newsfirstkannada.com

‘ದಲಿತ ವಿರೋಧಿ, ಗೂಂಡಾ ಸಚಿವರನ್ನು ಬಂಧಿಸಿ’- ಡಿ. ಸುಧಾಕರ್​​ ರಾಜೀನಾಮೆಗೆ ಪಟ್ಟು ಹಿಡಿದ BJP ನಾಯಕರು

Share :

12-09-2023

    ಯಾವ ಪುಡಿ ರೌಡಿಗಿಂತಲೂ ಕಡಿಮೆ‌ ಇಲ್ಲ ಸಚಿವರ ವರ್ತನೆ ಎಂದ ಬಿಜೆಪಿ

    ‘ದಲಿತರನ್ನು ಮೂಲೆಗುಂಪು ಮಾಡುವುದು ಸಿಎಂ ಸಿದ್ದರಾಮಯ್ಯಗೆ ಕರಗತ’

    ದಲಿತ ವಿರೋಧಿ, ಗೂಂಡಾ ಸಚಿವರನ್ನು ಬಂಧಿಸಲು ಬಿಜೆಪಿ ಆಗ್ರಹ

ನ್ಯಾಯ ಕೇಳಲು ಹೋದ ದಲಿತರಿಗೆ ಆವಾಜ್ ಹಾಕಿದ ಆರೋಪದಲ್ಲಿ ಸಚಿವ ಡಿ. ಸುಧಾಕರ್ ವಿರುದ್ಧ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯೂಸ್‌ ಫಸ್ಟ್ ವರದಿಯನ್ನು ಉಲ್ಲೇಖಿಸಿರುವ ರಾಜ್ಯ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.

ಸಾಮಾಜಿಕ ಜಾಲತಾಣ Xನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಚಿವ ಡಿ. ಸುಧಾಕರ್ ಅವರ ಗೂಂಡಾವರ್ತನೆ ಯಾವ ಪುಡಿ ರೌಡಿಗಿಂತಲೂ ಕಡಿಮೆ‌ ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ತುಂಬಿ ತುಳುಕುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ, ಸಚಿವ ಡಿ. ಸುಧಾಕರ್ ಅವರಿಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ ಸಿದ್ಧಿಸಿದೆ. ಕಾಂಗ್ರೆಸ್ ಸರ್ಕಾರ ಈ ಕೂಡಲೇ ದಲಿತ ವಿರೋಧಿ ಗೂಂಡಾ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು ಎಂದಿದೆ.

ಇದನ್ನೂ ಓದಿ: ನಾಲಿಗೆ ಹರಿಬಿಟ್ಟ ಸಚಿವ ಡಿ. ಸುಧಾಕರ್‌; ವಿವಾದಾತ್ಮಕ ಹೇಳಿಕೆ ನೀಡಿದ ಮತ್ತೊಂದು ವಿಡಿಯೋ ಬಹಿರಂಗ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಡಿ. ಸುಧಾಕರ್​ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಚಿವರ ವಿರುದ್ಧ ದಾಖಲಾಗಿರುವ FIR ಅನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರೇ ತಪ್ಪಿತಸ್ಥರಿದ್ರೂ, ಎಷ್ಟೇ ದೊಡ್ಡವಿರಿದ್ರೂ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸುಧಾಕರ್ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದ್ರೆ ಸಂಪುಟದಿಂದ ವಜಾ ಮಾಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ದಲಿತರ ಪರಿಸ್ಥಿತಿ ಇದು. ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಸುಧಾಕರ್ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ವಜಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ದಲಿತ ವಿರೋಧಿ, ಗೂಂಡಾ ಸಚಿವರನ್ನು ಬಂಧಿಸಿ’- ಡಿ. ಸುಧಾಕರ್​​ ರಾಜೀನಾಮೆಗೆ ಪಟ್ಟು ಹಿಡಿದ BJP ನಾಯಕರು

https://newsfirstlive.com/wp-content/uploads/2023/09/Bjp-On-D-Sudhakar.jpg

Load More