newsfirstkannada.com

ಮಾರ್ಷಲ್​​ಗಳಿಂದ ಬಿಬಿಎಂಪಿಗೆ ಭಾರೀ ಲಾಸ್​​.. ಲೋಕಾಯುಕ್ತರಿಗೆ ದೂರು ನೀಡಲು ಬಿಜೆಪಿ ನಿರ್ಧಾರ

Share :

22-11-2023

    ಸುಮಾರು 156 ವಾರ್ಡ್​ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಇಲ್ಲ

    ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹ

    ಶೇ.40ರಷ್ಟು ಆಟೋ ಹಾಜರಾತಿ ಇಲ್ಲದಿದ್ರೂ ಹಣ ಪಾವತಿಯಾಗ್ತಿದೆಯಾ?

ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿದ್ದಾರಾ ಅನವಶ್ಯಕ ಮಾರ್ಷಲ್​ಗಳು?. ಮಾರ್ಷಲ್​ಗಳ ನೇಮಕದಿಂದ ಪಾಲಿಕೆ ಸಕ್ಸಸ್​​ ಕಂಡಿದೆಯಾ?. ಇವರಿಂದ ಪಾಲಿಕೆಗೆ ಲಾಭವೆಷ್ಟು, ಲಾಸ್​ ಎಷ್ಟು? ಈ ಕುರಿತು ಎನ್​ಆರ್​ ರಮೇಶ್​ ಧ್ವನಿ ಎತ್ತಿದ್ದಾರೆ.

ಶಿಸ್ತಿನ ಸಿಪಾಯಿ, ಪಾಲಿಕೆಯ ಶಕ್ತಿ ಮಾರ್ಷಲ್​ಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಅನವಶ್ಯಕ ಮಾರ್ಷಲ್​ಗಳ ಸೇವೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾದ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್, ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ. ತುಷಾರ್ ಗಿರಿನಾಥ್​ರವರಿಗೆ ದೂರು ನೀಡಿದ್ದಾರೆ. ಹಾಗಿದ್ರೆ ಆ ದೂರಿನಲ್ಲೇನಿದೆ ಅನ್ನೋದನ್ನ ನೋಡೋದಾದ್ರೆ.

BBMP ಕಚೇರಿ

ಮಾರ್ಷಲ್ ಸೇವೆ ಸ್ಥಗಿತಕ್ಕಾಗಿ ದೂರು

  • 198 ವಾರ್ಡ್​ನಲ್ಲಿ 750 ಮಂದಿ ಮಾರ್ಷಲ್ಸ್​​ ಕಾರ್ಯನಿರ್ವಹಣೆ
  • ಇವರ ನೇಮಕದಿಂದ ಪಾಲಿಕೆ ಪ್ರಗತಿ ಕಂಡಿದ್ದು ಶೇ.35 ರಷ್ಟು ಮಾತ್ರ
  • ಸುಮಾರು 156 ವಾರ್ಡ್​ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಇಲ್ಲ
  • ಶೇ.40 ರಷ್ಟು ಆಟೋ ಹಾಜರಾತಿ ಇಲ್ಲದಿದ್ದರೂ ಹಣ ಪಾವತಿಯಾಗ್ತಿದೆ
  • 2 ಕೆರೆಗಳಲ್ಲಿ 42 ಮಂದಿ ಮಾರ್ಷಲ್​ ಕಾರ್ಯ ಅಂತ ಸುಳ್ಳು ಮಾಹಿತಿ
  • ಮಾರ್ಷಲ್​​ಗಳಿಗೆ 17 ಸಾವಿರ ರೂ.ಗಳಷ್ಟು ಮಾತ್ರ ಮಾಸಿಕ ವೇತನ
  • ಮಾರ್ಷಲ್​​ಗಳ ನಿಯೋಜನೆಯಿಂದ ಪಾಲಿಕೆಗೆ 25 ಕೋಟಿ ದುಂದು ವೆಚ್ಚ
  • ಪ್ರತಿ ತಿಂಗಳು ಮಾರ್ಷಲ್ಸ್​​ ವೇತನಕ್ಕಾಗಿ ₹2,01,53,388 ವೆಚ್ಚ
  • 2017ರಿಂದ ಈವರೆಗೆ ಮಾರ್ಷಲ್ ಸೇವೆಗೆ ₹157,19,64,264 ಖರ್ಚು
  • ಮಾರ್ಷಲ್ ಕಾರ್ಯದಿಂದ ಶೇ.25 ರಷ್ಟು ಪಾಲಿಕೆ ಸಫಲತೆ ಕಂಡಿಲ್ಲ

ಮಾರ್ಷಲ್​ಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಂಡಿಲ್ಲ ಅಂದರೆ ಒಂದು ವಾರ ನಿಗಧಿ ಮಾಡಿದ್ದೇನೆ. ನಂತರ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ. 6 ವರ್ಷದಲ್ಲಿ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ ಅಷ್ಟು ಜನ ಅಧಿಕಾರಿಗಳು ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ.

ಎನ್.ಆರ್ ರಮೇಶ್, ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ

ಅದೇನೆ ಇರ್ಲಿ ಈ ಬಗ್ಗೆ ಸತ್ಯಾಸತ್ಯತೆಗಳ ಪರಿಶೀಲನೆ ಮಾಡಿದ್ದೇ ಆದ್ರಲ್ಲಿ ಬೃಹತ್ ಮಟ್ಟದ ಗೋಲ್ ಮಾಲ್ ಕಾರ್ಯ ಬೆಳಕಿಗೆ ಬರಲಿದೆ ಎಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ…ಆದ್ರೆ ಇದಕ್ಕೆ ಬಿಬಿಎಂಪಿ ಯಾವ ಉತ್ತರ ಕೊಡುತ್ತೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರ್ಷಲ್​​ಗಳಿಂದ ಬಿಬಿಎಂಪಿಗೆ ಭಾರೀ ಲಾಸ್​​.. ಲೋಕಾಯುಕ್ತರಿಗೆ ದೂರು ನೀಡಲು ಬಿಜೆಪಿ ನಿರ್ಧಾರ

https://newsfirstlive.com/wp-content/uploads/2023/11/NR_RAMESH.jpg

Load More