ಮುಗಿಯದ ಕಥೆಯಾದ ಸಚಿವ ಡಿ. ಸುಧಾಕರ್ ಪ್ರಕರಣ
ಯಲಹಂಕದ ವಿವಾದಿತ ಜಾಗಕ್ಕೆ ಬಿಜೆಪಿ ನಿಯೋಗ ಭೇಟಿ
ಬಿಜೆಪಿ ನಾಯಕರ ಎದುರೇ ವಿಷ ಕುಡಿದು ಆತ್ಮಹತ್ಯೆ ಯತ್ನ
ಬೆಂಗಳೂರು: ಸಚಿವ ಡಿ. ಸುಧಾಕರ್ ವಿರುದ್ಧ ಆಸ್ತಿ ಕಬಳಿಕೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಬಿಜೆಪಿ ಎಂಟ್ರಿ ಆಗಿದೆ. ನೊಂದವರ ಕಷ್ಟ ಕೇಳಿದೆ. ನ್ಯಾಯ ಕೊಡಿಸುವ ಭರವಸೆ ನೀಡಿದೆ. ಮತ್ತೊಂದೆಡೆ ವಿವಾದಿತ ಜಾಗ ಬಿಟ್ಟುಕೊಡಲು ಒಪ್ಪದ ಡಿ.ಸುಧಾಕರ್, ತಮ್ಮ ಕಡೆಯವರನ್ನ ಇನ್ನೂ ಸ್ಥಳದಲ್ಲೇ ಠಿಕಾಣಿ ಹೂಡಿಸಿದ್ದಾರೆ. ಬಿಜೆಪಿ ನಿಯೋಗ ಭೇಟಿ ವೇಳೆ ಸಚಿವರ ಬೆಂಬಲಿಗರು ದೊಡ್ಡ ಹೈಡ್ರಾಮಾವನ್ನೇ ನಡೆಸಿದ್ರು.
ಯೆಸ್.. ಇದು ಯಲಹಂಕದಲ್ಲಿರುವ ವಿವಾದಿತ ಜಾಗದಲ್ಲಿ ನಡೆದ ದೃಶ್ಯಾವಳಿಗಳು. ಸಚಿವ ಡಿ. ಸುಧಾಕರ್ ವಿರುದ್ಧದ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧ ನ್ಯೂಸ್‌ಫಸ್ಟ್ ಸುದ್ದಿ ಬ್ರೇಕ್ ಮಾಡಿದ್ದ ಬಳಿಕ ಮಹತ್ವದ ಬೆಳವಣಿಗೆಗಳು ನಡೆದಿವೆ.

ಯಲಹಂಕದ ಮುನಿಯಮ್ಮ ಮನೆಯ ಮುಂಭಾಗ ಅಕ್ಷರಶಃ ಯುದ್ಧ ಭೂಮಿಯೇ ಆಗಿತ್ತು. ನೊಂದ ಕುಟುಂಬಸ್ಥರನ್ನ ಬಿಜೆಪಿ ನಿಯೋಗ ಭೇಟಿ ಮಾಡಿತ್ತು. ಇದೇ ವೇಳೆ ಜಾಗದಲ್ಲಿ ಠಿಕಾಣಿ ಹೂಡಿದ್ದ ಡಿ. ಸುಧಾಕರ್ ಬೆಂಬಲಿಗರು ಹೈಡ್ರಾಮಾ ನಡೆಸಿದ್ರು. ಈ ಜಾಗ ನಮ್ಮದು ಅಂತ ಪಟ್ಟು ಹಿಡಿದ್ರು. ಈ ಜಾಗ ನಿಮ್ಮದು ಅನ್ನೋಕೆ ಏನು ಆಧಾರ ಇದೆ ಅಂತ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ರು. ಬಳಿಕ ಮುನಿಯಮ್ಮ ಕುಟುಂಬಸ್ಥರು ಶೆಡ್ನಲ್ಲಿದ್ದ ಪಾತ್ರೆ-ಪಗಡಿಗಳನ್ನೆಲ್ಲಾ ಹೊರ ಹಾಕಿದ್ರು.

ತಮ್ಮ ಭೇಟಿಗೆ ಆಗಮಿಸಿದ ಬಿಜೆಪಿ ನಾಯಕರ ಮುಂದೆಯೇ ದೌರ್ಜನ್ಯಕ್ಕೆ ಒಳಗಾದ ಕುಟುಂಬಸ್ಥರು ವಿಷ ಕುಡಿಯಲು ಯತ್ನಿಸಿದ್ರು. ತಮಗೆ ನ್ಯಾಯ ಕೊಡಿಸಿ ಅಂತಾ ಕಣ್ಣೀರಿಟ್ಟರು. ಕೈಯಲ್ಲಿ ವಿಷದ ಬಾಟೆಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಕಣ್ಣೀರು ಹಾಕಿದ್ರು. ಈ ವೇಳೆ ನೊಂದ ಕುಟುಂಬಸ್ಥರ ಕೈನಲ್ಲಿದ್ದ ಬಾಟಲ್ ಕಿತ್ತುಕೊಂಡ ಬಿಜೆಪಿ ನಾಯಕರು, ಕುಟುಂಬಸ್ಥರನ್ನ ಸಮಾಧಾನ ಪಡಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ನಿಯೋಗ ಭೇಟಿ ನೀಡಿ ನೊಂದವರಿಗೆ ಧೈರ್ಯ ತುಂಬಿದ್ದಾರೆ. ಇಷ್ಟೆಲ್ಲದರ ನಡುವೆ ರಾಜ್ಯ ಸರ್ಕಾರ ಸಚಿವ ಡಿ. ಸುಧಾಕರ್ ವಿರುದ್ಧ ಕ್ರಮ ಕೈಗೊಂಡು ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸುತ್ತಾ ಅಂತ ಕಾದುನೊಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ