ಕೂರಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ವಿದ್ಯುತ್ ದರ ಏರಿಕೆ ಟೀಕಿಸಿದ್ದ ಹೆಚ್​​ಡಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ಇದು ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟಿದ್ದ ವಾರ್ನಿಂಗ್​. ಕಾಂಗ್ರೆಸ್​ನವರು ಷರತ್ತಿಲ್ಲದೇ ಐದೂ ಗ್ಯಾರಂಟಿಗಳನ್ನು ಈಡೇರಿಸಬೇಕು. ಜುಲೈ 4ರಂದು ರಾಜ್ಯಪಾಲರ ಭಾಷಣ ಮುಗಿದ ಮೇಲೆ ಅಧಿವೇಶನ ಮುಗಿಯೋವರೆಗೂ ಅಲ್ಲೇ ಹೋರಾಟ ಮಾಡ್ತೇವೆ. ಗ್ಯಾರಂಟಿ ಕೊಡ್ಬೇಕು. ಇಲ್ಲ ಅವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್​​ ತಿರುಗೇಟು ನೀಡಿದ್ದಾರೆ.

ಗ್ಯಾರಂಟಿ ಹೋರಾಟ ಮಾಡುತ್ತೀವಿ ಎಂದ ಬಿಎಸ್​ವೈಗೆ ಡಿಕೆಶಿ ಕೌಂಟರ್

ರಾಜ್ಯದ ಜನರಿಗೆ ಪಂಚ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್​ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಭರವಸೆಗಳನ್ನು ಈಡೇರಿಸಲು ಕಸರತ್ತು ನಡೆಸ್ತಿದ್ದಾರೆ. ಗ್ಯಾರಂಟಿಗಳ ಅಸ್ತ್ರಗಳನ್ನಿಡಿದು ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಗ್ಯಾರಂಟಿಗಳನ್ನು ಈಡೇರಿಸುವವರೆಗೂ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಿಎಂ ಬಿಎಸ್​ವೈಗೆ ಕೆಶಿ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶ ಇದೆ. ಅವರು ಬಂದು ಧರಣಿ ಮಾಡಲಿ ಎಂದಿದ್ದಾರೆ.

ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆಗೆ ಡಿಕೆಶಿ ತಿರುಗೇಟು

ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ವಿದ್ಯುತ್ ದರ ಏರಿಕೆ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನ ಟೀಕಿಸಿದ್ದರು. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಡಿಕೆಶಿ ನಾವು ವಿದ್ಯುತ್ ದರ ಏರಿಕೆ ಮಾಡಿಲ್ಲ. ಕುಮಾರಸ್ವಾಮಿಗೆ ಇದು ಗೊತ್ತಿಲ್ವಾ, ನಾನೂ ಕೂಡ ಪವರ್ ಮಿನಿಸ್ಟರ್ ಆಗಿದ್ದವನು ಅಂತ ಕೌಂಟರ್ ಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಯೋಜನೆಯನ್ನ ನಾನೇ ತಡೆ ಹಿಡಿದಿದ್ದೇನೆ. ಈಗ ಗೃಹಜ್ಯೋತಿಗೆ ಅರ್ಜಿ ಹಾಕಲು ಜನ ಪರದಾಟ ನಡೆಸ್ತಿದ್ದಾರೆ. ಸುಲಭವಾಗಿ ಅರ್ಜಿ ಹಾಕೋ ಹಾಗುವ ರೀತಿ ವ್ಯವಸ್ಥೆ ಮಾಡ್ತೀವಿ ಅಂತ ಡಿಸಿಎಂ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಗ್ಯಾರಂಟಿ ಅಸ್ತ್ರ ಹಿಡಿದು ಪ್ರತಿಭಟನೆಗೆ ಬಿಜೆಪಿ ಸಜ್ಜಾಗುತ್ತಿದೆ. ಬಜೆಟ್ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳು ಸಿಕ್ಕಾಪಟ್ಟೆ ಸದ್ದು ಮಾಡೋದು ಪಕ್ಕಾ ಆಗಿದೆ. ವಿಪಕ್ಷಗಳ ಏಟಿಗೆ ಸರ್ಕಾರ ಯಾವ ರೀತಿ ಎದುರೇಟು ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ಜಾರಿಯಾಗದ 5 ಗ್ಯಾರಂಟಿ; ಸಿದ್ದು ಸರ್ಕಾರಕ್ಕೆ ಜೆಡಿಎಸ್, ಬಿಜೆಪಿಯಿಂದ ವಾರ್ನಿಂಗ್​!

https://newsfirstlive.com/wp-content/uploads/2023/06/Siddu_DKS-4.jpg

Load More