newsfirstkannada.com

ಮತ್ತೊಂದು ವಿವಾದ ಮೈಮೇಲೆ ಎಳ್ಕೊಂಡ CT ರವಿ; JDS ಕಾರ್ಯಕರ್ತರ ಕೆಣಕಿಬಿಟ್ರಾ ಬಿಜೆಪಿ ನಾಯಕ..!?

Share :

25-02-2023

  ದೇವೇಗೌಡರ ವಿರುದ್ಧ ನಾಲಿಗೆ ಹರಿಬಿಟ್ಟ ಸಿಟಿ ರವಿ

  ಮಂಡ್ಯದಲ್ಲಿ ಜೆಡಿಎಸ್​ ಕಾರ್ಯಕರ್ತರಿಂದ ಪ್ರತಿಭಟನೆ

  ‘ಬಾಲ ಬಿಚ್ಚಿದ್ರೆ ಚಡ್ಡಿ-ಬಿಚ್ಚಿ ಕಳಸ್ತೀವಿ’ ಎಂದು ಎಚ್ಚರಿಕೆ

ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು ವಿವಾದ ಸೃಷ್ಟಿಸೋದು ಒಂತರಾ ಖಯಾಲಿಯಾದಂಗಾಗಿದೆ. ಬಾಡೂಟದ ಬಡಿದಾಟ ಚಾಲ್ತಿಯಿರುವಾಗಲೇ ಸಿ.ಟಿ ರವಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಮಾಂಸದೂಟ ಕಾಂಗ್ರೆಸ್ ಜೊತೆಗಾದ್ರೆ ಈಗ ದೇವೇಗೌಡರ ಬಗ್ಗೆ ಮಾತಾಡಿ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸದ್ಯ ಇದೇ ಮಾತು. ಶಾಸಕ ಸಿಟಿ ರವಿ ಹೇಳಿದ ಇದೇ ಮಾತು ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆ. ಇದೇ ಮಂಡ್ಯದಲ್ಲಿ ನಿಂತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಬಗ್ಗೆ ಮಾತನಾಡಿದ ಸಿಟಿ ರವಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂಬ ಹೆಚ್.ಡಿ.ಡಿ ಹೇಳಿಕೆ ಪ್ರಸ್ತಾಪಿಸಿ, ಮೊನ್ನೆ ಮಂಡ್ಯದ ಯುವ ಸಮಾವೇಶದಲ್ಲಿ ಸಿ.ಟಿ.ರವಿ, ದೇವೇಗೌಡರಿಗೆ ಕುಟುಕಿದ್ದರು. ಈ ಕುರಿತು ಸಿ.ಟಿ.ರವಿ ಮುಸ್ಲಿಮರಾಗಿ ಹುಟ್ಟುವುದಿದ್ದರೆ ತಡ ಮಾಡುವುದೇಕೆ ಈಗಲೇ ಹೋಗಲಿ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ. ಸದ್ಯ ಇದರ ವಿರುದ್ಧವೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಬಾಲ ಬಿಚ್ಚಿದ್ರೆ ಅಂಗಿ-ಚಡ್ಡಿ ಬಿಚ್ಕೋತ್ತಾರೆ

ದೇವೇಗೌಡರ ಬಗ್ಗೆ ಸಿ.ಟಿ ರವಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಹಾಗೂ ಹೆಚ್ ಡಿ ದೇವೇಗೌಡ ಸಾವನ್ನ ಬಯಸಿದ್ದಾರೆಂದು ಆರೋಪಿಸಿ ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಿ.ಟಿ.ರವಿ ಒಬ್ಬ ರಾಜಕೀಯ ವಿದೂಷಕ, ಬೃಹನ್ನಳೆ. ಸಿ.ಟಿ.ರವಿ ಸಿ.ಟಿ.ರವಿ ದತ್ತ ಮಾಲೆ ಹಿಡಿದುಕೊಂಡು ಚಿಕ್ಕಮಗಳೂರಲ್ಲಿ ಆಟವಾಡಬೇಕು. ಹೊರತು ಮಂಡ್ಯದಲ್ಲಿ ಬಾಲ ಬಿಚ್ಚಿದ್ರೆ ಅಂಗಿ ಚೆಡ್ಡಿ ಬಿಚ್ಕೋತ್ತಾರೆ. ದೇವೇಗೌಡರಿಗೆ ಸಿ.ಟಿ.ರವಿ ಕ್ಷಮೆಯಾಚಿಸಲಿ ಅಂತ ಒತ್ತಾಯಿಸಿದ್ದಾರೆ.

ಒಟ್ಟಾರೆ ಜೆಡಿಎಸ್ ವರಿಷ್ಟ ಹೆಚ್ಡಿ ದೇವೇಗೌಡ ವಿರುದ್ಧ ಮಾತನಾಡಿ ಸಿಟಿ ರವಿ ದಳ ಕಾರ್ಯಕರ್ತರ ಕೆಂಗಣ್ಣಿಗೆ ಸಿಲುಕಿದ್ದಾರೆ. ಈಗಾಗಲೇ ಬಾಡೂಟದ ಬಡಿದಾಟವೆಬ್ಬಿಸಿರುವ ನಾಯಕ ಈಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಯಾರೇ ಆದರೂ ಹಿರಿಯರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ವಿವಾದ ಮೈಮೇಲೆ ಎಳ್ಕೊಂಡ CT ರವಿ; JDS ಕಾರ್ಯಕರ್ತರ ಕೆಣಕಿಬಿಟ್ರಾ ಬಿಜೆಪಿ ನಾಯಕ..!?

https://newsfirstlive.com/wp-content/uploads/2023/02/CT_RAVI.jpg

Load More