newsfirstkannada.com

Video: ತೆಲಂಗಾಣದಲ್ಲಿ ಕೆಸಿಆರ್ ಆಪ್ತನ ಗೂಂಡಾಗಿರಿ; ಬಿಜೆಪಿ ನಾಯಕನಿಗೆ ಶಾಸಕ ವಿವೇಕಾನಂದರಿಂದ ಹಲ್ಲೆ

Share :

26-10-2023

    ಆಕ್ರೋಶಗೊಂಡು ವೇದಿಕೆ ಮೇಲೆ ನುಗ್ಗಿದ 2 ಕಡೆಯ ಕಾರ್ಯಕರ್ತರು

    ನೋಡ ನೋಡ್ತಿದ್ದಂತೆ ರಣರಂಗವಾದ ಖಾಸಗಿ ಚಾನೆಲ್‌ ಡಿಬೆಟ್​ ಕಾರ್ಯಕ್ರಮ

    ಬ್ಯಾರಿಕೇಡ್​ಗಳನ್ನ ತಳ್ಳಿ, ಚೇರ್​ಗಳನ್ನು ಎತ್ತಿ ಮೇಲೆ ಎಸೆದ ಬೆಂಬಲಿಗರು

ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭಾ ಎಲೆಕ್ಷನ್ ಅಖಾಡ ರಂಗೇರಿದ್ದು ರಾಜಕೀಯ ಪಕ್ಷಗಳ ನಾಯಕರು ಜಿದ್ದಾಜಿದ್ದಿನ ಯುದ್ಧಕ್ಕೆ ಇಳಿದಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಡಿಬೆಟ್​ನಲ್ಲಿ ಬಿಆರ್​ಎಸ್​ ಪಕ್ಷದ ಶಾಸಕ ಉದ್ರಿಕ್ತಗೊಂಡು ಬಿಜೆಪಿ ನಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ವಿರೋಧಿಸಿ ಫುಲ್ ತರಾಟೆ ತೆಗೆದುಕೊಂಡಿದ್ದಾರೆ.

​ಬಿಆರ್​ಎಸ್​ನ ಹಾಲಿ ಶಾಸಕ ಹಾಗೂ ಪಕ್ಷದ ಅಭ್ಯರ್ಥಿ ಕೆ.ಪಿ ವಿವೇಕಾನಂದ ಅವರು ಬಿಜೆಪಿ ನಾಯಕ ಹಾಗೂ ಅಭ್ಯರ್ಥಿ ಕುಣ ಶ್ರೀಶೈಲಗೌಡ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಡಿಬೆಟ್​ಗೆ ಬಂದಿದ್ದ ಎರಡು ಕಡೆ ಕಾರ್ಯಕರ್ತರು ಆಕ್ರೋಶಗೊಂಡು ವೇದಿಕೆ ಮೇಲೆ ನುಗ್ಗಿದ್ದಾರೆ. ಕೆಲವರು ಕಾರ್ಯಕ್ರಮದ ಬ್ಯಾರಿಕೇಡ್​ಗಳನ್ನು ತಳ್ಳಿ, ಚೇರ್​ಗಳನ್ನು ಎತ್ತಿಕೊಂಡು ಬಂದು ಮೇಲೆ ಎಸೆದಿದ್ದಾರೆ ಎನ್ನಲಾಗಿದೆ.

ಕುತುಬಳ್ಳಾಪುರ ವಿಧಾನಸಭಾ ಕ್ಷೇತ್ರದ ಡಿಬೆಟ್​ನಲ್ಲಿ ಬಿಜೆಪಿ ಮತ್ತು ಬಿಆರ್​ಎಸ್​ ನಾಯಕರ ಮಧ್ಯೆ ಭೂಗಳ್ಳತನ ಮಾಡಿರುವ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡಲಾಗುತ್ತಿತ್ತು. ಈ ವೇಳೆ ಏಕವಚನದಲ್ಲೇ ನೀನು ಕಬ್ಜಾಗಾರ.. ನೀನು ಕಬ್ಜಾಗಾರ.. ಎಂದು ವೇದಿಕೆ ಮೇಲೆ ಬೈದುಕೊಳ್ಳುತ್ತಿದ್ದರು. ಆಗ ಬಿಜೆಪಿ ನಾಯಕ ಶ್ರೀಶೈಲಗೌಡ, ನಿಮ್ಮಪ್ಪ ಕಬ್ಜಾಗಾರ ಎಂದು ಹೇಳಿದ್ದಾರೆ. ಇದರಿಂದ ವಿಪರೀತ ಕೋಪಗೊಂಡ ಬಿಆರ್​ಎಸ್​ ಶಾಸಕ ವಿವೇಕಾನಂದ ಏಕಾಏಕಿ ಶ್ರೀಶೈಲಗೌಡ ಮೇಲೆ ಎರಗಿ ದಾಳಿಗೆ ಮುಂದಾಗಿದ್ದಾರೆ. ಇಬ್ಬರು ಈ ವೇಳೆ ಕೈ, ಕೈ ಕೂಡ ಮಿಲಾಯಿಸಿದ್ದಾರೆ. ಇದರಿಂದ ತುಂಬಿದ್ದ ಡಿಬೇಟ್ ಕೆಲ ಸಮಯ​ ರಣರಂಗವಾಗಿ ಮಾರ್ಪಟ್ಟಿತ್ತು.

ಗಲಾಟೆ ಬಿಡಿಸಲು ಪೊಲೀಸರು ಎಷ್ಟೇ ಕಷ್ಟ ಪಟ್ಟರು ಕಾರ್ಯಕರ್ತರು ನುಗ್ಗಿ ಬಂದಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಏರ್ಪಟ್ಟಿತ್ತು. ಸದ್ಯ ಯಾವುದೇ ಹಾನಿಕಾರಕ ಘಟನೆ ನಡೆದಿಲ್ಲ ಎನ್ನಲಾಗಿದ್ದು ಕೆಲ ಸಮಯದ ನಂತರ ಪೊಲೀಸರು ಎಲ್ಲವನ್ನು ಸರಿಪಡಿಸಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ತೆಲಂಗಾಣದಲ್ಲಿ ಕೆಸಿಆರ್ ಆಪ್ತನ ಗೂಂಡಾಗಿರಿ; ಬಿಜೆಪಿ ನಾಯಕನಿಗೆ ಶಾಸಕ ವಿವೇಕಾನಂದರಿಂದ ಹಲ್ಲೆ

https://newsfirstlive.com/wp-content/uploads/2023/10/BRS_MLA_BJP.jpg

Load More