newsfirstkannada.com

BREAKING: ಲೋಕಸಭಾ ಚುನಾವಣೆಗೆ BJP-JDS​ ಮೈತ್ರಿ ಖಚಿತ; ಬಿ.ಎಸ್. ಯಡಿಯೂರಪ್ಪ ಮಹತ್ವದ ಘೋಷಣೆ

Share :

08-09-2023

    ಬಿಜೆಪಿ-ಜೆಡಿಎಸ್‌ ಮೈತ್ರಿ ಖಚಿತ ಪಡಿಸಿದ ಬಿ.ಎಸ್. ಯಡಿಯೂರಪ್ಪ

    ದೋಸ್ತಿ ಮಾತುಕತೆ ಬಗ್ಗೆ ಮೊದಲು ವರದಿ ಮಾಡಿದ್ದೇ ನ್ಯೂಸ್ ಫಸ್ಟ್

    4 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಗೆ ಬಿಜೆಪಿ-ಜೆಡಿಎಸ್‌ ಸಹಮತ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಪಕ್ಕಾ ಆಗಿದೆ. ಈ ಮೈತ್ರಿಯನ್ನ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರೇ ಖಚಿತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷ ತಂದಿದೆ. ಜೆಡಿಎಸ್‌ಗೆ ನಾಲ್ಕು ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡಲು ಕೇಂದ್ರ ಗೃಹಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮಗೆ ಶಕ್ತಿ ಬಂದಿದೆ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್‌ ಈ ಮೈತ್ರಿ ರಾಜಕೀಯದ ಬಗ್ಗೆ ಮೊದಲು ವರದಿ ಮಾಡಿದ್ದೇ ನ್ಯೂಸ್ ಫಸ್ಟ್‌ ಚಾನೆಲ್‌. ನಿನ್ನೆ ಬೆಳಗ್ಗೆ 9 ಗಂಟೆಗೆ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ ಈ ಸುದ್ದಿ ಬ್ರೇಕ್ ಆಗಿತ್ತು. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ರಹಸ್ಯವಾಗಿ ಭೇಟಿಯಾಗಿದ್ದಾರೆ. ಅಮಿತ್ ಶಾ, ದೇವೇಗೌಡರ ಮಾತುಕತೆಯಲ್ಲಿ ಮೈತ್ರಿಯ ಮಾತುಕತೆ ನಡೆದಿದೆ ಅನ್ನೋ ವರದಿಯನ್ನು ನ್ಯೂಸ್‌ ಫಸ್ಟ್ ಚಾನೆಲ್ ಮಾಡಿತ್ತು. ನ್ಯೂಸ್‌ ಫಸ್ಟ್ ಮೊದಲು ವರದಿ ಮಾಡಿದ ಸುದ್ದಿಯನ್ನ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವರು ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರನ್ನ ರಹಸ್ಯವಾಗಿ ಭೇಟಿಯಾದ ಅಮಿತ್ ಶಾ; ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾನಾ? ಏನೇನ್‌ ಮಾತುಕತೆ ಆಯ್ತು?

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರೋ ಯಡಿಯೂರಪ್ಪ ಇಂದು ಬಿಜೆಪಿ, ಜೆಡಿಎಸ್‌ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಇದರ ಜೊತೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 4 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಸಹಮತವಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಲೋಕಸಭಾ ಚುನಾವಣೆಗೆ BJP-JDS​ ಮೈತ್ರಿ ಖಚಿತ; ಬಿ.ಎಸ್. ಯಡಿಯೂರಪ್ಪ ಮಹತ್ವದ ಘೋಷಣೆ

https://newsfirstlive.com/wp-content/uploads/2023/09/BSY-On-JDS.jpg

Load More