newsfirstkannada.com

×

ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ಕಾರ್ಪೊರೇಟರ್ ಪುತ್ರ! ಆನ್​ಲೈನ್​ನಲ್ಲಿಯೇ ನಡೀತು ನಿಖ್ಹಾ!

Share :

Published October 20, 2024 at 1:47pm

Update October 20, 2024 at 1:51pm

    ಪಾಕಿಸ್ತಾನ ಮೂಲದ ಯುವತಿಯನ್ನು ಮದುವೆಯಾದ ಬಿಜೆಪಿ ನಾಯಕನ ಪುತ್ರ

    ಆನ್​ಲೈನ್​ನಲ್ಲಿ ಲಾಹೋರ ಯುವತಿಯನ್ನು ವರಿಸಿದ ಕಾರ್ಪೊರೇಟರ್ ಮಗ

    ವೀಸಾ ಸಿಗದ ಕಾರಣ ಆನ್​ಲೈನ್​ನಲ್ಲಿಯೇ ಮದುವೆಯಾದ ಜೋಡಿಗಳು

ಉತ್ತರಪ್ರದೇಶದ ಜಿಲ್ಲೆಯೊಂದು ಗಡಿಯಾಚೆಗಿನ ಪ್ರೇಮಕ್ಕೆ ಸಾಕ್ಷಿಯಾಗಿದೆ. ಉತ್ತರಪ್ರದೇಶದ ಜೌನ್​ಪುರ್ ಜಿಲ್ಲೆಯ ಕಾರ್ಪೊರೇಟರ್ ಆಗಿರುವ ತಹಸೀನ್ ಶಾಹೀದ್ ಅವರ ಪುತ್ರ ಪಾಕಿಸ್ತಾನದ ಮಹಿಳೆಯನ್ನು ಮದುವೆ ಆಗುವುರ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಟೀ ಶರ್ಟ್​​, ಜೀನ್ಸ್​​​ ಪ್ಯಾಂಟ್​​ ಹಾಕಿದ್ದಕ್ಕೆ ಸ್ಟಾಲಿನ್​​ ಪುತ್ರನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ; ಮುಂದೇನು?​​​
ತಹಸೀನ್ ಪುತ್ರ ಮೊಹಮ್ಮದ್ ಅಬ್ಬಾಸ್ ಹೈದರ್, ಪಾಕಿಸ್ತಾನದ ಯುವತಿ ಲಾಹೋಹರ್​​ ಮೂಲದ ಅದ್ಲೀಪಾ ಝಾರಾ ಜೊತೆ ವಿವಾಹವಾಗಿದ್ದಾರೆ. ಈಗಾಗಲೇ ಎರಡು ದೇಶಗಳ ನಡುವೆ ಹಾವು ಮುಂಗುಸಿಯ ಆಟ ನಡೆಯುತ್ತಿದೆ. ಹೀಗಾಗಿ ಝಾರಾಗೆ ವೀಸಾ ಸಿಗುವುದು ಕಷ್ಟವಾಗಿತ್ತು. ಕಲ್ಯಾಣ ಮಂಟಪಕ್ಕೆ ಬರುವುದು ಕೂಡ ಅಸಾಧ್ಯವಾಗಿತ್ತು. ಝಾರಾಳ ತಾಯಿ ಆರೋಗ್ಯ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡು ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಹೀಗಾಗಿ ಆನ್​ಲೈನ್​ನಲ್ಲಿಯೇ ಇಬ್ಬರ ನಿಖ್ಹಾ ನಡೆದು ಹೋಗಿದೆ.

ಇದನ್ನೂ ಓದಿ: ₹1 ಕೋಟಿ ಕದ್ದ ಕಳ್ಳರನ್ನ ಹಿಡಿದುಕೊಟ್ಟ ಪೆನ್ನಿ.. ಪೊಲೀಸ್ ಡಾಗ್‌ ಸಾಹಸದ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!

ಶಿಯಾ ಧಾರ್ಮಿಕ ಮುಖಂಡರಾದ ಮೌಲಾನಾ ಮೌಫುಜುಲ್ ಹಸನ್ ಖಾನ್ ಆನ್​ಲೈನ್​ನಲ್ಲಿ ನಡೆದ ಮದುವೆಯಲ್ಲಿ ಕುರಾನ್ ಓದಿ ಹೇಳಿದರು. ಆ ಕಡೆಯಿಂದಲೂ ಹುಡುಗಿ ಪರ ಒಬ್ಬರು ಮೌಲಾನಾ ಮದುವೆಗೆ ಸಾಕ್ಷಿಯಾಗಿದ್ದರು. ಇಬ್ಬರು ಮೌಲಾನಗಳು ಎರಡು ಬದಿಯಿಂದ ಹಾಜರಿದ್ದಲ್ಲಿ ಹುಡುಗ ಹುಡಿ ನಿಖ್ಹಾ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಅವರ ಧರ್ಮ ಗುರುಗಳು ಹೇಳಿದ್ದಾರೆ.
ಈ ಒಂದು ವಿವಾಹಕ್ಕೆ ಬಿಜೆಪಿ ಎಂಎಲ್​ಸಿ ಬ್ರಿಜೇಶ್ ಸಿಂಗ್ ಪ್ರಿಶು ಹಾಜರಾಗಿದ್ದರು.ಆನ್​ಲೈನ್​ನಲ್ಲಿ ಮದುವೆಯಾಗಿ ಖುಷಿಯಾಗಿರುವ ಮೊಹಮ್ಮದ್ ಅಬ್ಬಾಸ್ ಹೈದರ್. ಸದ್ಯದಲ್ಲಿಯೇ ತನ್ನ ಪತ್ನಿಗೆ ವೀಸಾ ಸಿಗುವ ಭರವಸೆಯಿದ್ದು ಆದಷ್ಟು ಬೇಗನೆ ಅವಳು ಭಾರತಕ್ಕೆ ಬರುವ ಭರವಸೆ ಇದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ಕಾರ್ಪೊರೇಟರ್ ಪುತ್ರ! ಆನ್​ಲೈನ್​ನಲ್ಲಿಯೇ ನಡೀತು ನಿಖ್ಹಾ!

https://newsfirstlive.com/wp-content/uploads/2024/06/Marriage.jpg

Load More