ಕೇಸರಿ ಕಲಿಗಳಿಗೆ ತಲೆನೋವಾದ ಆಪರೇಷನ್ ಹಸ್ತ
‘ಧವಳಗಿರಿ’ ನಿವಾಸದಲ್ಲಿ ಕೇಸರಿ ಕಲಿಗಳ ಸುದೀರ್ಘ ಚರ್ಚೆ
ಬಿಎಸ್ವೈ ಜೊತೆಗಿನ ಚರ್ಚೆಯಲ್ಲಿ 4 ವಿಷಯಗಳು ಚರ್ಚೆ
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬಾಂಬೆ ಟೀಂ ಕಾಂಗ್ರೆಸ್ ಘರ್ವಾಪ್ಸಿ ಕೇಸರಿ ಪಡೆಯನ್ನು ನಡುಗುವಂತೆ ಮಾಡಿದೆ. ವಲಸಿಗ ನಾಯಕರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಕೇಸರಿ ಸೇನೆಯಲ್ಲಿ ಕಸರತ್ತು ಆರಂಭವಾಗಿದೆ. 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಬಿಜೆಪಿ ನಾಯಕರು ಹಲವು ವಿಚಾರಗಳನ್ನು ಚರ್ಚಿಸಿ ಹೊಸ ಸಮರಕ್ಕೆ ಸಜ್ಜಾಗಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸದ್ಯ ಬಾಂಬೆ ಟೀಂ ಸೃಷ್ಟಿಸಿರೋ ಸಂಚಲನ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಅತ್ತ ದಳಪತಿ ಹೆಚ್.ಡಿ ಕುಮಾರಸ್ವಾಮಿ ಸಹ ಕಾಂಗ್ರೆಸ್ ಕೋಟೆಯ ಮೇಲೆ ಮಾತಿನ ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಂಪಿಂಗ್ ಪಾಲಿಟಿಕ್ಸ್ನಿಂದ ಮಂಕಾಗಿರೋ ಬಿಜೆಪಿ ತನ್ನ ತಂಡದ ಸದಸ್ಯರನ್ನ ಉಳಿಸಿಕೊಳ್ಳಲು ತಂತ್ರ, ರಣತಂತ್ರಗಳನ್ನ ಹೆಣೆಯಲು ಮುಂದಾಗಿದೆ. ಬಾಂಬೆ ಟೀಂ ಮತ್ತೆ ಕಾಂಗ್ರೆಸ್ ಕಡೆ ವಾಲಿದ್ರೆ ಮುಂದೆ ಭಾರೀ ಮುಖಭಂಗವಾಗುತ್ತೆ ಅನ್ನೋದು ಬಿಜೆಪಿ ನಾಯಕರ ಎದೆಬಡಿತವನ್ನ ಹೆಚ್ಚಿಸಿದೆ.
ಬಹುಮತ ಇದ್ದರೂ ಅಪರೇಷನ್ಗಿಳಿದ ‘ಕೈ’ ಟೀಂ!
135 ಶಾಸಕರ ಬಲದೊಂದಿಗೆ ಸರ್ಕಾರ ರಚಿಸಿ ಸೇಫ್ ಜೋನ್ನಲ್ಲಿ ಇದ್ದರೂ ಸಹ ಕಾಂಗ್ರೆಸ್ ನಾಯಕರು ಮತ್ತೆ ಆಪರೇಷನ್ಗೆ ಇಳಿದಿರೋದು ಬಿಜೆಪಿಗರ ನಿದ್ದೆಗೆಡಿಸಿದೆ. ಲೋಕಾಸಭಾ ಸಮರ ಸನಿಹವಿರೋದ್ರಿಂದ ಆಪರೇಷನ್ ಹಸ್ತ ಸಕ್ಸಸ್ ಆದ್ರೆ ಕೇಸರಿ ಸೇನೆಗೆ ಕಂಟಕ ಕಟ್ಟಿಟ್ಟ ಬುತ್ತಿ ಅನ್ನೋದು ನಾಯಕರಿಗೆ ಅರಿವಾಗಿದೆ. ಹೀಗಾಗಿ ಮನೆಮಕ್ಕಳನ್ನ ಮನೆಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಲು ಮುಂದಾಗಿದೆ.. ಈ ಪರಿಸ್ಥಿತಿ ನಿಭಾಯಿಸೋ ಹೊಣೆಯನ್ನ ಹೈಕಮಾಂಡ್ ರಾಜ್ಯ ಬಿಜೆಪಿ ಪಾಲಿನ ಆಪತ್ಬಾಂಧವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ನೀಡಿದೆ.

ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಲು ಮುಂದಾಗಿರೋ ಬಿಜೆಪಿ ನಾಯಕರು ಕೈ ಪಡೆಯನ್ನ ಕಟ್ಟಿಹಾಕಲು ಪ್ಲಾನ್ ರೂಪಿಸಲು ಸಜ್ಜಾಗಿದ್ದಾರೆ. ಇಷ್ಟು ದಿನ ಸರ್ಕಾರಕ್ಕೆ ಹನಿಮೂನ್ ಪೀರಿಯಡ್ ನೀಡಿ ಸುಮ್ಮನಿದ್ದ ಕೇಸರಿ ಕಲಿಗಳು ಮತ್ತೆ ಕೈ ಕೋಟೆ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ. ನಿನ್ನೆ ಬಿಜೆಪಿ ಬಿ.ಎಸ್ ಯಡಿಯೂರಪ್ಪರ ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ನಾಯಕರು 2 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಆರ್. ಅಶೋಕ್, ಮುನಿರತ್ನ, ಮುರುಗೇಶ್ ನಿರಾಣಿ, ಗೋಪಾಲಯ್ಯ ಸೇರಿ ಹಲವರು ಭಾಗಿಯಾಗಿದ್ದಾರೆ.
ಸುದೀರ್ಘ ಸಭೆ!
ಚರ್ಚೆ 1 : ಆಪರೇಷನ್ ಹಸ್ತದ ಬಗ್ಗೆ ಬಿಜೆಪಿ ನಾಯಕರಿಂದ ವಿಮರ್ಶೆ
ಬಾಂಬೆ ಟೀಂ ಅನ್ನ ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಆಪರೇಷನ್ಗೆ ಇಳಿದಿದ್ದಾರೆ.. ಹೀಗಾಗಿ ಬಾಂಬೆ ಟೀಂ ಕಾಂಗ್ರೆಸ್ಗೆ ಸೇರ್ಪಡೆಯಾದ್ರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯುಂಟಾಗುತ್ತೆ.. ಹೀಗಾಗಿ ವಲಸಿಗರನ್ನ ಬಿಜೆಪಿಗೆ ಕರೆತಂದ ನಾಯಕರ ಹೆಗಲಿಗೆ ಅವರನ್ನ ಕಾಂಗ್ರೆಸ್ ಕಡೆ ಮುಖ ಮಾಡದಂತೆ ಉಳಿಸಿಕೊಳ್ಳುವ ಜವಾಬ್ದಾರಿಯನ್ನ ನೀಡಲಾಗಿದೆ.. ವಲಸಿಗರ ಮನವೊಲಿಸಲು ಆಗಬೇಕಾದ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ಚರ್ಚೆ 2 : ಹೋರಾಟದ ಹಾದಿ ಹಿಡಿಯಲು ಬಿಜೆಪಿಗರ ನಿರ್ಧಾರ
ರಾಜ್ಯ ಕಾಂಗ್ರೆಸ್ ಸರ್ಕಾರದ ನ್ಯೂನ್ಯತೆಗಳನ್ನ ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಚರ್ಚೆ 3 : ಗುತ್ತಿಗೆದಾರರ ಅನುದಾನ ಬಿಡುಗಡೆಯಾಗದ ವಿಚಾರ ಚರ್ಚೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳ ಅನುದಾನ ಬಿಡುಗಡೆಯಾಗಿಲ್ಲ.. ಈ ಅನುದಾನ ಕಮಿಷನ್ ಆಧಾರದ ಮೇಲೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಅನ್ನೋ ವಿಚಾರವನ್ನ ಮುಂದಿಟ್ಟುಕೊಂಡು, ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.. ಆಗಸ್ಟ್ 23 ರಂದು ಪ್ರತಿಭಟನೆಗೆ ದಿನಾಂಕ ಸಹ ನಿಗದಿಪಡಿಸಿಲಾಗಿದೆ.
ಚರ್ಚೆ 4 : 2024ರ ಲೋಕಸಭಾ ಚುನಾವಣೆ ಗೆಲ್ಲಲು ಶಸ್ತ್ರಾಭ್ಯಾಸ
2024ರ ಲೋಕಸಭಾ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನಗಳನ್ನ ರಾಜ್ಯದಲ್ಲಿ ಗೆಲ್ಲಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ನಿಟ್ಟಿನಲ್ಲಿ ಉತ್ತಮವಾಗಿ ತಯಾರಿ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದ ಬೊಮ್ಮಾಯಿ
2 ಗಂಟೆಗಳ ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್ವೈ ಆಗಸ್ಟ್ 23 ರಂದು ಹೋರಾಟ ನಡೆಸಲಿದ್ದೇವೆ ಅಂತ ತಿಳಿಸಿದ್ರು.. ಇತ್ತ ಬೊಮ್ಮಾಯಿ ವಲಸಿಗರು ಯಾರೂ ಪಕ್ಷ ಬಿಟ್ಟು ಹೋಗಲ್ಲ ಅಂದ್ರೆ ಅತ್ತ ಆರ್. ಆಶೋಕ್ 15 ಜನ ಶಾಸಕರು ಬಿಜೆಪಿ ಸೇರುವಾಗ ಕಾಂಗ್ರೆಸ್ನವರು ಮಣ್ಣು ತಿಂತಿದ್ರಾ ಅಂತ ಕಿಡಿಕಾರಿದರು.
ಒಟ್ಟಿನಲ್ಲಿ ಅಪರೇಷನ್ ಹಸ್ತಕ್ಕೆ ಬೆಚ್ಚಿಬಿದ್ದಿರೋ ಕೇಸರಿ ಸೇನೆ ಮತ್ತೆ ಪಿನಿಕ್ಸ್ನಂತೆ ಎದ್ದುಬರಲು ಸಜ್ಜಾಗಿದೆ. ಬಾಂಬೆ ಟೀಂ ಅನ್ನ ಪಕ್ಷದಲ್ಲೇ ಉಳಿಸಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ರೂಪು ರೇಶೆಯನ್ನೂ ಸಿದ್ಧಪಡಿಸಿಕೊಂಡು ಸಮರ ಸಾರಲು ಅಲರ್ಟ್ ಆಗಿ ನಿಂತಿದೆ.
ವಿಶೇಷ ವರದಿ: ಮಧುಸೂದನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ