newsfirstkannada.com

ಅಕ್ಕಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ಯಾ ಕಾಂಗ್ರೆಸ್​​..? ಬಿಜೆಪಿ ಮಾಡಿದ ಆರೋಪವೇನು..?

Share :

27-06-2023

    ನುಡಿದಂತೆ ನಡೆಯಲು ಸಿಎಂ ಸಿದ್ದರಾಮಯ್ಯ ಸರ್ಕಾರ ಕಸರತ್ತು

    ಕಾಂಗ್ರೆಸ್​, ಬಿಜೆಪಿ ಮಧ್ಯೆ ತಾರಕಕ್ಕೇರಿದ ‘ಗ್ಯಾರಂಟಿ’ ರಾಜಕೀಯ

    ಕೊನೆಗೂ ಬಿಜೆಪಿಗೆ ಬ್ರಹ್ಮಾಸ್ತ್ರವಾದ ಕಾಂಗ್ರೆಸ್​ ‘ಗ್ಯಾರಂಟಿ’ ಸ್ಕೀಮ್ಸ್​​​

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳ ಜಾರಿ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ವಾರ್ ಮುಂದುವರಿದಿದೆ. ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿಗರಿಗೆ ಡಿಸಿಎಂ ಡಿ.ಕೆ ಶಿವಕುಮಾರ್​​​​ ಕೌಂಟರ್​​ ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗರ ಹೇಳಿಕೆಗೆ ಕಮಲ ನಾಯಕರು ಕೆಂಡಕಾರಿದ್ದಾರೆ.

ಇನ್ನು, ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಈಡೇರಿಸಲು ಸರ್ಕಾರ ಸಿಕ್ಕಾಪಟ್ಟೆ ಕಸರತ್ತು ನಡೆಸ್ತಿದೆ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ನಾಯಕರಿಗೆ ಗ್ಯಾರಂಟಿಗಳೇ ಪ್ರಮುಖ ಬ್ರಹ್ಮಾಸ್ತ್ರವಾಗಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ‘ಗ್ಯಾರಂಟಿ’ ವಾಕ್ಸಮರ!

ಗ್ಯಾರಂಟಿಗಳನ್ನು ಈಡೇರಿಸಲು ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ ಮುಂದುವರಿದಿದೆ. ಒಂದು ಕಾಳು ಕಡಿಮೆ ಕೊಟ್ರೂ ಧರಣಿ ಎಂದಿದ್ದ ಬಿಜೆಪಿ ನಾಯಕರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ. 365 ದಿನವೂ ಪ್ರತಿಭಟನೆ ಮಾಡಲಿ. ಅವರು ಹೋರಾಟ ಮಾಡ್ತಿರಬೇಕು, ಬಿಜೆಪಿಯವರು ವಿರೋಧ ಪಕ್ಷದಲ್ಲಿ ಕೂತಿರಬೇಕು ಅಂತ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು!

ಕೇಂದ್ರ ಅಕ್ಕಿ ಕೊಡ್ತಿಲ್ಲ ಎಂಬ ನಾಯಕರ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವಿ. ನಮ್ಮದು ಬಿಟ್ಟು ಸಿಎಂ ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡ್ತಾರಾ ಮೊದಲು ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.

ಸುಳ್ಳು ಅಂದ್ರೆ ಅದು ಕಾಂಗ್ರೆಸ್ ಎಂದ ಕೆ.ಎಸ್​ ಈಶ್ವರಪ್ಪ!

ಇನ್ನು ಕಾಂಗ್ರೆಸ್​ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ಕೊಡೋಕೆ ಮೋದಿ ಅಡ್ಡ ಬರ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ, ಸುಳ್ಳು ಅಂದ್ರೆ ಅದು ಕಾಂಗ್ರೆಸ್​ ಅಂತಾ ಕಿಡಿಕಾರಿದ್ದಾರೆ.

‘ಸುಳ್ಳಿಗೆ ಮತ್ತೊಂದು ಹೆಸರೇ ಕಾಂಗ್ರೆಸ್’

ಒಟ್ಟಿನಲ್ಲಿ ಅವರ ಮೇಲೆ ಇವರು. ಇವರ ಮೇಲೆ ಅವರು ಹೇಳ್ತಿದ್ದಾರೆ. ಅದೇನೇ ಇರಲಿ, ಅದೆಷ್ಟೇ ಕಷ್ಟ ಇರಲಿ ಕಾಂಗ್ರೆಸ್ ನಾಯಕರು ಕೊಟ್ಟಿರುವ ಭರವಸೆ ಈಡೇರಿಸಬೇಕಿದೆ. ನುಡಿದಂತೆ ನಡೆಯುತ್ತೇವೆ ಅನ್ನೋದನ್ನು ಸಾಬೀತುಪಡಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ಯಾ ಕಾಂಗ್ರೆಸ್​​..? ಬಿಜೆಪಿ ಮಾಡಿದ ಆರೋಪವೇನು..?

https://newsfirstlive.com/wp-content/uploads/2023/06/Siddu_23-1.jpg

Load More