newsfirstkannada.com

ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಿಜೆಪಿ ಶಾಸಕ; ಅರ್ಧ ಗಂಟೆಗೂ ಹೆಚ್ಚು ಕಾಲ S.T. ಸೋಮಶೇಖರ್ ಚರ್ಚೆ ನಡೆಸಿದ್ದೇನು?

Share :

21-08-2023

    ಮತ್ತಷ್ಟು ಕುತೂಹಲ ಮೂಡಿಸಿದ ಯಶವಂತಪುರ ಶಾಸಕನ ನಡೆ

    ಕ್ಷೇತ್ರದ ಸಮಸ್ಯೆಯ ನೆಪದಲ್ಲಿ ‘ಆ’ ವಿಚಾರ ಚರ್ಚೆ ಮಾಡಿದ್ರಾ?

    ನನಗೆ ಪಕ್ಷದ ಮೇಲೆ ಅಸಮಧಾನ ಇಲ್ಲ ಎಂದ STS

ಮೈತ್ರಿ ಸರ್ಕಾರ ಪತನ ಮಾಡಿ, ಬಿಜೆಪಿಗೆ ವಲಸೆ ಹೋಗಿದ್ದವರು, ಮರಳಿ ಕಾಂಗ್ರೆಸ್​ ಗೂಡು ಸೇರಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿರುವಾಗಲೇ ಎಸ್​ಟಿ ಸೋಮಶೇಖರ್​ ನಡೆ ಕುತೂಹಲ ಮೂಡಿಸಿದೆ. ವಲಸಿಗರ ಘರ್​ವಾಪಸಿಗೆ ಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಇದೀಗ ಎಸ್​.ಟಿ.ಸೋಮಶೇಖರ್​, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದು ಹಲವು ಅನುಮಾನಗಳಿಗೆ ಹೆಡೆ ಮಾಡಿಕೊಟ್ಟಿದೆ.

ಸಿಎಂ ಸಿದ್ದರಾಮಯ್ಯ ಭೇಟಿಯಾದ ಎಸ್​ಟಿ. ಸೋಮಶೇಖರ್​

ಕೆಲದಿನಗಳಿಂದ ರಾಜ್ಯದಲ್ಲಿ ಆಪರೇಷನ್​ ರಾಜಕೀಯ ಸದ್ದು ಮಾಡ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್,​ ವಲಸೆ ಹೋದವರಿಗೆ ಗಾಳ ಹಾಕಲು ಮುಂದಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್​ ಅವರೇ ಮೊದಲ ವಿಕೆಟ್​ ಎಂಬ ಮಾತು ಕೇಳಿಬಂದಿತ್ತು. ಇನ್ನು ಎಸ್​.ಟಿ.ಸೋಮಶೇಖರ್ ಅವರ ಇತ್ತೀಚಿನ​ ನಡೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿತ್ತು. ವಲಸಿಗರ ಘರ್​ವಾಪಸಿಗೆ ಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಶಾಸಕ ಎಸ್​.ಟಿ.ಸೋಮಶೇಖರ್​ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿರುವುದು ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಜೊತೆ ಎಸ್​ಟಿಎಸ್​ ಚರ್ಚೆ

ಕಾಂಗ್ರೆಸ್​ ತೊರೆದು ಹೋಗಿದ್ದ ವಲಸೆ ಶಾಸಕರ ಘರ್​ವಾಪಸಿ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಎಸ್​.ಟಿ.ಸೋಮಶೇಖರ್​, ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ, ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಿದ್ದಾರೆ. ಇನ್ನು ಸಿಎಂ ಭೇಟಿ ಬಳಿಕ ಮಾತನಾಡಿದ ಎಸ್​.ಟಿ.ಸೋಮಶೇಖರ್​, ಸಿಎಂ ಅವರಿಗೆ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ, ಇವತ್ತು ಬರೋಕೆ ಹೇಳಿದ್ರು. ಆಗಾಗಿ ಭೇಟಿಯಾಗಿದ್ದೇನೆ ಅಷ್ಟೆ. ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮೂರು ಮನವಿ ಮಾಡಿದ್ದೇನೆ ಎಂದು ಎಸ್​ಟಿ. ಸೋಮಶೇಖರ್​ ಸ್ಪಷ್ಟನೆ ನೀಡಿದ್ರು.

‘ಕಾಂಗ್ರೆಸ್​ಗೆ ಸೇರುವ ಆಸೆ ಇದ್ದರವರು ಹೋಗುತ್ತಾರೆ’

ಇನ್ನು ತಮ್ಮ ಬೆಂಬಲಿಗರ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಎಸ್​.ಟಿ.ಸೋಮಶೇಖರ್​, ನನ್ನ ಬೆಂಬಲಿಗರು ಹೋಗ್ತಿಲ್ಲ. ಕೆಲ ಕಾರ್ಪೋರೇಟರ್​ಗಳು ಹೋಗ್ತಿದ್ದಾರೆ. ನನಗೆ ಬಿಜೆಪಿ ಪಕ್ಷದ ಮೇಲೆ ಅಸಮಾಧಾನ ಇಲ್ಲ. ಕ್ಷೇತ್ರದ ವಿಚಾರವಾಗಿ ಅಸಮಧಾನ ಇದೆ. ಈಗಾಗಲೇ ಸಿಟಿ ರವಿ, ಆರ್ ಅಶೋಕ್ ಮಾತಾಡಿ ಸರಿಪಡಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯಲ್ಲೇ ಇರುವುದಾಗಿ ತಿಳಿಸಿದ್ದಾರೆ.

ಮತ್ತೆ ಸಿದ್ದರಾಮಯ್ಯರನ್ನು ಹೊಗಳಿದ ಬಿಜೆಪಿ ಶಾಸಕ

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್​.ಟಿ.ಸೋಮಶೇಖರ್​ ಸಚಿವರಾಗಿದ್ದರು. ಹೀಗಾಗಿ ಸಿದ್ದರಾಮಯ್ಯ ಜೊತೆ ಉತ್ತಮ ಓಡನಾಟ ಹೊಂದಿದ್ದಾರೆ. ಈಗಲೂ ಕೂಡ, ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ್ದಾರೆ. ಅವರಿಗೆ ಬಿಜೆಪಿ, ಜೆಡಿಎಸ್​, ಕಾಂಗ್ರೆಸ್​ ಶಾಸಕರೆಂಬ ಯಾವುದೇ ಭೇದವಿಲ್ಲ. ಎಲ್ಲರಿಗೂ ಸಹಾಯ ಮಾಡುವಂತವರು ನಮ್ಮ ಮುಖ್ಯಮಂತ್ರಿಗಳು ಎಂದು ಹೊಗಳಿದ್ದಾರೆ.

ಶಿವಮೊಗ್ಗದಿಂದ ಕಾಂಗ್ರೆಸ್​ನ ಮೊದಲ ‘ಆಪರೇಷನ್​ ಹಸ್ತ’ ಸ್ಟಾರ್ಟ್​

ಇನ್ನು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಸಿಗದಿದ್ದಕ್ಕೆ ಬಿಜೆಪಿ ತೊರೆದು ಜೆಡಿಎಸ್​ ಸೇರಿದ್ದ ಆಯನೂರು ಮಂಜುನಾಥ್​, ಶೀಘ್ರದಲ್ಲೇ ಕಾಂಗ್ರೆಸ್​ ಸೇರ್ಪಡೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್​ ಪರಾಜಿತರಾಗಿದ್ದರು. ಸದ್ಯ ಜೆಡಿಎಸ್​ನ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್​ ಸೇರ್ಪಡೆ ಆಗುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಆದ್ರೆ, ನಾನು ಸೇರುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಸಿಗೋದಾದ್ರೆ ಆ ಪಕ್ಷ ಸೇರ್ತೀನಿ ಎಂದು ಆಯನೂರು ಮಂಜುನಾಥ್​ ಹೇಳಿದ್ದಾರೆ. ಇನ್ನು ಇವರಷ್ಟೇ ಅಲ್ಲ ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗರಾಜ್ ಗೌಡ ಕೂಡ ಕಾಂಗ್ರೆಸ್​ಗೆ ವಾಪಸ್​ ಆಗುವ ಸಾಧ್ಯತೆ ಇದೆ.

ಒಟ್ಟಾರೆ. ಪ್ರಚಂಡ ಜಯದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್​, ಲೋಕಸಭೆ ಚುನಾವಣೆಗೆ ಟಾರ್ಗೆಟ್​ 20 ಫಿಕ್ಸ್​ಮಾಡಿಕೊಂಡಿದೆ. ಆಪರೇಷನ್​ ಹಸ್ತದ ಮೂಲಕ ಟಾರ್ಗೆಟ್​ ರೀಚಾಗಲು ಪ್ಲಾನ್​ ಮಾಡಿದೆ. ಆದ್ರೆ, ವಲಸಿಗರು ಘರ್​ವಾಪಸಿ ಆಗ್ತಾರಾ.. ಎಸ್​​ಟಿ ಸೋಮಶೇಖರ್​​ ಅವರೇ ಮೊದಲ ವಿಕೆಟಾ ಅನ್ನೋದನ್ನು ಕಾದುನೋಡಬೇಕಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಿಜೆಪಿ ಶಾಸಕ; ಅರ್ಧ ಗಂಟೆಗೂ ಹೆಚ್ಚು ಕಾಲ S.T. ಸೋಮಶೇಖರ್ ಚರ್ಚೆ ನಡೆಸಿದ್ದೇನು?

https://newsfirstlive.com/wp-content/uploads/2023/08/ST-Somashekar-2.jpg

Load More