ಬಿಜೆಪಿಗರಿಗೆ ಇಂತಹ ದುಸ್ಥಿತಿ ಬರಬಾರದು ಎಂದಿದ್ದ ಕಾಂಗ್ರೆಸ್
ಕಾಂಗ್ರೆಸ್‌ಗೆ ಜನ ಅವರಿಗೆ ಅಧಿಕಾರ ಕೊಟ್ಟಿದ್ದು ಕೆಲಸ ಮಾಡೋಕೆ
‘ಪ್ರತಿದಿನ ಮರದ ಮೇಲೆ ಕುಳಿತು ಕಾಕಾ ಅನ್ನೋದಕ್ಕೆ ಆಗಲ್ಲ’
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ್ರು. ಈ ವೇಳೆ ಬಿಜೆಪಿ ನಾಯಕರು ಬ್ಯಾರಿಕೇಡ್ ಬಳಿ ನಿಂತು ಕೈ ಬೀಸಿದ್ದು ಭಾರೀ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಗರಿಗೆ ಇಂತಹ ದುಸ್ಥಿತಿ ಬರಬಾರದು ಎಂದು ವ್ಯಂಗ್ಯವಾಡಿದ್ದಾರೆ. ಕೈ ನಾಯಕರ ಈ ಮಾತುಗಳು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೋಡಲು ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಚಿವರು; ಕಾಂಗ್ರೆಸ್ ಅಪಹಾಸ್ಯ!
ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ನಾಯಕರು ಬೀದಿಗೆ ಬಂದಿಲ್ಲ. 2024ರ ಲೋಕಸಭಾ ಚುನಾವಣೆ ಬಳಿಕ ಯಾರು ಬೀದಿಗೆ ಬರ್ತಾರೆಂದು ತೋರಿಸ್ತೀವಿ. ಇಂದು ಇಸ್ರೋದಲ್ಲಿ ಮೋದಿ ಮಾಡಿದ ಭಾಷಣವನ್ನು ಎಲ್ಲರೂ ಮೆಚ್ಚಿದ್ದಾರೆ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದಿದ್ದಾರೆ.
ಇನ್ನು, ಕಾಂಗ್ರೆಸ್ ನಾಯಕರ ಆರೋಪ ಸರಿಯಲ್ಲ. ನಮ್ಮ ನಾಯಕರು ಬೀದಿಗೆ ಬಂದಿಲ್ಲ. ಪ್ರಧಾನಿ ಕಚೇರಿಯಿಂದ ಬರುವ ಆದೇಶವನ್ನು ಪಾಲಿಸಿರುತ್ತಾರೆ. ಕಾಂಗ್ರೆಸ್‌ನವರು ಬಿಜೆಪಿಯವರು ಬೀದಿಗೆ ಬಂದಿದ್ದಾರೆಂದು ಹೇಳಲಿ. ಬರುವ ಲೋಕಸಭಾ ಚುನಾವಣೆಯಲ್ಲಿ ಯಾರು ಬೀದಿಗೆ ಬರ್ತಾರೆ ತೋರಿಸ್ತೀವಿ. ಬಿಜೆಪಿಯಿಂದ ಯಾವೊಬ್ಬ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಎಸ್.ಟಿ ಸೋಮಶೇಖರ್, ಬಿ.ಸಿ ಪಾಟೀಲ್ ಅವರ ಜೊತೆ ಮಾತನಾಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
‘ಮರದ ಮೇಲೆ ಕುಳಿತು ಕಾಕಾ ಅನ್ನೋದಕ್ಕೆ ಆಗಲ್ಲ’
ಕಾಂಗ್ರೆಸ್ ನಾಯಕರ ವ್ಯಂಗ್ಯಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಕಿಡಿಕಾರಿದ್ದಾರೆ. ಮೈಸೂರಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಹತ್ರಕ್ಕೆ ಯಾರನ್ನು ಬಿಡುವುದಿಲ್ಲ. ಅದಕ್ಕೆ ಕೆಲವು ಸೆಕ್ಯೂರಿಟಿ ಕಾರಣಗಳು ಇರುತ್ತೆ. ರಾಜ್ಯದ ಜನ ಅವರಿಗೆ ಅಧಿಕಾರ ಕೊಟ್ಟಿದ್ದು ಕೆಲಸ ಮಾಡೋಕೆ. ಪ್ರತಿದಿನ ಮರದ ಮೇಲೆ ಕುಳಿತು ಕಾಕಾ ಅನ್ನೋದಕ್ಕೆ ಅಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ