ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿ ಆಪರೇಷನ್ ಕಮಲ?
ಸಿಎಂ ರೇಸ್‌ನಲ್ಲಿ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅವರಿದ್ದಾರೆ
ರಮೇಶ್ ಜಾರಕಿಹೊಳಿ ಅವರ ಭವಿಷ್ಯ ಸತ್ಯ ಆಗುವ ಎಲ್ಲಾ ಲಕ್ಷಣಗಳಿವೆ
ವಿಜಯಪುರ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿ ಆಪರೇಷನ್ ಕಮಲಕ್ಕೆ ಕೈ ಹಾಕಲಾಗಿದೆ ಅನ್ನೋ ಆರೋಪ ಸಂಚಲನ ಸೃಷ್ಟಿಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದು ಬಹಳ ದಿನ ಹೋಗುವ ಸರ್ಕಾರವಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಆಯಸ್ಸು ಕಡಿಮೆ ಇದೆ ಎಂದಿದ್ದಾರೆ.
ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ನಲ್ಲಿ ಎಷ್ಟು ಜನ ಸಿಎಂ, ಡಿಸಿಎಂ ಕ್ಯಾಂಡಿಡೇಟ್ ಆಗಬೇಕು ಅಂತಿದ್ದಾರೆ ಗೊತ್ತಾ. ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕಾ ಖರ್ಗೆ, ಡಾ.ಜಿ ಪರಮೇಶ್ವರ್ ಅವರು ಸಿಎಂ ಆಗಬೇಕು ಅಂತಿದ್ದಾರೆ. ಇರೋದು ಒಂದೇ ಸಿಎಂ ಹುದ್ದೆ ಈಗ ಅದರಲ್ಲಿ ಸಿದ್ದರಾಮಯ್ಯನವರಿದ್ದಾರೆ.
ಸಿಎಂ ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರ್ತಾರೆ ಅಂತ ಕಾಂಗ್ರೆಸ್ ಪಕ್ಷದ ಒಂದು ಗುಂಪು ಹೇಳುತ್ತಿದೆ. ಇಲ್ಲಾ ಎರಡೂವರೆ ವರ್ಷಕ್ಕೆ ಬದಲಾವಣೆ ಆಗುತ್ತೆ ಅಂತ ಇನ್ನೊಂದು ಗುಂಪು ಹೇಳುತ್ತಿದೆ. ಈ ಮಾತನ್ನು ಬಿಜೆಪಿಯವರು ಹೇಳ್ತಿಲ್ಲ. ಕಾಂಗ್ರೆಸ್‌ನಲ್ಲಿ ತಾಳಮೇಳ ಇಲ್ಲ ಅಂದ್ರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದು ಸತ್ಯ ಆಗುವ ಲಕ್ಷಣ ಗೋಚರಿಸುತ್ತಿವೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿಜೆಪಿ ನಾಯಕರು ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ. ವಿಡಿಯೋ, ಆಡಿಯೋ ಇದೆ ಅಂತಾರೆ, ಬಹಿರಂಗಪಡಸಲಿ. ಬ್ಲ್ಯಾಕ್ ಮೇಲ್ ಮಾಡೋದು ಬೇಡ. ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ಸಿನ ಮಹಾನಾಯಕರಿದ್ದಾರೆ. ನಕಲಿ ಸಿಡಿ ಮಾಡುವ ಕಂಪನಿ ಕರ್ನಾಟಕ ಸರ್ಕಾರದಲ್ಲಿದೆ. ಡಿಕೆಶಿ ನಕಲಿ ಸಿಡಿ ಸೃಷ್ಟಿಕರ್ತ. ರಮೇಶ್ ಜಾರಕಿಹೊಳಿ ಹೇಳಿದಂತೆ ನಕಲಿ ಸಿಡಿ ವಿಡಿಯೋ ಆಡಿಯೋ ಮಾಡುವ ಶಕ್ತಿ ಕಾಂಗ್ರೆಸ್ಸಿನ ಬಂಡೆಗಲ್ಲಿಗಿದೆ. ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಇದ್ರಲ್ಲಿ ಬಿಜೆಪಿಯವರು ಯಾರು ಇಲ್ಲ. ತಾವೇ ಜಗಳವಾಡಿ ಹಾಳಾಗುವಾಗ ನಮ್ಮದೇನು ಕೆಲಸ ಇದೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ