newsfirstkannada.com

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಢಮಾರ್; ಕಾಂಗ್ರೆಸ್​ ಬಗ್ಗೆ ಭವಿಷ್ಯ ನುಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

Share :

10-09-2023

    ಸಚಿವರಾಗದ ಅತೃಪ್ತ ಆತ್ಮಗಳು ಕಾಂಗ್ರೆಸ್ ನಲ್ಲಿ ಇವೆ

    ಕಾಂಗ್ರೆಸ್​​​ನಲ್ಲಿ 50ಕ್ಕೂ ಹೆಚ್ಚು ಶಾಸಕರು ಅಸಮಾಧಾನದಲ್ಲಿದ್ದಾರೆ

    ಲೋಕಸಭಾ ಚುನಾವಣೆಯಲ್ಲಿ 25 ಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಡಮಾರ್​ ಅನ್ನುತ್ತೆ ಅಂತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಾಂಗ್ರೆಸ್​ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಶಾಸಕ ಅವರು​, ಕಾಂಗ್ರೆಸ್ ನಲ್ಲಿ‌ ಅಸಮಾಧಾನ ಹೊಗೆಯಾಡುತ್ತಿದೆ. ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲವೆಂದು ಹಲವರು ಅಸಮಾಧಾನಗೊಂಡಿದ್ದಾರೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಹಣೆ ಬರಹ ಹೀಗಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಬಸನಗೌಡ ಪಾಟೀಲ್​ ಯತ್ನಾಳ್, ಸಚಿವರಾಗದ ಅತೃಪ್ತ ಆತ್ಮಗಳು ಕಾಂಗ್ರೆಸ್ ನಲ್ಲಿ ಇವೆ. ಈ ಅತೃಪ್ತರ ಆತ್ಮಗಳು ಏನು ಮಾಡುತ್ತಾರೊ ನೋಡೊಣ. ಸದ್ಯದ ಸ್ಥಿತಿ ನೋಡಿದರೆ ಕಾಂಗ್ರೆಸ್ ನಲ್ಲಿ 50ಕ್ಕೂ ಹೆಚ್ಚು ಶಾಸಕರು ಅಸಮಾಧಾನದಲ್ಲಿದ್ದಾರೆ ಅನ್ಸುತ್ತೆ ಎಂದಿದ್ದಾರೆ.

ಇನ್ನೂ ನಮ್ಮ ಬಿಜೆಪಿ ಪಕ್ಷದ ಮುಖಂಡರು ಯಾರೂ ಹೋಗಲ್ಲ. ತಮ್ಮ ಪಕ್ಷದಲ್ಲಿ ಶಾಸಕರ ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25 ಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ ಅಂತ ಯತ್ನಾಳ್​ ಭರವಸೆ ನುಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಢಮಾರ್; ಕಾಂಗ್ರೆಸ್​ ಬಗ್ಗೆ ಭವಿಷ್ಯ ನುಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

https://newsfirstlive.com/wp-content/uploads/2023/09/Basavanagouda-Patil-Yatnal.jpg

Load More