newsfirstkannada.com

WATCH: ಬಿಜೆಪಿ ಪಕ್ಷದಲ್ಲೇ ಶಿಸ್ತು ಹೊರಟು ಹೋಗಿದೆ; ಬಾಂಬೆ ಟೀಮ್‌ ಮೇಲೆ ಗೂಬೆ ಕೂರಿಸಿದ ಈಶ್ವರಪ್ಪ

Share :

26-06-2023

    ಕಾಂಗ್ರೆಸ್​ನ ಗಾಳಿ ಬಿಜೆಪಿ ಪಕ್ಷದ ಮೇಲೂ ಬೀರಿದೆ ಎಂದ ಈಶ್ವರಪ್ಪ

    ದಿಲ್ಲಿ ನಾಯಕರು ಬಾಲ ಯಾವಾಗ ಕಟ್​ ಮಾಡಬೇಕೋ ಮಾಡ್ತಾರೆ

    ಬಾಂಬೆ ಮಿತ್ರಮಂಡಳಿಯ ಸದಸ್ಯರಿಂದಲೇ ಶಿಸ್ತು ಕಡಿಮೆಯಾಗಿದ್ಯಾ?

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯ ಶಾಕ್‌ನಿಂದಲೇ ರಾಜ್ಯ ಬಿಜೆಪಿ ನಾಯಕರು ಇನ್ನೂ ಹೊರಬಂದಿಲ್ಲ. ಪಕ್ಷದ ಸೋಲಿಗೆ ಸೂಕ್ತ ಕಾರಣಗಳನ್ನು ಹುಡುಕುತ್ತಿರುವ ಮಧ್ಯೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಇವತ್ತು ಸ್ಫೋಟಕ ಹೇಳಿಕೆ ನೀಡಿದ್ದಾರೆ. 2019ರಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚಿಸಲು ನೆರವಾದ ಬಾಂಬೆ ಟೀಮ್‌ನ ಸದಸ್ಯರಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.

ಹುಬ್ಬಳ್ಳಿಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ ಅವರು ನಮ್ಮದು ಶಿಸ್ತಿನ ಪಾರ್ಟಿ. ಈಗಾಗಲೇ ನಮಗೆ ಚುನಾವಣೆ ನೋವು ಕೊಟ್ಟಿದೆ. ಬಿಜೆಪಿಯಲ್ಲಿ ಸ್ವಲ್ಪ ಶಿಸ್ತು ಹೊರಟು ಹೋಗಿದೆ. ನಾವು ನಾಲ್ಕೇ ಜನ ಇದ್ದಾಗ ಬಹಳ ಶಿಸ್ತು ಇತ್ತು. ಕಾಂಗ್ರೆಸ್‌ನ ಗಾಳಿ ನಮ್ಮ ಮೇಲೆ ಬೀರಿದೆ. ಕಾಂಗ್ರೆಸ್‌ನವರು ಕೂಡ ನಮ್ಮಲ್ಲಿ ಬಂದು ಬಿಟ್ಟಿದ್ದಾರಲ್ಲ. ನಾವು ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‌ನವರನ್ನ ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ. ಈಶ್ವರಪ್ಪನವರ ಈ ಮಾತು ಅಕ್ಷರಶಃ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. 2019ರಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಕರೆದುಕೊಂಡು ಬಂದಿದ್ರು. ಸಮ್ಮಿಶ್ರ ಸರ್ಕಾರವನ್ನ ಕೆಡವಲು ರೆಬೆಲ್ ಶಾಸಕರು ಬಾಂಬೆ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದರು. ಅವರನ್ನು ಕರೆದುಕೊಂಡು ಸರ್ಕಾರ ರಚಿಸಿದ್ದು ಆಗಿದೆ. ಇದೀಗ 2023ರ ಚುನಾವಣೆ ಮುಗಿದ ಬಳಿಕ ಈಶ್ವರಪ್ಪನವರು ಇದೇ ಬಾಂಬೆಯ ಮಿತ್ರಮಂಡಳಿಯ ಸದಸ್ಯರಿಂದಲೇ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ ಎಂದಿದ್ದಾರೆ.

ಇನ್ನು, ಬಿಜೆಪಿ ಹೈಕಮಾಂಡ್ ವೀಕ್ ಆಗಿ ಇಲ್ಲ. ಬಾಲ ಯಾವಾಗ ಕಟ್ ಮಾಡಬೇಕೋ ಮಾಡ್ತಾರೆ. ನಾವು ಯಾರನ್ನು ಯಾವಾಗ ಅಧ್ಯಕ್ಷನನ್ನು ಮಾಡಬೇಕು ಮಾಡ್ಕೋತೀವಿ ಅನ್ನೋ ಮೂಲಕ ಈಶ್ವರಪ್ಪ ಮುಂದಿನ ದಿನಗಳಲ್ಲಿ ಆಗೋ ಮಹತ್ವದ ಬದಲಾವಣೆಯ ಮುನ್ಸೂಚನೆಗಳನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಬಿಜೆಪಿ ಪಕ್ಷದಲ್ಲೇ ಶಿಸ್ತು ಹೊರಟು ಹೋಗಿದೆ; ಬಾಂಬೆ ಟೀಮ್‌ ಮೇಲೆ ಗೂಬೆ ಕೂರಿಸಿದ ಈಶ್ವರಪ್ಪ

https://newsfirstlive.com/wp-content/uploads/2023/06/Eshwarappa-BJP.jpg

Load More