newsfirstkannada.com

‘ಹಿಂದೂ ಧರ್ಮವೇ ಟಾರ್ಗೆಟ್‌’- ಹುಲಿ ಉಗುರಿನ ಕೇಸ್‌ಗೆ ಧರ್ಮದ ಟಚ್‌ ಕೊಟ್ಟ ಬಿಜೆಪಿ ಶಾಸಕ ಬೆಲ್ಲದ್‌

Share :

26-10-2023

  ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳನ್ನೇ ಟಾರ್ಗೆಟ್?

  ನವಿಲು ಗರಿಗಳನ್ನು ಬಳಸುವ ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ

  ಕಾನೂನು ಪಾಲಿಸುವುದಾದ್ರೆ 100% ಪಾಲಿಸಿ ಎಂದ ಅರವಿಂದ ಬೆಲ್ಲದ್

ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಹಲವು ಗಣ್ಯರು, ಸೆಲೆಬ್ರಿಟಿಗಳು ಅರಣ್ಯ ಅಧಿಕಾರಿಗಳ ವಿಚಾರಣೆಗೆ ಗುರಿಯಾಗಿದ್ದಾರೆ. ಹುಲಿ ಉಗುರಿನ ಪೆಂಡೆಂಟ್‌ ಪತ್ತೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿರುವಾಗಲೇ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಧರ್ಮದ ಟಚ್ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಅರವಿಂದ ಬೆಲ್ಲದ್ ಅವರು, ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗ್ತಿದೆ. ಮುಸ್ಲಿಂ ಸಮುದಾಯದ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಾರೆ. ಇದೂ ಕೂಡ ಕಾನೂನಿಗೆ ವಿರುದ್ಧವಾದದ್ದು. ಕೇವಲ ಹಿಂದೂ ಧರ್ಮವನ್ನೇ ಟಾರ್ಗೆಟ್ ಮಾಡಿ ಕೇಸ್ ಹಾಕುವಂತಾಗಬಾರದು. ದರ್ಗಾಗಳ ಮೇಲೂ ಕ್ರಮ ತಗೊಳ್ಳುವಂತಾಗಲಿ ಎಂದಿದ್ದಾರೆ.

ರಾಜ್ಯ ಸರ್ಕಾರ ರಾಜ್ಯಾದ್ಯಂತ ದಾಳಿ ಮಾಡಿ ಹುಲಿ ಉಗುರು ಇಟ್ಟುಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಿದೆ. ಯಾರು ನಿಜವಾದ ಹುಲಿ ಉಗುರುಗಳನ್ನು ಹಾಕಿಕೊಂಡಿಲ್ಲ. ನಿಜವಾದ ಹುಲಿ ಉಗುರು ಹಾಕಿಕೊಂಡವರಿಗೆ ಶಿಕ್ಷೆ ಕೊಡಿಸಿ. ಅದರಲ್ಲಿ ನಮ್ಮದು ತಕರಾರು ಇಲ್ಲ. ನಿಜವಾದ ಹುಲಿ ಉಗುರು ಹಾಕಿರುವ ಶೂರರು ಯಾರು ಇಲ್ಲ. ಹೆಚ್ಚಿನ ಜನ ನಕಲಿ ಉಗುರು ಹಾಕಿರುತ್ತಾರೆ ಎಂದು ಬೆಲ್ಲದ್ ಹೇಳಿದ್ದಾರೆ.

ಇನ್ನು, ಸಿಎಂ ಸಿದ್ದರಾಮಯ್ಯನವರು ರಾಜ್ಯದ ಹಲವು ಬೇರೆ, ಬೇರೆ ದರ್ಗಾ, ಮಸೀದಿಗೆ ಹೋಗಿದ್ದಾರೆ. ನವಿಲು ಗರಿಗಳನ್ನು ಇಟ್ಕೊಂಡಿರುವ ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ. ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ. ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತೆ. ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ. ಕಾನೂನು ಕೇವಲ ಹಿಂದೂ ಸಮಾಜಕ್ಕೆ ಅನ್ವಯಿಸಲ್ಲ. ಮುಸ್ಲಿಮರಿಗೂ ಅನ್ವಯಿಸುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ‌ ಪತ್ರ ಬರೆದು ಒತ್ತಾಯ ಮಾಡ್ತೀನಿ. ಸತ್ತ ಪ್ರಾಣಿಗಳ ಚರ್ಮ ಇಟ್ಕೊಳ್ಳೋದು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ. ಯಾರು ನಿಯಮ ಉಲ್ಲಂಘನೆ ಮಾಡ್ತಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಕಾನೂನು ಪಾಲಿಸಿದರೆ 100% ಪಾಲಿಸಿ ಎಂದು ಅರವಿಂದ ಬೆಲ್ಲದ್ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಿಂದೂ ಧರ್ಮವೇ ಟಾರ್ಗೆಟ್‌’- ಹುಲಿ ಉಗುರಿನ ಕೇಸ್‌ಗೆ ಧರ್ಮದ ಟಚ್‌ ಕೊಟ್ಟ ಬಿಜೆಪಿ ಶಾಸಕ ಬೆಲ್ಲದ್‌

https://newsfirstlive.com/wp-content/uploads/2023/10/Aravind-Bellad-tiger-Claw.jpg

Load More