newsfirstkannada.com

‘ಜನವರಿಯಲ್ಲಿ ಹೊಳ್ಳಿ ಅಧಿಕಾರಕ್ಕೆ ಬರೋದು ನಾವೇ’ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಯತ್ನಾಳ್

Share :

14-08-2023

    ರಾಜ್ಯ ಸರ್ಕಾರದ ಆಯಸ್ಸು ಏಳೆಂಟು ತಿಂಗಳ ಅಷ್ಟೇ

    35 ಮಂದಿ ತಯಾರಾದ್ರೆ ಸರ್ಕಾರ ಹೋಗುತ್ತೆ-ಯತ್ನಾಳ್

    ‘ಲೋಕಸಭೆ ಚುನಾವಣೆಗೂ ಮೊದಲೇ ಔಟ್ ಆಗ್ತೀರಿ’

ರಾಜ್ಯ ಕಾಂಗ್ರೆಸ್ ಸರ್ಕಾರದ ಆಯಸ್ಸು ಏಳೆಂಟು ತಿಂಗಳಂತೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಶಾಸಕ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ್, ಬಹಳಷ್ಟು ಕಾರಣಗಳಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯ್ತು. ಬಿಜೆಪಿ ಸರ್ಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಆಯ್ತು. ಕೆಲವೊಬ್ಬರಿಗೆ ಜಾತಿ ಅಭಿಮಾನ ಇರುತ್ತೆ, ದೇಶ ಉಳಿದ್ರೆ ಜಾತಿ ಇರುತ್ತೆ ಎನ್ನುವ ಕಬರ್ ಇರಲ್ಲ. ವಿಜಯಪುರದಲ್ಲಿ ಮುಸ್ಲಿಂ ಅಭ್ಯರ್ಥಿ ಸೋತಿದ್ದಕ್ಕೆ ನಾನು ವಿಜಯಪುರದಲ್ಲಿ ಮೆರವಣಿಗೆ ಮಾಡಿಕೊಳ್ಳಲಿಲ್ಲ ಅಂತ ಇನ್ನೊಬ್ಬ ಮಂತ್ರಿ ಹೇಳ್ತಾನೆ ಎಂದು ಸಚಿವ ಶಿವನಂದ ಪಾಟೀಲ್ ವಿರುದ್ಧ ಪರೋಕ್ಷವಾಗಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ನೀವು ಏನಾದರೂ ಹಿಂದೂಗಳ ಮೇಲೆ ದಾಳಿ ಮಾಡಲು ಶುರುಮಾಡಿದ್ರಿ.. ಜನವರಿ ಒಳಗೆ ಹೊಳ್ಳಿ ಅಧಿಕಾರಕ್ಕೆ ಬರೋದೇ ನಾವು. ನಿಮ್ಮ ಗ್ಯಾರಂಟಿ ಇರೋದೇ ಮಾರ್ಚ್​ ತನಕ. ಲೋಕಸಭೆ ಚುನಾವಣೆಗೂ ಮೊದಲೇ ನೀವು ಔಟ್ ಆಗುತ್ತಿರಿ. ಗ್ರೂಪ್ ತಯಾರಾಗಿದೆ, 35, 45 ಆಗಿದೆ. 35 ಮಂದಿ ತಯಾರು ಆದರು ಅಂದರೆ ಸರ್ಕಾರವೇ ಹೋಗಿ ಬಿಡುತ್ತದೆ. ಅವರಿಗೆ ಯಾವುದೇ ಕಲ್ಪನೆ ಇಲ್ಲ. ಯಾಕಂದ್ರೆ ಬಸವರಾಜರಾಯರೆಡ್ಡಿ ಅವರೇ ಹೇಳಿದ್ದಾರೆ. ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಅಂತಾ ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜನವರಿಯಲ್ಲಿ ಹೊಳ್ಳಿ ಅಧಿಕಾರಕ್ಕೆ ಬರೋದು ನಾವೇ’ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಯತ್ನಾಳ್

https://newsfirstlive.com/wp-content/uploads/2023/08/YATNAL.jpg

Load More