newsfirstkannada.com

ಸಂಸದೆ ಕಂಗನಾ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಅತಿ ದೊಡ್ಡ ಮುಜುಗರ; ನಡು ಬೀದಿಯಲ್ಲಿ ಕೈ ಬಿಡ್ತಾ ಹೈಕಮಾಂಡ್‌?

Share :

Published August 26, 2024 at 6:26pm

Update August 26, 2024 at 6:39pm

    ದೇಶಾದ್ಯಂತ ಕಿಚ್ಚು ಹಚ್ಚಿದ ಸಂಸದೆ ಕಂಗನಾ ರಣಾವತ್ ವಿವಾದಿತ ಹೇಳಿಕೆ

    ಈ ರೀತಿಯ ಹೇಳಿಕೆ ನೀಡದಿರುವಂತೆ ಎಚ್ಚರಿಕೆ ಕೊಟ್ಟ ಪಂಜಾಬ್ ಬಿಜೆಪಿ?

    ರಾಷ್ಟ್ರೀಯ ನಾಯಕರು ಕಂಗನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದೇಕೆ?

ನವದೆಹಲಿ: ಕಂಗನಾ ರಣಾವತ್, ಒಂದು ಕಾಲದಲ್ಲಿ ಸದಾ ವಿವಾದದಲ್ಲಿರುವ ನಟಿ. ಈಗ ಸಂಸದೆಯಾದ ಮೇಲೂ ಕೂಡ ಅದು ಚಾಲ್ತಿ ಜಾರಿಯಲ್ಲಿದೆ. ಈ ಹಿಂದೆ ಕೃಷಿ ಕಾಯ್ದೆ ವಿರೋಧಿಸಿ ನಡೆಸಲಾಗಿದ್ದ ರೈತ ಪ್ರತಿಭಟನೆಯ ವಿರುದ್ಧ ಕಂಗನಾ ಇದು ಪಕ್ಷದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲ್ಲ ಅನ್ನೋ ಮಾತುಗಳನ್ನು ಆಡಿದ್ದರು. ಅದು ಮಾತ್ರವಲ್ಲ, ಇದರ ಹಿಂದೆ ವಿದೇಶಿ ಹಾಗೂ ಬಾಲಿವುಡ್ ನಟರ ಕೈವಾಡವಿದೆ ಅನ್ನೋ ರೀತಿ ಹೇಳಿಕೆ ಕೊಟ್ಟಿದ್ದರು. ಮಂಡಿ ಸಂಸದೆ ಕಂಗನಾ ಹೇಳಿಕೆ ವಿರುದ್ಧ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಸದ್ಯ ಬಿಜೆಪಿ ಕಂಗನಾ ಹೇಳಿಕೆ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ ಅಂತ ಹೇಳುವ ಮೂಲಕ ಅಂತರ ಕಾಯ್ದುಕೊಂಡಿದೆ.

ಇದನ್ನೂ ಓದಿ: ಮುಂಬೈನ GSB ಮಂಡಳ ಗಣೇಶನಿಗೆ ಬರೋಬ್ಬರಿ ₹400 ಕೋಟಿ ಇನ್ಸೂರೆನ್ಸ್‌.. ಎಲ್ಲಾ ರೆಕಾರ್ಡ್ ಬ್ರೇಕ್!

ಕಂಗನಾ ಮಾತಿಗೆ ವಿರೋಧ ವ್ಯಕ್ತವಾಗಿದ್ದು ಏಕೆ.?
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ನಮ್ಮಲ್ಲಿ ಸಶಕ್ತ ನಾಯಕತ್ವ ಇಲ್ಲದೇ ಹೋಗಿದ್ದರೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರೋದು ಇಲ್ಲಿಯೂ ನಡೆಯಲು ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ. ನಮ್ಮಲ್ಲಿ ರೈತರ ಪ್ರತಿಭಟನೆಯಾದಾಗ ಅಲ್ಲಿ ಶವಗಳು ನೇತಾಡುತ್ತಿದ್ದವು. ರೇಪ್​ಗಳು ನಡೆದಿದ್ದವು. ಕೃಷಿ ಮಸೂದೆ ವಾಪಸ್ ಪಡೆದ ತಕ್ಷಣ ಅವರು ಬೆಚ್ಚಿ ಬಿದ್ದರು. ಅವರು ಕೃಷಿ ಕಾಯ್ದೆ ವಾಪಸ್ ಪಡೆಯುತ್ತಾರೆ ಎಂದು ಯೋಚಿಸಿರಲಿಲ್ಲ ಕೂಡ, ಅವರು ದೊಡ್ಡ ಯೋಜನೆಯನ್ನೇ ಹಾಕಿಕೊಂಡು ಕುಳಿತಿದ್ದರು, ಈಗ ಬಾಂಗ್ಲಾದೇಶದಲ್ಲಿ ಏನು ಆಗುತ್ತಿದೆಯೋ ಅದನ್ನೇ ಮಾಡಲು ಕಾದಿದ್ದರು.

ಇದನ್ನೂ ಓದಿ: ನೌಕರರಿಗೆ ಕೇಂದ್ರ ಭರ್ಜರಿ ಗಿಫ್ಟ್: 10 ವರ್ಷಗಳ ನಂತರ ಕೆಲ್ಸ ಬಿಟ್ರೆ 10 ಸಾವಿರ; 25 ವರ್ಷದ ಸೇವೆಗೆ ಎಷ್ಟು ಪಿಂಚಣಿ?

ಈ ತರದ ಯೋಜನೆಗಳು ರೈತರು ಮಾಡುತ್ತಾರಾ, ಇಲ್ಲ, ಚೈನಾ ಅಮೆರಿಕಾದಂತಹ ಬಾಹ್ಯ ಶಕ್ತಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಈ ಸಿನಿಮಾ ಜನರಿಗೆ ಯಾವುದೇ ವ್ಯತ್ಯಾಸ ಬೀಳುವುದಿಲ್ಲ ಅವರ ಅಂಗಡಿ ನಡೆದರೆ ಸಾಕು, ದೇಶ ಬೇಕಾದರೆ ಹಾಳಾಗಿ ಹೋಗಲಿ ಅನ್ನೋ ಮನಸ್ಥಿತಿಯವರು. ಹಾಗೆ ಆಗುವುದಿಲ್ಲ, ಒಂದು ವೇಳೆ ದೇಶ ನಾಶವಾದಲ್ಲಿ ನೀವು ನಾಶವಾಗುತ್ತೀರಿ ಎಂಬ ಹೇಳಿಕೆಯನ್ನು ನೀಡಿದ್ದರು.

ಸಂಸದೆ ಕಂಗನಾರ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು, ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ಪಂಜಾಬ್ ಬಿಜೆಪಿ ಈ ರೀತಿ ಹೇಳಿಕೆ ನೀಡುವ ಮೊದಲು ಯೋಚಿಸಿ ಎಂದು ಕುಟುಕಿತು. ರೈತರ ಬಗ್ಗೆ ಮಾತನಾಡುವುದು ಕಂಗನಾ ಕೆಲಸವಲ್ಲ. ಬಿಜೆಪಿ ಸದಾ ರೈತರ ಪರ ಇರುವ ಸರ್ಕಾರ, ಈಗಾಗಲೇ ವಿರೋಧ ಪಕ್ಷಗಳು ನಮ್ಮ ವಿರುದ್ಧ ರೈತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಸಜ್ಜಾಗಿವೆ. ಈ ತರದ ಹೇಳಿಕೆ ನೀಡುವ ಮೂಲಕ ಕಂಗನಾ ಕೂಡ ವಿಪಕ್ಷಗಳ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಅವರು ಕೊಡಬಾರದು. ಸೂಕ್ಷ್ಮ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುವಾಗ ಜಾಗ್ರತೆಯಿಂದ ಇರಬೇಕು ಎಂದು ಕುಟುಕಿದೆ. ಇನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಕಂಗನಾ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಪಕ್ಷ ಅದನ್ನು ಒಪ್ಪುವುದಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ ಎಂದು ಕಂಗನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಸದೆ ಕಂಗನಾ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಅತಿ ದೊಡ್ಡ ಮುಜುಗರ; ನಡು ಬೀದಿಯಲ್ಲಿ ಕೈ ಬಿಡ್ತಾ ಹೈಕಮಾಂಡ್‌?

https://newsfirstlive.com/wp-content/uploads/2024/05/Kangana-2.jpg

Load More