newsfirstkannada.com

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶುರುವಾಗಿದೆ ಬಹಿರಂಗ ಫೈಟ್.. ಕಮಲದ ಸಮರ್ಥ ನಾಯಕ ಯಾರು?

Share :

28-06-2023

  ‘ದಲಿತರು BJP ರಾಜ್ಯಾಧ್ಯಕ್ಷ ಆಗಬಾರದ, ನಮಗೇನು ಕಡಿಮೆಯಿದೆ’

  ‘ಪಕ್ಷ ಕಟ್ಟಲು ನಾನು ದೈಹಿಕವಾಗಿ, ಮಾನಸಿಕವಾಗಿ ಸದೃಢನಾಗಿದ್ದೇನೆ’

  ‘ನನಗೆ ರಾಜ್ಯಾಧ್ಯಕ್ಷ ಕೊಡಿಯೆಂದು ಹಿರಿಯ ನಾಯಕರಲ್ಲಿ ಕೇಳಿದ್ದೇನೆ’

ಸೋತು ಸುಣ್ಣವಾಗಿರೋ ರಾಜ್ಯ ಕಮಲ ಪಾಳಯಕ್ಕೆ ಸಮರ್ಥ ಸೇನಾನಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ವಿಪಕ್ಷ ನಾಯಕನ ಆಯ್ಕೆ, ರಾಜ್ಯಾಧ್ಯಕ್ಷರ ನೇಮಕ ಕಮಲಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಫೈಟ್ ಕೂಡ ಜೋರಾಗಿ ನಡೆಯುತ್ತಿದೆ. ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೂಡ ಟವಲ್ ಹಾಕಿದ್ದಾರೆ.

ಮತಯುದ್ಧದಲ್ಲಿ ಹೀನಾಯ ಸೋಲು ಕಂಡ ಕೇಸರಿ ಸೇನೆಗೆ ಸೈನಿಕನೇ ಇಲ್ಲದಂತಾಗಿದೆ. ಚುನಾವಣಾ ಸಾಗರದಲ್ಲಿ ಮುಗುಚಿ ಬಿದ್ದ ಕಮಲ ಪಾಳಯಕ್ಕೆ ನಾವಿಕನೇ ಇಲ್ಲದಂತಾಗಿದೆ. ವಿಪಕ್ಷ ನಾಯಕ ಯಾರು ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ನಾಯಕರ ಮಧ್ಯೆ ಫೈಟ್ ಕೂಡ ಜೋರಾಗಿದೆ.

ಕರುನಾಡ ಕದನದಲ್ಲಿ ಧೂಳೀಪಟವಾಗಿದ್ದ ಬಿಜೆಪಿ ಇದೀಗ ಮತ್ತೆ ಪಕ್ಷ ಸಂಘಟನೆಯ ಹಾದಿ ತುಳಿದಿದೆ. ಪಕ್ಷದಲ್ಲಿ ಭಾರೀ ಬದಲಾವಣೆ ತರಲು ಹೈಕಮಾಂಡ್ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ತಪ್ಪಿ ಹೋಗಿರೋ ಕೇಸರಿ ಹಿಡಿತವನ್ನ ಮತ್ತೆ ಬಿಗಿಗೊಳಿಸಲು ಸೇನಾನಿಗಾಗಿ ಹುಡುಕಾಟ ನಡೆಸಿದೆ. ಆ ಸೇನಾನಿ ನಾನೇ ಅಂತಾ ರಾಜ್ಯ ಕಮಲ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.

ಅಮಿತ್ ಶಾ ಕರೆ ಬೆನ್ನಲ್ಲೇ ಮತ್ತೆ ಪುಟಿದೆದ್ದ ಮಾಜಿ ಸಚಿವ ವಿ. ಸೋಮಣ್ಣ, ನಾನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಅಂತಾ ಕೇಳಿದ್ದೇನೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ದಲಿತ ಸಮುದಾಯದ ನಾಯಕರು ಕಣ್ಣಿಟ್ಟಿದ್ದು ನಾನು ಕೂಡ ಆಕಾಂಕ್ಷಿ ಅಂತಾ ರಮೇಶ್ ಜಿಗಜಿಣಗಿ ತಮ್ಮ ಹೆಸರನ್ನ ತೇಲಿ ಬಿಟ್ಟಿದ್ದಾರೆ. ಈ ಬೆನ್ನಲ್ಲೇ ನಿನ್ನೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

‘ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತೆ ಪತ್ರ’

ಈಗಾಗಲೇ ನಾನು ರಾಷ್ಟ್ರ ನಾಯಕರಲ್ಲಿ ಮನವಿ ಮಾಡಿದ್ದೇನೆ. ಬಿ.ಎಲ್​ ಸಂತೋಷ, ಸಚಿವ ಪ್ರಹ್ಲಾದ ಜೋಶಿ ಬಳಿಯು ಈ ಬಗ್ಗೆ ಹೇಳಿದ್ದೇನೆ.

ವಿ. ಸೋಮಣ್ಣ, ಮಾಜಿ ಸಚಿವ

‘ನಾನು ರಾಜ್ಯಾಧ್ಯಕ್ಷನಾಗುವೆ’

ಪ್ರತಿಯೊಬ್ಬರಿಗೂ ರಾಜ್ಯಾಧ್ಯಕ್ಷ ಆಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ದಲಿತರು ಯಾಕೆ ಆಗಬಾರದು. ಏನ್ ಕಡಿಮೆ ಇದೆ. ನಾವು ರಾಜ್ಯಾಧ್ಯಕ್ಷ ಆಗಬಾರದೇನು?.

ರಮೇಶ್ ಜಿಗಜಿಣಗಿ, ಸಂಸದ

‘ನನಗೂ ಸಾಮರ್ಥ್ಯವಿದೆ’

ನಾನು ಏನು ಕೇಳಲ್ಲ. ನನಗೂ ಸಾಮರ್ಥ್ಯವಿದೆ. ಜನರ ಜೊತೆ ನಿಕಟ ಸಂಬಂಧ ಹೊಂದಿದ್ದೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಭೇಟಿ ಮಾಡಿದ್ದೇನೆ. ತಾಲೂಕುಗಳನ್ನು ಸಭೆ ಮಾಡಿದ್ದೇನೆ, ಪಕ್ಷ ಕಟ್ಟಲು ನಾನು ಕೂಡ ದೈಹಿಕವಾಗಿ, ಮಾನಸಿಕವಾಗಿ ಸದೃಢನಾಗಿದ್ದೇನೆ. ಪಕ್ಷ ಕಟ್ಟಲು ಎಲ್ಲರಿಗೂ ಅವಕಾಶವಿದೆ.

ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ

ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಮಲ ನಾಯಕರ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ರಾಜ್ಯಾಧ್ಯಕ್ಷ ಸ್ಥಾನವನ್ನ ತಮಗೆ ನೀಡುವಂತೆ ಬಹಿರಂಗವಾಗಿ ಲಾಭಿ ಶುರುಮಾಡಿದ್ದಾರೆ. ತಲೆಗೊಬ್ಬ ನಾಯಕರು ಹೀಗೆ ಮತನಾಡ್ತಿರೋದು ಪಕ್ಷಕ್ಕೆ ಮುಜುಗರ ತಂದೊಡ್ಡಿದೆ. ಕೂಡಲೇ ಎಚ್ಚೆತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊನೆಗೂ ರಂಗಪ್ರವೇಶ ಮಾಡಿದ್ದಾರೆ. ನಾಯಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ನಾಯಕರಿಗೆ ಕಟೀಲ್ ಸೂಚನೆ

 • ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ಬೇಡ
 • ನಾಯಕರ ಹೇಳಿಕೆಗಳು ಪಕ್ಷದ ಘನತೆಗೆ ಧಕ್ಕೆ ತರಬಾರದು
 • ಪಕ್ಷದ ಕೇಂದ್ರ ಸಂಸದೀಯ ಮಂಡಳಿ ನಿರ್ಧಾರ ಪ್ರಕಟಿಸುತ್ತೆ
 • ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ
 • ಪಕ್ಷದ ಸಭೆಗಳಲ್ಲಿ ಈ ವಿಷಯವಾಗಿ ಚರ್ಚಿಸೋದು ಸರಿಯಲ್ಲ
 • ಆಂತರಿಕ ವಿಚಾರವನ್ನು ಮಾಧ್ಯಮದ ಮುಂದೆ ಹೇಳಬಾರದು
 • ಪತ್ರಿಕಾ ಪ್ರಕಟಣೆ ಹೊರಡಿಸಿ ರಾಜ್ಯಾಧ್ಯಕ್ಷ ಕಟೀಲ್ ಸೂಚನೆ

ಬಿಜೆಪಿಯಲ್ಲಿನ ಈ ಅಂತರ್ಯುದ್ಧಕ್ಕೆ ವಿರಾಮ ನೀಡಿ ಲೋಕ ಕದನಕ್ಕೆ ಸಜ್ಜಾಗಬೇಕಿದೆ. ಆದಷ್ಟು ಬೇಗ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕ ಯಾರೆಂದು ಘೋಷಿಸಿಬೇಕು. ಅಲ್ಲದೆ ರಾಜ್ಯಾಧ್ಯಕ್ಷರ ನೇಮಕ ಮಾಡಿ ಲೋಕಾ ಅಖಾಡಕ್ಕೆ ರೆಡಿಯಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶುರುವಾಗಿದೆ ಬಹಿರಂಗ ಫೈಟ್.. ಕಮಲದ ಸಮರ್ಥ ನಾಯಕ ಯಾರು?

https://newsfirstlive.com/wp-content/uploads/2023/06/BJP_STATE_PRESIDENT.jpg

Load More