newsfirstkannada.com

×

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ.. ಕೋರ್ಟ್‌ನಲ್ಲಿ ಮುನಿರತ್ನ ಅಳಲು; ಜಡ್ಜ್‌ ಹೇಳಿದ್ದೇನು ಗೊತ್ತಾ?

Share :

Published September 21, 2024 at 2:03pm

    ನನ್ನ ಪೂರ್ತಿ 5 ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿದ್ದಾರೆ ಎಂದ ಮುನಿರತ್ನ

    2ನೇ ಬಾರಿಗೆ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಪಾಲು

    ಪರಪ್ಪನ ಅಗ್ರಹಾರ ಜೈಲಿನ ಬಳಿಯೇ ಬಂಧಿಸಿದ್ದ ಕಗ್ಗಲೀಪುರ ಪೊಲೀಸರು

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಪೊಲೀಸರ ಆತಿಥ್ಯಕ್ಕೆ ರೋಸಿ ಹೋಗಿದ್ದಾರೆ. ಪ್ರತಿ ದಿನ ನನ್ನ ಮೇಲೆ ಕೇಸ್ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಾ ಇದ್ರೆ ಕೋರ್ಟ್ ಮುಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಮುನಿರತ್ನ ಹೇಳಿದ್ದಾರೆ.

ಇದನ್ನೂ ಓದಿ: ಆಕೆ ನನಗೆ ಚೆನ್ನಾಗಿ ಪರಿಚಯ- ಮಹಿಳೆಯ ಗಂಭೀರ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಮುನಿರತ್ನ 

ಅತ್ಯಾಚಾ*ರ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. 42ನೇ ACMM ಕೋರ್ಟ್​ ಮುಂದೆ ಇಂದು ಪೊಲೀಸರು ಮುನಿರತ್ನ ಅವರನ್ನು ಹಾಜರು ಪಡಿಸಿದ್ದರು. ಜಡ್ಜ್ ಮುಂದೆ ತಮ್ಮ ಅಳಲು ತೋಡಿಕೊಂಡ ಶಾಸಕ ಮುನಿರತ್ನ ಅವರು ನಾನು ಯಾವ ತಪ್ಪು ಮಾಡಿಲ್ಲ. ಲೋಕಸಭಾ ಚುನಾವಣೆ ಬಳಿಕ ಇದೆಲ್ಲಾ ಶುರುವಾಗಿದೆ. 5 ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಿಸಿದ್ದಾರೆ. ಆಗಲೇ ಕೊಡಬಹುದಿತ್ತಲ್ವಾ? ನನ್ನ ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿದ್ದಾರೆ. ನಮ್ಮ ಜೊತೆಯಲ್ಲಿದ್ದವರಿಂದಲೇ ನನ್ನ ವಿರುದ್ಧ ಎತ್ತಿಕಟ್ಟಿ ಕೇಸ್ ದಾಖಲಿಸುತ್ತಿದ್ದಾರೆ.

ಪ್ರತಿದಿನ ನನ್ನ ವಿರುದ್ಧ ಒಂದಲ್ಲ ಒಂದು ಕೇಸ್ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡ್ತಾರೆ ಅಂದ್ರೆ ಕೋರ್ಟ್ ಮುಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸದ ಕಾರಣಕ್ಕೆ ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದರು. ಇದಕ್ಕೆ ಉತ್ತರಿಸಿದ ಜಡ್ಜ್‌ ನೀವು ರಾಜೀನಾಮೆ ಎಲ್ಲಿ ಕೊಡಬೇಕೋ ಅಲ್ಲಿ ಕೊಡಿ ಎಂದು ಹೇಳಿದರು.

ಇದನ್ನೂ ಓದಿ: ನಾನು ಯಾವುದೋ ನಾಯಕರ ಮೆಚ್ಚಿಸಲು ರಾಜ್ಯಾಧ್ಯಕ್ಷನಾಗಿಲ್ಲ -ಸ್ವಪಕ್ಷದ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್ 

ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲು!
ಕೆಲ ದಿನಗಳ ಹಿಂದೆ ಜಾತಿ ನಿಂದನೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸರು ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಮುನಿರತ್ನ ಅವರನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಶಾಸಕ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಬಳಿಯೇ ಬಂಧಿಸಿದ್ದರು. ಇದೀಗ ಅಕ್ಟೋಬರ್​ 5ರವರೆಗೆ ಮುನಿರತ್ನ ಅವರಿಗೆ ನ್ಯಾಯಾಂಗ ಬಂಧನ ಆಗಿದೆ. ಇದೀಗ ಮತ್ತೆ ಎರಡನೇ ಬಾರಿಗೆ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ.. ಕೋರ್ಟ್‌ನಲ್ಲಿ ಮುನಿರತ್ನ ಅಳಲು; ಜಡ್ಜ್‌ ಹೇಳಿದ್ದೇನು ಗೊತ್ತಾ?

https://newsfirstlive.com/wp-content/uploads/2024/09/BJP-MLA-Munirathana-2.jpg

Load More