ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬೇಗುದಿ, ಬೀದಿಯಲ್ಲೇ ಜಗಳ!
ಕೆ.ಎಸ್ ಈಶ್ವರಪ್ಪ ವಿರುದ್ಧ ಸ್ವಪಕ್ಷೀಯ ನಾಯಕರೇ ಕೆಂಡಾಮಂಡಲ
ಸೋತ ಮೇಲೆ ಆರೋಪ ಮಾಡೋದು ತಪ್ಪು ಎಂದ ನಾಯಕರು
ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಪಕ್ಷದಲ್ಲಿ ಒಳಬೇಗುದಿ ಹೆಚ್ಚಿದ್ದು ಸೋಲಿನ ಆತ್ಮಾವಲೋಕನ ಬಿಟ್ಟು ಪರಸ್ಪರ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಸೋಲಿಗೆ ಬಾಂಬೆ ಮಿತ್ರಮಂಡಳಿ ಕಾರಣ ಎಂದಿದ್ದ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸೋಲು ರಾಜ್ಯ ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಒಬ್ಬರ ಮೇಲೊಬ್ಬರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಆಪರೇಷನ್ ಕಮಲದಿಂದ ಪಕ್ಷದಲ್ಲಿ ಶಿಸ್ತು ಹಾಳಾಗಿದೆ ಅಂತ ಕಿಡಿಕಾರಿದ್ದ ಈಶ್ವರಪ್ಪ ಮಾತಿಗೆ ಪಕ್ಷದಲ್ಲೇ ಅಪಸ್ವರ ಕೇಳಿ ಬಂದಿದೆ.
ಈಶ್ವರಪ್ಪ ವಿರುದ್ಧ ಸ್ವಪಕ್ಷೀಯ ನಾಯಕರ ತೀವ್ರ ಅಸಮಾಧಾನ!
ಲೋಕಸಭಾ ಚುನಾವಣೆಗೆ 10 ತಿಂಗಳಿರುವಾಗ ಅಂತರ್ಯುದ್ಧ ತೀವ್ರಗೊಂಡಿದೆ. ಪಕ್ಷದಲ್ಲಿ ಹೊಂದಾಣಿಕೆ ರಾಜಕೀಯದ ಬಗ್ಗೆ ಆರೋಪ ಕೇಳಿಬರ್ತಿದೆ. ಕಾಂಗ್ರೆಸ್ ಗಾಳಿ ಬಿಜೆಪಿಗೂ ಬೀಸಿದೆ ಅನ್ನೋ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈಶ್ವರಪ್ಪ ವಿರುದ್ಧ ಸ್ವಪಕ್ಷೀಯ ನಾಯಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಮಾಜಿ ಡಿಸಿಎಂ ಅಶ್ವತ್ಥ್ನಾರಾಯಣ್ ಆಕ್ಷೇಪ!
ವಲಸಿಗರು ಬಂದಿದ್ದಕ್ಕೆ ಸ್ಥಿರ ಸರ್ಕಾರ ಸಾಧ್ಯವಾಗಿತ್ತು. ಅವರನ್ನು ವಲಸಿಗರು ಅನ್ನೋದು ತಪ್ಪಾಗುತ್ತೆ ಅಂತ ಅಶ್ವತ್ಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಸೋತ ತಕ್ಷಣ ಆರೋಪ ಮಾಡೋದು ಸರಿಯಲ್ಲ ಅಂತ ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯ!
ಇನ್ನು ವಲಸಿಗರಿಂದ ಅಶಿಸ್ತು ಎಂದಿದ್ದ ಈಶ್ವರಪ್ಪ ಹೇಳಿಕೆಗೆ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಬಿಜೆಪಿಗೆ ಹೋದವರು, ಬಂದವರು, ಕರೆದುಕೊಂಡು ಬಂದವರನ್ನೇ ಕೇಳಬೇಕು ಅಂತ ಟೀಕಿಸಿದ್ದಾರೆ.
2ನೇ ಬಾರಿಗೆ ಮಾಜಿ ಸಚಿವ ಈಶ್ವರಪ್ಪ ತಮ್ಮ ಬಾಣವನ್ನು ವಲಸಿಗರ ವಿರುದ್ಧ ಎಸೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿರುವ ಹೊತ್ತಲ್ಲೇ ವಲಸಿಗರ ಕಡೆ ಬೊಟ್ಟು ಮಾಡಿ ತೋರಿಸಿದ್ದಾರೆ. ಈಶ್ವರಪ್ಪ ಹೇಳಿಕೆಗೆ ವಲಸಿಗರ ಪ್ರತಿಕ್ರಿಯೆ ಏನು ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.