ಖಾಸಗಿ ಕಂಪನಿ MD ಫಣೀಂದ್ರ ಸುಬ್ರಹ್ಮಣ್ಯ ಹತ್ಯೆ ಬಗ್ಗೆ ಸಂಶಯ
ರಾಷ್ಟ್ರವಾದಿಗಳ ಸರಣಿ ಸಾವಿನ ಹಿಂದೆ ಅನುಮಾನ ಇದೆ ಎಂದ ರವಿ
ಕರ್ನಾಟಕ ಸರ್ಕಾರದ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?
ಬೆಂಗಳೂರು: ಕರ್ನಾಟಕದಲ್ಲಿ ಯಾಕೆ ರಾಷ್ಟ್ರೀಯವಾದಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ? ಇದನ್ನು ಗಮನಿಸಿದ್ರೆ ಇದರ ಹಿಂದೆ ಪಿತೂರಿ ಇದೆ ಎಂಬ ಸಂಶಯ ಮೂಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಎಂಡಿ ಪಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಓ ವಿನುಕುಮಾರ್ ಅವರ ಬರ್ಬರ ಹತ್ಯೆ ನಡೆದಿದೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಸರಣಿ ಹತ್ಯೆಗೆಗಳು ಸಂಶಯಾಸ್ಪದವಾಗಿದೆ ಎಂದಿದ್ದಾರೆ.
‘‘ಕರ್ನಾಟಕದಲ್ಲಿ ಸರಣಿ ಕೊಲೆಗಳು ಮುಂದುವರಿಯುತ್ತಿರೋದು ದುರಾದೃಷ್ಟಕರ. ನವ ಉದ್ಯಮಿಯಾಗಿ, ಒಬ್ಬ ರಾಷ್ಟ್ರೀಯ ವಿಚಾರವಾದಿಯಾಗಿ ಗುರುತಿಸಿಕೊಂಡಿದ್ದಂತಹ ಫಣೀಂದ್ರ ಅವರನ್ನು ಹತ್ಯೆ ಮಾಡಿದ್ದಾರೆ. ಜೊತೆಗೆ ವಿನುಕುಮಾರ್ ಅವರನ್ನೂ ಹತ್ಯೆ ಮಾಡಿದ್ದಾರೆ. ರಾಷ್ಟ್ರೀಯ ವಿಚಾರ, ಹಿಂದುತ್ವದ ಜೊತೆಗೆ ಇದ್ದವರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ. ಈ ಸರಣಿ ಕೊಲೆಗಳ ಹಿನ್ನೆಲೆ ನೋಡಿದ್ರೆ ನನಗೆ ಸಂಶಯ ಬರುತ್ತಿದೆ. ಕೊಲೆಗಡುಕರು ಯೋಜನೆಗಳನ್ನು ಬೇರೆ ಬೇರೆ ರೀತಿಯಲ್ಲಿ ರೂಪಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ ಎಂಬ ಅನುಮಾನ ಬರುತ್ತಿದೆ’’. ಸಿಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೀತಿರೋದು ದುರಾದೃಷ್ಟಕರ. ನಿನ್ನೆ ಫಣೀಂದ್ರ ಮತ್ತು ವಿನು ಕುಮಾರ್ ಅವರ ಹತ್ಯೆ ಮಾಡಲಾಗಿದೆ. ರಾಷ್ಟ್ರೀಯ ಚಿಂತನೆಯಲ್ಲಿರುವವರ ಸರಣಿ ಸಾವಿನಿಂದ ಸಂಶಯಗಳು ಬಂದಿವೆ. ಸರ್ಕಾರ ಸತ್ತಿದೆಯೋ? ಬದುಕಿದೆಯೋ ಎಂಬ ಅನುಮಾನ ಬರ್ತಿದೆ. ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಕ್ರಮ ಅನುಸರಿಸಬೇಕಿತ್ತು. ದುರ್ಬಲತೆ ತೋರ್ತಿದ್ದು, ಭಯವಿಲ್ಲದೆ ಆರೋಪಿಗಳು ಓಡಾಡುತ್ತಿದ್ದಾರೆ. ಮೇಲ್ನೋಟಕ್ಕೆ ಈ ಹತ್ಯೆಗಳನ್ನ ನೋಡಿದ್ರೆ ವೈಯಕ್ತಿಕ ಅಂತ ಅನಿಸ್ತಿದೆ. ಆದ್ರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಯಲ್ಲಿ ಗುರುತಿಸಿಕೊಂಡ ಜನ. ಸರಣಿ ಹತ್ಯೆಗಳ ಹಿಂದೆ ಪಿತೂರ ಇದೆಯಾ ಎಂಬ ಅನುಮಾನ ಕಾಡ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಡಬಲ್ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್; ಕೊಲೆ ಮಾಡಿದ ಲವ್ವಿಡವ್ವಿ ಕಾರಣ ಬಿಚ್ಚಿಟ್ಟ ಜೋಕರ್ ಫಿಲಿಕ್ಸ್’
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ