/newsfirstlive-kannada/media/post_attachments/wp-content/uploads/2024/03/YATNAL.jpg)
ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ಗೆ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಶಿಸ್ತು ಸಮಿತಿಯ ಸೆಕ್ರೆಟರಿ ಓಂ ಪಾಟಕ್ ಅವರು, ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಯಾಕೆ ಶೋಕಾಸ್ ನೋಟಿಸ್​..?
ರಾಜ್ಯಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ಯತ್ನಾಳ್ ನಿರಂತರ ವಾಗ್ದಾಳಿ ನಡೆಸ್ತಿದ್ದರು. ಇದೇ ಕಾರಣಕ್ಕೆ ನೋಟಿಸ್ ನೀಡಿದ್ದಾರೆ. ನೀವು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುವುದು, ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ವಿಷಯಗಳ ಬಗ್ಗೆ ಪಕ್ಷದ ನಿಲುವಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಿರಿ. ನಿಮ್ಮ ನಿಲುವುಗಳು ಮಾಧ್ಯಮಗಳಲ್ಲಿ ಮತ್ತು ವಿವಿಧ ಪಕ್ಷದ ವೇದಿಕೆಯಲ್ಲಿ ಬಹಿರಂಗವಾಗಿದೆ. ಈ ಹಿಂದೆ ಹಲವು ಬಾರಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ನೀವು ಸದ್ವರ್ತನೆಯ ಭರವಸೆ ನೀಡಿದ್ದರೂ ಅಶಿಸ್ತಿನಿಂದ ನಡೆದುಕೊಳ್ತಿರೋದು ಆತಂಕಕಾರಿ ಸಂಗತಿ.
ಇದನ್ನೂ ಓದಿ: ಬೃಹತ್ ಸಮಾವೇಶ; ₹150 ಕೋಟಿ ವೆಚ್ಚದ ಕ್ರಿಕೆಟ್​ ಸ್ಟೇಡಿಯಂಗೆ ಇಂದು CM ಶಂಕುಸ್ಥಾಪನೆ
ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯ ಸೆವೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಮೃದುವಾದ ದೃಷ್ಟಿಕೋನ ತೆಗೆದುಕೊಂಡಿತು. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪಕ್ಷದ ಅಧಿಕೃತ ನಿಲುವನ್ನು ಧಿಕ್ಕರಿಸುವುದು. ಪಕ್ಷದ ನಾಯಕರ ವಿರುದ್ಧ ನೀವು ಮಾಡಿದ ಸುಳ್ಳು ಮತ್ತು ಆಂತರಿಕ ಆರೋಪಗಳು, ಪಕ್ಷದ ನಿಯಮಗಳ XXVನೇ ವಿಧಿಯಲ್ಲಿ ವ್ಯಾಖ್ಯಾನಿಸಿದಂತೆ ಪಕ್ಷದ ಶಿಸ್ತಿನ ಗಂಭೀರ ಉಲ್ಲಂಘನೆಯಾಗಿದೆ. ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ದಯವಿಟ್ಟು ಕಾರಣ ಕೊಡಿ. ಈ ಸೂಚನೆಯ ಸ್ವಿಕೃತಿ ಸ್ವೀಕರಿಸಿದ ದಿನಗಳಲ್ಲಿ ಉತ್ತರ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us