newsfirstkannada.com

ರಣರಂಗ ಪ್ರವೇಶಿಸಿದ ಉಸ್ತುವಾರಿಗಳು.. ಬೆಂಗಳೂರಿನ 22 ಕ್ಷೇತ್ರಗಳ ಗೆಲ್ಲಲು ಮಾಸ್ಟರ್ ಪ್ಲಾನ್​..!

Share :

25-02-2023

  ಉಸ್ತುವಾರಿಗಳಿಗೆ ಅಮಿತ್ ಶಾ ಮಾಸ್ಟರ್ ಟಾಸ್ಕ್‌

  28 ಕ್ಷೇತ್ರಗಳ ಪೈಕಿ ಕನಿಷ್ಠ 20-22 ಸ್ಥಾನ ಗೆಲ್ಬೇಕ್

  ಉಸ್ತುವಾರಿಗಳು ಎಂಟ್ರಿ ಬೆನ್ನಲ್ಲೇ ಮತಬೇಟೆ ಚುರುಕು

ಬೆಂಗಳೂರು ಬಿಜೆಪಿ ಭದ್ರಕೋಟೆ ಎಂದು ಸಾಬೀತು ಪಡಿಸಲು ಕೇಸರಿ ಪಡೆ ಮುಂದಾಗಿದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದೆ. ಬಿಜೆಪಿ ಚುನಾವಣಾ ಉಸ್ತುವಾರಿಗಳು ರಂಗ ಪ್ರವೇಶಿಸುತ್ತಿದ್ದಂತೆ ರಾಜಧಾನಿಯ 28 ಕ್ಷೇತ್ರಗಳಲ್ಲೂ ಕೇಸರಿ ಬಾವುಟ ಹಾರಿಸಲು ಒಗ್ಗಟ್ಟಿನ ಮಂತ್ರ ಜಪಿಸಿದೆ.

ಚುನಾವಣಾ ಉಸ್ತುವಾರಿಗಳ ರಂಗ ಪ್ರವೇಶ
ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಅಂದ್ರೆ ಅದು ಬೆಂಗಳೂರು ನಗರ. ಬರೋಬ್ಬರಿ 28 ಕ್ಷೇತ್ರಗಳು ರಾಜಧಾನಿಯ ಒಡಲಿನಲ್ಲಿವೆ. ಇಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಅನ್ನೋದು ಕಾಂಗ್ರೆಸ್​ ಮತ್ತು ಬಿಜೆಪಿಯ ಲೆಕ್ಕಾಚಾರ. ಅಷ್ಟೇ ಅಲ್ಲ, ಅದಕ್ಕೆ ಬೇಕಾದ ತಂತ್ರ ರಣತಂತ್ರಗಳನ್ನು ಎರಡೂ ಪಕ್ಷಗಳು ಮಾಡ್ತಿವೆ. ಒಂದು ಹೆಜ್ಜೆ ಮುಂದಿಟ್ಟಿರುವ ಕೇಸರಿ ಕಲಿಗಳು, ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರಲ್ಲಿ ಈ ಬಾರಿ 20 ಸ್ಥಾನಗಳನ್ನು ಟಾರ್ಗೆಟ್​ ಮಾಡಲು, ಬೆಂಗಳೂರಿನ ಪ್ರಮುಖ ನಾಯಕರಿಗೆ ಉಸ್ತುವಾರಿಗಳು ಸೂಚನೆ ನೀಡಿದ್ದಾರೆ.

ಚಾಣಕ್ಯ ಅಮಿತ್​ ಶಾ ಅನುಪಸ್ಥಿತಿಯಲ್ಲಿ ಮಹತ್ವದ ಸಭೆ
ರಾಜ್ಯ ನಾಯಕರ ಜೊತೆ ಬಿಜೆಪಿ ಚಾಣಕ್ಯ ಅಮಿತ್ ಶಾ ನಡೆಸಬೇಕಿದ್ದ ಮಹತ್ವದ ಸಭೆಯನ್ನು ಬಿಜೆಪಿ ಚುನಾವಣಾ ಉಸ್ತುವಾರಿಗಳು ನಡೆಸಿದರು. ರೇಸ್​ಕೋರ್ಸ್ ರಸ್ತೆಯಲ್ಲಿರುವ ತಾಜ್​ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಧರ್ಮೇಂದ್ರ ಪ್ರಧಾನ್ ಮತ್ತು ಮನ್ಸೂಖ್ ಮಾಂಡವೀಯಾ ನೇತೃತ್ವದಲ್ಲಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದರು. ಬೆಂಗಳೂರಿನ ಪ್ರಮುಖರ ಜೊತೆಯಲ್ಲಿ ಉಸ್ತುವಾರಿಗಳು ಸಭೆಯಲ್ಲಿ ಏನೇನೂ ಚರ್ಚೆ ಮಾಡಿದ್ರೂ ಅನ್ನೋದರ ಇನ್​ಸೈಡ್​ ಸ್ಟೋರಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಈ ಬಾರಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20-22 ಸ್ಥಾನ ಗೆಲ್ಬೇಕು

ಸಭೆಯ ಆರಂಭದಲ್ಲೇ ಧರ್ಮೇಂದ್ರ ಪ್ರಧಾನ್ ಬೆಂಗಳೂರಿನ ಬಗ್ಗೆ ಪ್ರಸ್ತಾಪ ಮಾಡಿದ್ರು. ಈ ಬಾರಿ ಬೆಂಗಳೂರಿನಲ್ಲಿ ಗೆಲ್ಲಲು ನಮಗೆ ಪೂರಕವಾದ ವಾತಾವರಣ ಇದೆ. ಯಾವುದೇ ನಾಯಕರು ಅಲಸ್ಯ ಮಾಡದೇ ಮೈ ಚಳಿ ಬಿಟ್ಟು ಎಲ್ಲಾ ನಾಯಕರು ಕೆಲಸ ಮಾಡಬೇಕು. 2018ರ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಗೆದ್ದಿದ್ದು ಮಾತ್ರ 11 ಕ್ಷೇತ್ರಗಳಲ್ಲಿ. ಬಳಿಕ ಆಪರೇಷನ್ ಕಮಲದಿಂದ 4 ಕ್ಷೇತ್ರ ಹೆಚ್ಚಿಸಿಕೊಂಡಿದ್ದೇವೆ. ಈ ಬಾರಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20-22 ಸ್ಥಾನವನ್ನಾದರೂ ಗೆಲ್ಲಬೇಕು. ಹೀಗಾಗಿ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಬೆಂಗಳೂರಿನ ಪ್ರಮುಖರಿಗೆ ಧರ್ಮೇಂದ್ರ ಪ್ರಧಾನ್​ ನೀತಿ ಪಾಠ ಮಾಡಿದ್ರು.

ಇನ್ನು ಧರ್ಮೇಂದ್ರ ಪ್ರಧಾನ್​ ಬಳಿಕ ಮತ್ತೊಬ್ಬ ಉಸ್ತುವಾರಿ ಮನ್ಸೂಖ್​ ಮಾಂಡವೀಯಾ ಕೂಡ ಬೆಂಗಳೂರಿನ ಕಮಲಾಧಿಪತಿಗಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ಮನ್ಸುಖ್​ ಮಾಂಡವೀಯಾ ಏನು ಹೇಳಿದರು..?

ಈಗಾಗಲೇ ನಾವು ಬೂತ್‌ಮಟ್ಟದಲ್ಲಿ ಸಂಘಟನೆ ವಿಚಾರವಾಗಿ ಭದ್ರವಾಗಿ ತಳವೂರಿದ್ದೇವೆ. ಬೆಂಗಳೂರಿನ ಅಂಕಿ ಅಂಶಗಳನ್ನು ಗಮನಿಸಿದರೇ ಗೆಲುವು ಅಸಾಧ್ಯವಾದುದ್ದು ಏನೂ ಅಲ್ಲ. ಪೇಜ್ ಪ್ರಮುಖ್, ಬೂತ್‌ಮಟ್ಟದ ಸಂಘಟನೆ ಆದಿಯಾಗಿ ಕೆಲ ಯಶಸ್ವಿ ಕಾರ್ಯಕ್ರಮಗಳನ್ನು ಈಗಾಗಲೇ ಪಕ್ಷದ ವತಿಯಿಂದ ಮಾಡಿದ್ದೇವೆ. ಅದನ್ನೇ ಮುಂದುವರೆಸೋಣ. ಗೆಲುವಿನ ದಡ ಮುಟ್ಟುವವರೆಗೂ ಶ್ರಮಿಸೋಣ. ಈ ಬಾರಿ ಬೆಂಗಳೂರು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಧಿಸಿ ತೋರಿಸೋಣ ಎಂದು ಮನ್ಸೂಖ್ ಮಾಂಡವೀಯಾ ಸೂಚನೆ ನೀಡಿದ್ರು.

ಬೆಂಗಳೂರಿನ ಎಲೆಕ್ಷನ್​ ಬಗ್ಗೆ ಫಸ್ಟ್​ ಟೈಮ್​ ಇಲ್ಲಿ 2009ರಲ್ಲಿ 17 ಸ್ಥಾನ ಗೆದ್ದಿದ್ದೇವು. ಸೋ ಈಗ ಅದಕ್ಕಿಂತ ಹೆಚ್ಚು ಗೆಲ್ಲಬೇಕು. 20 ಸ್ಥಾನ ದಾಟಬೇಕು ಈ ಬಾರಿ.

ಆರ್​.ಅಶೋಕ್​, ಕಂದಾಯ ಸಚಿವ

ಚುನಾವಣಾ ಉಸ್ತುವಾರಿಗಳ ಮಹತ್ವದ ಸಭೆಗೂ ಮುನ್ನ ಬಿಜೆಪಿ ಚಾಣಕ್ಯ, ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಚಿಂತಕರ ಜೊತೆ ಸಂವಾದ ನಡೆಸಿದ್ರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಅನಾವರಣ ಮಾಡಿದ್ರು. ಹಾಗೂ ಯಾವ ಪಕ್ಷ ಉತ್ತಮ ಅಂತ ಜನ ಅಧ್ಯಯನ ನಡೆಸಿ‌ ತಿಳಿಯಲಿ ಎಂದು ಹೇಳಿದ್ರು. ಇನ್ನು ಕನ್ನಡ, ತೆಲುಗು, ತಮಿಳು ಎಲ್ಲವೂ ನಮ್ಮ ಭಾಷೆ. ಮಾತೃಭಾಷೆಯಲ್ಲೇ ಶಿಕ್ಷಣಕ್ಕೆ ಆಧ್ಯತೆ ಕೊಡಲಾಗಿದೆ ಎಂದು ಭಾಷಾ ಅಸ್ತ್ರವನ್ನು ಪ್ರಯೋಗಿಸಿದರು.

ಇದನ್ನು ಓದಿ: ಮಗ ದೇಶ ಸೇವೆಗೆ ಹೊರಟಿದ್ದ.. ಬೀಳ್ಕೊಡುವಾಗ ದುರಂತ.. ಕಣ್ಣೀರ ಕಥೆ ಹೇಳ್ತಿದೆ ಧಾರವಾಡದ ಅಪಘಾತ

ಒಂದೆಡೆ ಕಾಂಗ್ರೆಸ್​ ಕೂಡ ಬೆಂಗಳೂರಿಗೆ ಸಂಬಂಧ ಪಟ್ಟಂತೆ ಪ್ರತ್ಯಕ ಸರ್ವೇ ವರದಿ ತರಿಸಿಕೊಂಡಿದ್ದು ಬೆಂಗಳೂರನ್ನ ಕೈ ವಶ ಮಾಡಿಕೊಳ್ಳಲು ಮುಂದಾಗಿದೆ. ಇದೀಗ ಬಿಜೆಪಿ ಬೆಂಗಳೂರನ್ನು ಕೇಸರಿಮಯ ಮಾಡಿ ಬೆಂಗಳೂರು ಬಿಜೆಪಿ ಭದ್ರಕೋಟೆ ಅಂತ ಸಾಬೀತು ಮಾಡಲು ಪಣತೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣರಂಗ ಪ್ರವೇಶಿಸಿದ ಉಸ್ತುವಾರಿಗಳು.. ಬೆಂಗಳೂರಿನ 22 ಕ್ಷೇತ್ರಗಳ ಗೆಲ್ಲಲು ಮಾಸ್ಟರ್ ಪ್ಲಾನ್​..!

https://newsfirstlive.com/wp-content/uploads/2023/02/AMIT_Shah.jpg

Load More