ತಳ್ಳಾಟದ ವೇಳೆ ಕುಸಿದು ಬಿದ್ದ ಬಸನಗೌಡ ಪಾಟೀಲ್ ಯತ್ನಾಳ್
ತೀವ್ರ ಅಸ್ವಸ್ಥರಾದ ಯತ್ನಾಳ್ ಅವರ ಆರೋಗ್ಯ ಈಗ ಹೇಗಿದೆ?
ಆರೋಗ್ಯ ವಿಚಾರಿಸಿದ ಬಳಿಕ ಸರ್ಕಾರದ ಮೇಲೆ ಬಿಎಸ್ವೈ ಗರಂ
ಬೆಂಗಳೂರು: ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಅಶಿಸ್ತು ತೋರಿದ ಆರೋಪದಡಿ 10 ಬಿಜೆಪಿ ಶಾಸಕರನ್ನು ಇವತ್ತು ಸ್ವೀಕರ್ ಯು.ಟಿ ಖಾದರ್ ಅಮಾನತುಗೊಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಸ್ಪೀಕರ್ ಕೊಠಡಿ ಬಳಿ ನಡೆದ ತಳ್ಳಾಟ, ನೂಕಾಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಮಾರ್ಷಲ್‌ಗಳು ತಡೆದರು. ಈ ವೇಳೆ ಮಾರ್ಷಲ್‌ಗಳು ಅವರ ಕೈ ಕಾಲು ಹಿಡಿದು ಎಳೆದಾಡಿದ್ರು. ಹೀಗಾಗಿ ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದ್ದಿದ್ದರು. ಕೂಡಲೇ ಅವರನ್ನ ವ್ಹೀಲ್ ಚೇರ್ನಲ್ಲಿ ಕರೆದೊಯ್ದು ಆ್ಯಂಬುಲೆನ್ಸ್ ಮೂಲಕ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿಗಿದೆ.
ಇದೀಗ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪನವರು ಭೇಟಿಯಾಗಿದ್ದಾರೆ. ಜೊತೆಗೆ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ವೈದ್ಯರು ಹೇಳೋ ಪ್ರಕಾರ ಎರಡು ದಿನದಲ್ಲಿ ಮನೆಗೆ ಕಳಿಸಿ ಕೊಡ್ತೇವೆ ಅಂದಿದ್ದಾರೆ. ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಯತ್ನಾಳ್ ಆರಾಮವಾಗಿದ್ದಾರೆ ಎಂದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷವನ್ನ ಹತ್ತಿಕ್ಕುವ ಪ್ರಯತ್ನವಿದು. ಇದು ಆಡಳಿತ ಪಕ್ಷಕ್ಕೆ ಶೋಭೆಯಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ತಪ್ಪಾದಾಗ ಕೇಳೋದು ವಿರೋಧ ಪಕ್ಷದ ಹಕ್ಕು. ಈ ರೀತಿ ಕ್ರಮ ತೆಗೆದುಕೊಳ್ಳೋದು ದುರ್ದೈವದ ಸಂಗತಿ. ಬಹುಮತ ಇರೋದ್ರಿಂದ ಸಿದ್ದರಾಮಯ್ಯನವ್ರು ಈ ರೀತಿ ನಡೆವಳಿಕೆ ನಡೆಸಿದ್ರೆ ಶೋಭೆಯಲ್ಲ ಇನ್ನಾದ್ರೂ ಸರಿಪಡಿಸಿಕೊಂಡ್ರೆ ಒಳ್ಳೆಯದು ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಕುಸಿದು ಬಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಮಾರ್ಷಲ್‌ಗಳು ಸ್ಟ್ರೆಚರ್ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. #NewsFirstKannada #Newsfirstlive #KannadaNews #Siddaramaiah #KarnatakaCM @Siddaramaiah @Dkshivakumar @INCKarnataka @BJP4Karnataka… pic.twitter.com/c2AE81LcK8
— NewsFirst Kannada (@NewsFirstKan) July 19, 2023
ವಿಧಾನಸೌಧದಲ್ಲಿ ಇಂದು ನಡೆದ ಗದ್ದಲದ ನಡುವೆ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು. ಶೀಘ್ರದಲ್ಲಿ ಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳುವಂತೆ ಹಾರೈಸಲಾಯಿತು. pic.twitter.com/4MEZnpuVNy
— B.S.Yediyurappa (@BSYBJP) July 19, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ