ಸರ್ಕಾರ ಅಭಿವೃದ್ಧಿಗೆ ‘ಕೈ’ ಹಾಕಿಲ್ಲ ಎಂದ ಬಿಜೆಪಿ
ಕಾಂಗ್ರೆಸ್ ಕಾರ್ಯವೈಖರಿಗೆ ಅತೃಪ್ತಿ ಚಾರ್ಜ್‌ಶೀಟ್
BJPಗೆ ನೈತಿಕತೆ ಇದ್ಯಾ? ಚಾರ್ಜ್‌ಶೀಟ್‌ಗೆ ಸಿಎಂ ಪ್ರಶ್ನೆ!
ಗ್ಯಾರಂಟಿಗಳ ಗುಂಗಲ್ಲೇ ಕಾಂಗ್ರೆಸ್ ಸರ್ಕಾರ ಶತದಿನ ಪೂರೈಸಿದೆ. ಕೊಟ್ಟ ಭರವಸೆಗಳನ್ನ 100 ದಿನಗಳಲ್ಲೇ ಈಡೇರಿಸಿದ್ದೇವೆ ಎಂಬ ಸಂತೃಪ್ತಿಯಲ್ಲಿ ಸರ್ಕಾರವಿದೆ. ಆದ್ರೆ, ಸರ್ಕಾರದ 100 ದಿನಗಳ ಕಾರ್ಯವೈಖರಿಯ ಬಗ್ಗೆ ಬಿಜೆಪಿ ಅತೃಪ್ತಿಯ ಚಾರ್ಜ್‌ಶೀಟ್ ಹಾಕಿದೆ. ಸಿದ್ದು ಸರ್ಕಾರದ ವಿರುದ್ಧ ಶೂನ್ಯ ಸಾಧನೆಯ ದೋಷಾರೋಪಣಾ ಪಟ್ಟಿಯನ್ನ ರಿಲೀಸ್ ಮಾಡಿದೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮರುಕ್ಷಣದಿಂದಲೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಜಾರಿಗೆ ಶ್ರಮಿಸಿತ್ತು. ರಾಜ್ಯದ ಜನತೆಗೆ ಕೊಟ್ಟಿರೋ 5 ವಾಗ್ದಾನಗಳ ಈಡೇರಿಸಲು ಪಣತೊಟ್ಟಿತ್ತು. ಇದೀಗ 5ರಲ್ಲಿ ನಾಲ್ಕನೇ ಗ್ಯಾರಂಟಿ ಅನುಷ್ಠಾನಕ್ಕೆ ಸಜ್ಜಾಗಿದೆ. ಆದ್ರೀಗ ರಾಜ್ಯ ಸರ್ಕಾರದ ಸಾಧನೆ ಶೂನ್ಯ ಅಂತ ಬಿಜೆಪಿ ದೋಷಾರೋಪಣೆ ಮಾಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ 100 ದಿನ, ಕಮಲ ಪಡೆಯಿಂದ ಚಾರ್ಜ್‌ಶೀಟ್!
‘ಕೈ’ ತಪ್ಪಿದ ಯೋಜನೆ, ಹಳಿ ತಪ್ಪಿದ ಸರ್ಕಾರ’ ಕಿರುಹೊತ್ತಿಗೆ ರಿಲೀಸ್
ಕರುನಾಡಿನಲ್ಲಿ ಜೋಡೆತ್ತು ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಪೂರೈಸಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರ್ಕಾರದ ನೊಗ ಹೊತ್ತು ಅಧಿಕಾರದ ಬಂಡಿಯನ್ನ ನಡೆಸ್ತಿದ್ದಾರೆ. ಆದ್ರೆ, ಶತದಿನದ ಸಂಭ್ರಮದಲ್ಲಿ ಮುಳುಗಿರೋ ಸರ್ಕಾರಕ್ಕೆ ಕೇಸರಿ ಸೇನೆ ಬಿಸಿಮುಟ್ಟಿಸೋ ಕೆಲಸಕ್ಕೆ ಕೈ ಹಾಕಿದೆ. ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಗಳಿಗಷ್ಟೇ ಒತ್ತು ನೀಡಿದೆ. ಆದ್ರೆ. ಯಾವುದೇ ಅಭಿವೃದ್ಧಿಗೆ ಕೈ ಹಾಕಿಲ್ಲ ಅಂತಾ ಸಮರ ಸಾರಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆಯಾಗಿದೆ. ಕಾಂಗ್ರೆಸ್ 100 ದಿನಗಳ ಆಳ್ವಿಕೆಯಲ್ಲಿ ಸೋತಿದೆ ಅಂತ ‘ಕೈ ತಪ್ಪಿದ ಯೋಜನೆ, ಹಳಿ ತಪ್ಪಿದ ಸರ್ಕಾರ’ ಎಂಬ ಕಿರುಹೊತ್ತಿಗೆ ರಿಲೀಸ್ ಮಾಡಿದೆ. 100 ಪ್ರಶ್ನೆಗಳನ್ನು ಕೇಳಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಕಾಲೆಳೆದಿದ್ದಾರೆ.
‘ಚಾರ್ಜ್‌ಶೀಟ್’ ಬಿಡುಗಡೆ ಮಾಡಿ ಬೊಮ್ಮಾಯಿ ಮಾತಿನ ದಾಳಿ
ಸರ್ಕಾರದ 100 ದಿನಗಳ ಕರಾಳ ದಿನ ಅಂತ ಅಶೋಕ್ ವಾಗ್ದಾಳಿ
ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ರಿಲೀಸ್ ಮಾಡಿ ಜೋಡೆತ್ತು ಆಡಳಿತದ 100 ದಿನಗಳ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಸಮರ ಸಾರಿದ್ರು. ಕಾಂಗ್ರೆಸ್ ಸರ್ಕಾರದ ಆಡಳಿತ ಹಳಿ ತಪ್ಪಿದೆ. ಜನರಿಗೆ ಕೊಟ್ಟಿದ್ದ ಮಾತನ್ನ ತಪ್ಪಿದೆ ಅಂತ ಬೊಮ್ಮಾಯಿ ಕಿಡಿಕಾರಿದ್ರು. ಇತ್ತ ಸರ್ಕಾರದ 100 ದಿನಗಳ ಕರಾಳ ದಿನ ಅಂತಾ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ರಿಲೀಸ್ ಮಾಡಿರೋ ‘ಕೈ’ ತಪ್ಪಿದ ಯೋಜನೆ, ಹಳಿ ತಪ್ಪಿದ ಸರ್ಕಾರ ಚಾರ್ಜ್‌ಶೀಟ್‌ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸರ್ಕಾರವನ್ನ ಪ್ರಶ್ನಿಸೋ ಬಿಜೆಪಿ ನಾಯಕರಿಗೆ ನೈತಿಕತೆ ಇದ್ಯಾ ಅಂತಾ ಮರುಪ್ರಶ್ನೆ ಹಾಕಿದ್ದಾರೆ. ಇತ್ತ ಬಿಜೆಪಿ ನಾಯಕರಿಗೆ ಮಾಡಲು ಕೆಲಸವಿಲ್ಲ ಅಂತಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಒಟ್ಟಾರೆ, ‘ಗ್ಯಾರಂಟಿ’ಗಳ ಅನುಷ್ಠಾನವೇ ಸರ್ಕಾರದ ಪಾಲಿಗೆ ಶ್ರೀರಕ್ಷೆಯಾಗಿದೆ. ಆದ್ರೆ, ‘ನುಡಿದಂತೆ ನಡೆದವರು’ ಅಭಿವೃದ್ಧಿ ವಿಚಾರವನ್ನ ಮರೆತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಅಭದ್ರತೆ, ಅಸಹನೆಯಿಂದ ಬಿಜೆಪಿ ಈ ರೀತಿ ಆರೋಪ ಮಾಡ್ತಿದ್ಯಾ ಎಂಬ ಚರ್ಚೆಯೂ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ