newsfirstkannada.com

×

VIDEO: ‘ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹದೇಶ್ವರ ನ್ಯಾಯ ಕೊಟ್ಟ’- ಬಿಜೆಪಿ ಶಾಸಕ ಮುನಿರತ್ನ ಯಾಕೆ ಹೀಗಂದ್ರು?

Share :

Published November 6, 2023 at 2:47pm

Update November 6, 2023 at 2:48pm

    ಹುಣಸೆಮಾರನಹಳ್ಳಿಯಲ್ಲಿ ಪರವಾನಗಿ ಪಡೆಯದೆ ಬಂಡೆಗಳ ಸ್ಫೋಟ?

    ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದ ಗಣಿ ಇಲಾಖೆ ಅಧಿಕಾರಿ ಪ್ರತಿಮಾ

    ಚುನಾವಣೆ ಹೊತ್ತಿಗೆ ಮುನಿರತ್ನ ಹೊರಗೆ ಇರಬಾರದು ಅನ್ನೋದು ಪ್ಲಾನ್?

ಬೆಂಗಳೂರು: ಗಣಿ, ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಹತ್ಯೆಗೆ ನಿಜವಾದ ಕಾರಣವೇನು ಅನ್ನೋದನ್ನ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಮಾಜಿ ಸಚಿವ ಮುನಿರತ್ನ ಅವರು ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಭೂ ವಿಜ್ಞಾನಿ ಪ್ರತಿಮಾ ಅವರ ಕೊಲೆ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ಟಾರ್ಗೆಟ್ ಆಗಿದ್ದಾರಾ? ಎಂಬ ಪ್ರಶ್ನೆ ಶಾಸಕ ಮುನಿರತ್ನ ಅವರು ಪ್ರತಿಕ್ರಿಯಿಸಿದರು. ಲೋಕಸಭಾ ಚುನಾವಣೆ ಹೊತ್ತಿಗೆ ಮುನಿರತ್ನ ಹೊರಗೆ ಇರಬಾರದು. ತಿಹಾರ್‌ ಜೈಲಿಗೆ ಕಳಿಸಬೇಕು ಅನ್ನೋದು ಅವರ ಆಲೋಚನೆ. ಅದು ಸಾಧ್ಯವಾಗುತ್ತಿಲ್ಲ. ನಾನು ಈಗ ಎದ್ದು ಬಂದಿದ್ದೇನೆ. ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ಏನಾಗಿದೆ ಅಂತ ನಿಮಗೆ ಗೊತ್ತಿದೆ ಎಂದರು.

ಇನ್ನು, ನನ್ನ ಮನೆ ಮುಂದೆ ಆಕ್ಸಿಡೆಂಟ್ ಆದ್ರೆ ಅದಕ್ಕೆ ಮುನಿರತ್ನನೇ ಕಾರಣ ಎನ್ನುತ್ತಾರೆ. ಸರ್ಕಾರಿ ಅಧಿಕಾರಿ ಪ್ರತಿಮಾ ಅವರ ಕೊಲೆ ಪ್ರಕರಣದಲ್ಲಿ ತನಿಖೆ ಸಂಪೂರ್ಣ ನಡೆಯುತ್ತಿದೆ. ಅದರ ಎಲ್ಲಾ ವರದಿ ಹೊರಗೆ ಬರಲಿ. ಸ್ವಾರ್ಥಕ್ಕೆ, ದುರುದ್ದೇಶ ಪೂರಕವಾಗಿ ಹೇಳಿಕೆ ಕೊಡಬಾರದು. ಆದರೆ ಸದ್ಯ ಆ ಮಹದೇಶ್ವರ ನ್ಯಾಯ ಒದಗಿಸಿದ್ದಾನೆ ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆ. ಪ್ರತಿಮಾ ಅವರ ಕೊಲೆ ಕಾರಣವಾದ ಡ್ರೈವರ್ ಕಿರಣ್ ಎಂಬುವವರನ್ನ ಪೊಲೀಸರು ಮಲೆ ಮಹದೇಶ್ವರ ಬೆಟ್ಟದ ಬಳಿ ಬಂಧಿಸಿ ಕರೆ ತಂದಿದ್ದಾರೆ. ಹೀಗಾಗಿ ಮಹದೇಶ್ವರನೇ ನ್ಯಾಯ ಒದಗಿಸಿದ್ದಾನೆ ಎಂದಿದ್ದಾರೆ.

ಮುನಿರತ್ನ ಮೇಲೆ ಕಾಂಗ್ರೆಸ್ ಆರೋಪವೇನು?

ಭೂವಿಜ್ಞಾನಿ ಪ್ರತಿಮಾ ಹತ್ಯೆ ಬಳಿಕ ಕಾಂಗ್ರೆಸ್ ಕಾನೂನು ಘಟಕ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆರೋಪ ಮಾಡಿತ್ತು. ಹುಣಸೆಮಾರನಹಳ್ಳಿಯಲ್ಲಿ ಪರವಾನಗಿ ಪಡೆಯದೆ ಬಂಡೆಗಳ ಸ್ಫೋಟ ಮಾಡಲಾಗಿತ್ತು. ಭೂ ವಿಜ್ಞಾನಿ ಪ್ರತಿಮಾ ಅವರು ಈ ಸಂಬಂಧ ವರದಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಈ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನು A2 ಮಾಡಲಾಗಿತ್ತು. ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು. ಸರ್ಕಾರಕ್ಕೆ ರಾಜಸ್ವಧನದಲ್ಲೂ ನಷ್ಟ ಉಂಟು ಮಾಡಿದ್ದಾರೆಂದು ವರದಿಯಲ್ಲಿ ಆರೋಪಿಸಲಾಗಿತ್ತು.

ಗಣಿ ಇಲಾಖೆ ಅಧಿಕಾರಿ ಪ್ರತಿಮಾ ಅವರ ಕೊಲೆಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಆಯಾಮದಲ್ಲೂ ಸಹ ತನಿಖೆ ನಡೆಸುವ ಅಗತ್ಯವಿದೆ. ಶಾಸಕ ಮುನಿರತ್ನಗೂ ನೋಟಿಸ್ ನೀಡಿ ವಿಚಾರಣೆ ಮಾಡಬೇಕೆಂದು ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯಮುಕುಂದರಾಜ್‌ ಒತ್ತಾಯ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹದೇಶ್ವರ ನ್ಯಾಯ ಕೊಟ್ಟ’- ಬಿಜೆಪಿ ಶಾಸಕ ಮುನಿರತ್ನ ಯಾಕೆ ಹೀಗಂದ್ರು?

https://newsfirstlive.com/wp-content/uploads/2023/11/Bjp-Mla-Muniratna-On-Pratima-Case.jpg

Load More