newsfirstkannada.com

ಸ್ಪೀಕರ್ ವಿರುದ್ಧ ಹೋರಾಡಲು ಒಂದಾದ ಬಿಜೆಪಿ, ಜೆಡಿಎಸ್; ಸರ್ಕಾರದ ಮೇಲೆ ರಾಜ್ಯಪಾಲರಿಗೆ ದೂರು ಸಲ್ಲಿಕೆ

Share :

20-07-2023

    ರಾಜಕೀಯ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳ ಬಳಕೆ

    ಸಿದ್ದು ಸರ್ಕಾರ ಕ್ಷಮೆ ಕೇಳಲು ಪಟ್ಟು ಹಿಡಿದ ಬಿಜೆಪಿ, JDS ನಾಯಕರು

    ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ಸ್ಪೀಕರ್ ವಿರುದ್ಧ ದೂರು ಸಲ್ಲಿಕೆ

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿರುವುದು ಅಪರಾಧ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಟ್ಟು ಹಿಡಿದಿದೆ. ಕಾಂಗ್ರೆಸ್‌ ಸರ್ವಾಧಿಕಾರ ಮಾಡುತ್ತಿದೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಪ್ರಶ್ನಿಸುವ ಹಕ್ಕಿದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿರುವುದು, ಅಮಾನತ್ತು ಮಾಡಿರುವುದು ಖಂಡನೀಯ ಎಂದು ಜೆಡಿಎಸ್ ಹಾಗೂ ಬಿಜೆಪಿ ಶಾಸಕರುಗಳು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸ್ಪೀಕರ್ ವಿರುದ್ಧ ದೂರನ್ನು ಸಲ್ಲಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ನಿನ್ನೆ ಭಾರೀ ಹೈಡ್ರಾಮಾ ಸೃಷ್ಟಿಸಿದ್ರು. ಅಧಿವೇಶನದಲ್ಲಿ ಡೆಫ್ಯುಟಿ ಸ್ಪೀಕರ್‌ ಮೇಲೆ ಪೇಪರ್ ಹರಿದು ಹಾಕಿ ಅಗೌರವ ತೋರಿದ್ರು. ಹೀಗೆ ವಿಧಾನಸಭೆಯಲ್ಲಿ ಅತಿರೇಕದ ವರ್ತನೆ ತೋರಿದ 10 ಮಂದಿ ಬಿಜೆಪಿ ಶಾಸಕರಿಗೆ ಸದನದಿಂದ ಅಮಾನತು ಶಿಕ್ಷೆಯಾಗಿತ್ತು. ಹೀಗೆ ಅಮಾನತಾದ್ರೂ ಸದನದೊಳಗೆ ಪ್ರವೇಶಿಸಲು ಯತ್ನಿಸಿದ್ದ ಬಿಜೆಪಿ ಶಾಸಕರನ್ನ ಹೊತ್ತು ಹೊರ ಹಾಕಲಾಗಿತ್ತು.. ಇದೀಗ ಸಸ್ಪೆಂಡ್ ಆದೇಶ ಹೊರಡಿಸಿದ್ದ ಸ್ಪೀಕರ್‌ ಯು.ಟಿ ಖಾದರ್ ನಡೆ ಖಂಡಿಸಿ ಕೇಸರಿ ಪಡೆ ಇವತ್ತು ಬೀದಿಗಿಳಿದಿತ್ತು.

ಇವತ್ತು ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯರೆಲ್ಲಾ ಸದನವನ್ನ ತೊರೆದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ರು. ವಿಧಾನಸಭೆಯಿಂದ 10 ಶಾಸಕರನ್ನ ಅಮಾನತು ಮಾಡಿದ ಸ್ಪೀಕರ್ ನಡೆ ವಿರುದ್ಧ ಧಿಕ್ಕಾರ ಕೂಗಿದ್ರು. ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡ್ತಿದೆ ಅಂತಾ ಆಕ್ರೋಶ ಹೊರ ಹಾಕಿದ್ರು. ಬಳಿಕ ಬಿಜೆಪಿ ನಾಯಕರೆಲ್ಲಾ ಒಂದಾಗಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಲೇ ವಿಧಾನಸೌಧದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿದ್ರು.. ಈ ವೇಳೆ ಕೇಸರಿ ಕಲಿಗಳ ಕಿಚ್ಚು ಮತ್ತಷ್ಟು ಹೆಚ್ಚಾಗಿತ್ತು. ಕಮಲ ನಾಯಕರೆಲ್ಲಾ ರಸ್ತೆ ಮೂಲಕ ತೆರಳಿ ಸ್ಪೀಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ಗೆ ದೂರು ಸಲ್ಲಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೀಕರ್ ವಿರುದ್ಧ ಹೋರಾಡಲು ಒಂದಾದ ಬಿಜೆಪಿ, ಜೆಡಿಎಸ್; ಸರ್ಕಾರದ ಮೇಲೆ ರಾಜ್ಯಪಾಲರಿಗೆ ದೂರು ಸಲ್ಲಿಕೆ

https://newsfirstlive.com/wp-content/uploads/2023/07/BJP-JDS-in-Governor-Office.jpg

Load More