newsfirstkannada.com

BREAKING: ವಿಧಾನಸೌಧದಲ್ಲಿ ಭಾರೀ ಗಲಾಟೆ; ನೂಕಾಟದ ವೇಳೆ ಕುಸಿದು ಬಿದ್ದ ಬಿಜೆಪಿ ಶಾಸಕ ಯತ್ನಾಳ್

Share :

19-07-2023

  ತಳ್ಳಾಟದ ವೇಳೆ ಕುಸಿದು ಬಿದ್ದ ಬಸನಗೌಡ ಪಾಟೀಲ್ ಯತ್ನಾಳ್

  ಯತ್ನಾಳ್‌ರನ್ನ ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋದ ಮಾರ್ಷಲ್

  ಸ್ಪೀಕರ್ ಕಚೇರಿಯಿಂದ ಶಾಸಕರನ್ನು ತೆರವುಗೊಳಿಸುವಾಗ ಘಟನೆ

ಇಂದು ವಿಧಾನಸಭಾ ಅಧಿವೇಶನದಲ್ಲಿ ನಡೆದ ಗದ್ದಲ, ಗಲಾಟೆಯ ಹಿನ್ನೆಲೆ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿ ಶಾಸಕರನ್ನ ಅಮಾನತು ಮಾಡಿದ್ದರು. ಇದಾದ ಬಳಿಕ ಸ್ಪೀಕರ್ ಕಚೇರಿಯಿಂದ ಬಿಜೆಪಿ ಶಾಸಕರನ್ನ ಮಾರ್ಷಲ್‌ಗಳು ತೆರವುಗೊಳಿಸಲು ಮುಂದಾಗಿದ್ದಾರೆ. ಕೆಂಗಲ್ ಗೇಟ್ ಮೂಲಕ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರ ಹಾಕಿದ್ದಾರೆ.

ಈ ವೇಳೆ ಸ್ಪೀಕರ್ ಗೇಟ್ ಬಳಿ ನೂಕಾಟ, ತಳ್ಳಾಟ ನಡೆದಿದೆ. ನೂಕಾಟ, ತಳ್ಳಾಟದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕುಸಿದು ಬಿದ್ದಿದ್ದಾರೆ. ಅಸ್ವಸ್ಥರಾದಂತೆ ಕಂಡು ಬಂದ ಯತ್ನಾಳ್‌ರನ್ನ ಮಾರ್ಷಲ್‌ಗಳು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಆ್ಯಂಬುಲೆನ್ಸ್‌ಲ್ಲಿ ಯತ್ನಾಳ್ ಅವರನ್ನ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ವಿಧಾನಸೌಧದಲ್ಲಿ ಭಾರೀ ಗಲಾಟೆ; ನೂಕಾಟದ ವೇಳೆ ಕುಸಿದು ಬಿದ್ದ ಬಿಜೆಪಿ ಶಾಸಕ ಯತ್ನಾಳ್

https://newsfirstlive.com/wp-content/uploads/2023/07/yatnal-1-1.jpg

Load More