ಬಿಜೆಪಿಯಲ್ಲಿ ಸರ್ಜರಿ.. ಹೈಕಮಾಂಡ್ ತಂಡ ಘೋಷಣೆ
ತೆಲಂಗಾಣ ಚುನಾವಣೆಗೆ ಬಿಜೆಪಿ ಕೊಟ್ಟ ಸಂದೇಶ ಏನು?
ನೂತನ ತಂಡದಲ್ಲಿ ಯಾರೆಲ್ಲ ಇದ್ದಾರೆ? ಯಾರಿಗೆಲ್ಲ ಕೊಕ್?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಲೋಕಸಭೆ ಚುನಾವಣೆಗೆ ತಮ್ಮ ತಂಡವನ್ನು ಪ್ರಕಟಿಸಿದ್ದಾರೆ. ಕರ್ನಾಟಕ ರಾಜಕಾರಣಿ ಸಿಟಿ ರವಿ ಅವರಂತಹ ನಾಯಕರನ್ನು ಕೈಬಿಟ್ಟು, ಟೀಂನಲ್ಲಿ ಹೊಸ ಹಾಗೂ ಹಳೆಯ ಮುಖಗಳ ಸಂಯೋಜನೆ ಮಾಡಿದ್ದಾರೆ.
ಪ್ರಮುಖವಾಗಿ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ತಂಡದಲ್ಲಿ ಸೇರಿಕೊಂಡಿದ್ದಾರೆ. ಚತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ‘ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ’ನ್ನಾಗಿ ನೇಮಿಸಿಕೊಂಡಿದ್ದಾರೆ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನೂ ಕೇಂದ್ರದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಇಬ್ಬರು ಸಂಸದರಾದ ರೇಖಾ ವರ್ಮಾ, ಲಕ್ಷ್ಮೀಕಾಂತ್ ಬಾಜ್‌ಪೇಯ್ ಮತ್ತು ವಿಧಾನ ಪರಿಷತ್ ಸದಸ್ಯ ತಾರಿಕ್ ಮನ್ಸೂರ್ ಅವರಿಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಸಂಸದರಾದ ಸಂಜಯ್ ಬಂಡಿ ಮತ್ತು ಸುನಿಲ್ ಬನ್ಸಾಲ್ ಅವರನ್ನು ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಂಜಯ್ ಬಂಡಿಯನ್ನು ಹೈಕಮಾಂಡ್ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ರವಾನಿಸಿದೆ. ಇನ್ನು, ಕೈಲಾಶ್ ವಿಜಯವರ್ಗಿ, ತರುಣ್ ಚುಗ್, ವಿನೋದ್ ತಾವ್ಡೆ, ಅರುಣ್ ಸಿಂಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮತ್ತೆ ಅವಕಾಶ ಸಿಕ್ಕಿದೆ.
ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಪುತ್ರ ಅರುಣ್ ಆಂಟನಿ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಗೋರಖ್‌ಪುರದ ಮಾಜಿ ಶಾಸಕ ರಾಧಾ ಮೋಹನ್ ಅಗರ್‌ವಾಲ್ ಕೂಡ ಹೈಕಮಾಂಡ್ ತಂಡಕ್ಕೆ ಎಂಟ್ರಿಯಾಗಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಸಿಕ್ಕಿರಲಿಲ್ಲ.
ಯಾರೆಲ್ಲ ಕೈಬಿಡಲಾಗಿದೆ..?
ಆಂಧ್ರ ಪ್ರದೇಶದ ಉಸ್ತುವಾರಿ ಸುನಿಲ್ ದೇವಧರ್ ಅವರನ್ನು ಕೈಬಿಟ್ಟಿದೆ. ಸಿ.ಟಿ.ರವಿ ಮತ್ತು ದಿಲೀಪ್ ಸೈಕಿಯಾ ಅವರನ್ನೂ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಿದೆ. ರಾಜೇಶ್ ಅಗರ್ವಾಲ್ರನ್ನು ಖಜಾಂಚಿಯಾಗಿ ನೇಮಿಸಿಕೊಂಡಿದೆ. ಜೊತೆಗೆ ನರೇಶ್ ಬನ್ಸಲ್ರನ್ನು ಸಹ ಖಜಾಚಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಮುಂದುವರಿಸಿದ್ದು ಬಿಟ್ಟರೆ, ಕರ್ನಾಟಕದಿಂದ ಬೇರೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ. ಸಿಟಿ ರವಿ ಅವರನ್ನೂ ಕೈಬಿಟ್ಟಿದ್ದಾರೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ
ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ