ವಿಪಕ್ಷ ನಾಯಕ ಆಯ್ಕೆಗೆ ವೀಕ್ಷಕರನ್ನು ನೇಮಿಸಿದ ಬಿಜೆಪಿ ಹೈಕಮಾಂಡ್
ಜೆ.ಪಿ ನಡ್ಡಾ, ಗೃಹಸಚಿವ ಅಮಿತ್ ಶಾ ಜೊತೆ BS ಯಡಿಯೂರಪ್ಪ ಸಭೆ
ವಿರೋಧ ಪಕ್ಷದ ನಾಯಕ ಯಾರು ಎನ್ನುವುದು ಇನ್ನೂ ಬಿಜೆಪಿಯಲ್ಲಿ ಪ್ರಶ್ನೆ
ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ ಆಗುತ್ತಿದೆ. ಆದ್ರೆ ಸರ್ಕಾರವನ್ನ ಕಟ್ಟಿ ಹಾಕಲು ಬಿಜೆಪಿಗೆ ಇನ್ನೂ ಸಾರಥಿ ಸಿಕ್ಕಿಲ್ಲ. ವಿಪಕ್ಷ ನಾಯಕನ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಖುದ್ದು ಬಿಎಸ್ವೈ ದೆಹಲಿಗೆ ತರಳಿದ್ರೂ ವಿಪಕ್ಷ ನಾಯಕನನ್ನ ಆಯ್ಕೆ ಮಾಡಲಾಗದೇ, ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನ ಕಳಿಸಲು ಮುಂದಾಗಿದೆ.
ಇವತ್ತು ಹೊಸ ಸರ್ಕಾರದ ಮೊದಲ ಅಧಿವೇಶನ. ಗ್ಯಾರಂಟಿ ಗೊಂದಲಗಳು, ವಿವಾದಾತ್ಮಕ ಕಾಯ್ದೆಗಳ ರದ್ದು ವಿಷಯಗಳ ಬಗ್ಗೆ ಸರ್ಕಾರ ಹಾಗೂ ವಿಪಕ್ಷ ನಡುವೆ ಜಟಾಪಟಿಗೆ ಸಾಕ್ಷಿಯಾಗಲಿದೆ. ಆದ್ರೆ, ವಿಪಕ್ಷ ನಾಯಕ ಯಾರು ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಿಜೆಪಿ ತಲುಪಿದೆ.
ಸರಣಿ ಸಭೆ ಮಾಡಿದ್ರೂ ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ
ಇವತ್ತು ಅಧಿವೇಶನ ಇರೋದ್ರಿಂದ ವಿಪಕ್ಷ ನಾಯಕನ ಆಯ್ಕೆಗಾಗಿ ಬಿಎಸ್ವೈ ನಿನ್ನೆಯೇ ದೆಹಲಿಗೆ ತೆರಳಿದ್ರು. ತಡರಾತ್ರಿ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಸಭೆ ಮಾಡಿದ್ರು. ಆದ್ರೆ ರಾತ್ರಿವರೆಗೆ ಸಭೆ ನಡೆಸಿದ್ರೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಈ ಕಗ್ಗಂಟಿನಿಂದ ಪಾರಾಗೋಕೆ ಹೈಕಮಾಂಡ್ ವೀಕ್ಷಕರ ಮೊರೆ ಹೋಗಿದೆ.
ಬಿಜೆಪಿ ಸಾರಥಿ ಕಗ್ಗಂಟು!
ಇನ್ನು ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್ವೈ, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ವೀಕ್ಷಕರು ಮಾಹಿತಿ ಸಂಗ್ರಹಿಸಲಿದ್ದಾರೆ. ಶಾಸಕರ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತೆ. ಇವತ್ತು ವಿರೋಧ ಪಕ್ಷದ ನಾಯಕ ಇರಲ್ಲ ಅಂತಾ ತಿಳಿಸಿದ್ರು.
ಸರ್ಕಾರ ರಚನೆಯಾಗಿ 1 ತಿಂಗಳಾಗ್ತಾ ಬಂದ್ರೂ ವಿಪಕ್ಷ ನಾಯಕ ಯಾರು ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ. ಇವತ್ತಿನಿಂದ ಅಧಿವೇಶನ ಆರಂಭವಾಗ್ತಿದ್ರೂ ತನ್ನ ಸದನ ನಾಯಕನನ್ನ ಆಯ್ಕೆ ಮಾಡೋಕೆ ಬಿಜೆಪಿ ಇನ್ನೂ ಸಾಧ್ಯವಾಗಿಲ್ಲ. ಇಂಥ ಸ್ಥಿತಿಗೆ ತಲುಪಿರೋದು ನಿಜಕ್ಕೂ ಬಿಜೆಪಿಗೆ ಮುಜುಗರ ತಂದೊಡ್ಡಿರೋದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ