‘ವಿಚಾರಣೆ ನಡೆದ್ರೆ ಏನ್ ಆಗುತ್ತೆ ಅನ್ನೋದು ಗೊತ್ತಿದ್ಯಾ ನಿಮ್ಗೆ’
S.A ರಾಮದಾಸ್ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್
ನನಗೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದ ಪ್ರೇಮಕುಮಾರಿ ಹೇಳಿದ್ದೇನು?
ನವದೆಹಲಿ: ಬಿಜೆಪಿ ನಾಯಕ, ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಪ್ರೇಮಾಕುಮಾರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸುಪ್ರೀಂಕೋರ್ಟ್ ರಾಮದಾಸ್ ಅವರ ಅರ್ಜಿ ವಜಾ ಮಾಡಿದ್ದು, ಪ್ರೇಮಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಚಾರಣೆ ನಡೆದ್ರೆ ಏನ್ ಆಗುತ್ತೆ ಅನ್ನೋದು ರಾಮದಾಸ್ ಅವರಿಗೂ ಗೊತ್ತಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಳ್ಳುವುದು ರಾಮದಾಸ್ ಅವರ ಕರ್ತವ್ಯ ಎಂದು ಪ್ರೇಮಕುಮಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
2013ರಲ್ಲಿ ಬಿಜೆಪಿ ನಾಯಕ ಎಸ್.ಎ ರಾಮದಾಸ್ ವಿರುದ್ಧ ಪ್ರೇಮಕುಮಾರಿ ಅವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ B ರಿಪೋರ್ಟ್ ಸಲ್ಲಿಸಿತ್ತು. ತಮ್ಮನ್ನು ಪ್ರಶ್ನೆ ಮಾಡದೇ ಸಿಐಡಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ ಎಂದು ಆರೋಪಿಸಿ ಪ್ರೇಮಕುಮಾರಿ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡ ಪ್ರಕರಣದ ವಿಚಾರಣೆಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ನಟಿ ರಮ್ಯಾ ಆರೋಗ್ಯಕ್ಕೆ ಏನಾಯ್ತು? ಸಾವಿನ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕೊಟ್ರು ಖಡಕ್ ಉತ್ತರ
ಮಾಜಿ ಸಚಿವ ಎಸ್.ಎ ರಾಮದಾಸ್ ಅವರು ವಿಚಾರಣೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೇಲಾ ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ ಮಾಜಿ ಸಚಿವ ರಾಮದಾಸ್ ಅವರ ಅರ್ಜಿಯನ್ನು ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಮಾಜಿ ಸಚಿವ ಎಸ್.ಎ ರಾಮದಾಸ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೇಮಕುಮಾರಿ, ರಾಮದಾಸ್ ಅವರು ಈಗ ಅಧಿಕಾರದಲ್ಲಿಲ್ಲ. ಒಂದು ಹೆಣ್ಣು ಮಗಳ ವಿಚಾರವನ್ನ ಸುಪ್ರೀಂಕೋರ್ಟ್‌ವರೆಗೂ ತೆಗೆದುಕೊಂಡು ಹೋಗುವ ಅಗತ್ಯ ಇರಲಿಲ್ಲ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಳ್ಳುವುದು ರಾಮದಾಸ್ ಅವರ ಕರ್ತವ್ಯ. ವಿಚಾರಣೆ ನಡೆದ್ರೆ ಏನ್ ಆಗುತ್ತೆ ಅನ್ನೋದು ರಾಮದಾಸ್ ಅವರಿಗೂ ಗೊತ್ತಿದೆ. ನ್ಯಾಯ ಸಿಕ್ಕೇ ಸಿಗುತ್ತೆ. ಎಲ್ಲರಿಗೂ ಈ ಮಾಹಿತಿ ತಿಳಿಸಬೇಕಾಗಿದ್ದು ಹೀಗಾಗಿ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ