newsfirstkannada.com

VIDEO: ಇದಪ್ಪಾ ಬಿಲ್ಡಪ್‌ ಅಂದ್ರೆ.. 300 ಕಿಲೋ ಮೀಟರ್, 400 ಕಾರಿನಲ್ಲಿ ಬಂದು ಕಾಂಗ್ರೆಸ್ ಪಕ್ಷ ಸೇರಿದ BJP ನಾಯಕ

Share :

16-06-2023

    ತೆಲುಗು ಸಿನಿಮಾಗಳ ಬಿಲ್ಡಪ್‌ ಅನ್ನೇ ಮೀರಿಸುವ ರಿಯಲ್ ಸೀನ್ ಇದು

    ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಜ್ಯೋತಿರಾಧಿತ್ಯ ಸಿಂಧ್ಯಾ ಕಟ್ಟಾ ಬೆಂಬಲಿಗ

    400 ಕಾರುಗಳಲ್ಲಿ ಬಂದು ಕಾಂಗ್ರೆಸ್ ಪಕ್ಷದ ಕೈ ಹಿಡಿದ ಬೈಜನಾಥ್‌ ಸಿಂಗ್

ಭೋಪಾಲ್: ಮಧ್ಯಪ್ರದೇಶದಲ್ಲಿ ತೆಲುಗು ಸಿನಿಮಾದ ಬಿಲ್ಡಪ್‌ ಅನ್ನೇ ಮೀರಿಸುವ ಘಟನೆಯೊಂದು ರಿಯಲ್ ಆಗಿ ನಡೆದಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ನಾಯಕನೊಬ್ಬ 300 ಕಿಲೋ ಮೀಟರ್ 400 ಕಾರಿನಲ್ಲಿ ಮೆರವಣಿಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ.

400 ಕಾರಿನಲ್ಲಿ ಬಂದು ಕಾಂಗ್ರೆಸ್ ಸೇರಿರೋ ಲೀಡರ್ ಹೆಸರು ಬೈಜನಾಥ್ ಸಿಂಗ್ ಅಂತಾ. ಇವ್ರು 2020ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧ್ಯಾ ಬಣದಲ್ಲಿ ಗುರುತಿಸಿಕೊಂಡಿದ್ರು. ಅದೇ ಬೈಜನಾಥ್ ಸಿಂಗ್ ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಇಷ್ಟೊಂದು ಬಿಲ್ಡಪ್ ಕೊಟ್ಟಿದ್ದಾರೆ. ಬೈಜನಾಥ್ ಸಿಂಗ್ 400 ಕಾರಿನಲ್ಲಿ ಹೈವೇಯಲ್ಲಿ ಮೆರವಣಿಗೆ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮಧ್ಯಪ್ರದೇಶದ ಭೋಪಾಲ್‌ನಿಂದ ಶಿವಪುರಿಗೆ 300 ಕಿಲೋ ಮೀಟರ್ ಅಂತರವಿದೆ. ಈ 300 ಕಿಲೋ ಮೀಟರ್ 400 ಕಾರುಗಳಲ್ಲಿ ಬಂದ ಬೈಜನಾಥ್‌ ಸಿಂಗ್ ಅವರನ್ನ ಮಾಜಿ ಸಿಎಂ ಕಮಲ್ ನಾಥ್ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯಾವಾಗಿ ಬರಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಬೈಜನಾಥ್ ಸಿಂಗ್‌ಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗೋದು ಅನುಮಾನ ಎನ್ನಲಾಗಿತ್ತು.

ಹೀಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಆಪ್ತ ವಲಯದಲ್ಲಿದ್ದ ಬೈಜನಾಥ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಬೈಜನಾಥ್ ಶಕ್ತಿ ಪ್ರದರ್ಶನದಿಂದ ಕೈ ನಾಯಕರು ಇವತ್ತು ಮಧ್ಯಪ್ರದೇಶದಲ್ಲಿ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಭರ್ಜರಿ ಆಪರೇಷನ್ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಇದಪ್ಪಾ ಬಿಲ್ಡಪ್‌ ಅಂದ್ರೆ.. 300 ಕಿಲೋ ಮೀಟರ್, 400 ಕಾರಿನಲ್ಲಿ ಬಂದು ಕಾಂಗ್ರೆಸ್ ಪಕ್ಷ ಸೇರಿದ BJP ನಾಯಕ

https://newsfirstlive.com/wp-content/uploads/2023/06/Madhyapradesh-Congress-1.jpg

Load More