newsfirstkannada.com

ದರ್ಶನ್ ನನ್ನ ಸ್ನೇಹಿತ ಆದರೆ.. ಬಂಧನದ ಬಳಿಕ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಏನಂದ್ರು?

Share :

Published June 22, 2024 at 2:22pm

  ದರ್ಶನ್ ಅವ​ರನ್ನು ಸೇಫ್ ಮಾಡುತ್ತಿದ್ದೇನೆ ಅನ್ನೋ ವಿಚಾರ

  ದರ್ಶನ್ ಅವರನ್ನು ಯಾವಾಗಲು ನಾನು ಭೇಟಿ ಆಗುತ್ತಿರಲಿಲ್ಲ

  ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ ಎಂದ ಸತೀಶ್ ರೆಡ್ಡಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಪೊಲೀಸರು ಬಹಳ ವೇಗವಾಗಿ ತನಿಖೆ ಕೈಗೊಂಡು ಈ ಹೈವೋಲ್ಟೇಜ್ ಪ್ರಕರಣ ಯಾವುದೇ ಕಾರಣಕ್ಕೂ ದಿಕ್ಕು ತಪ್ಪದಂತೆ ಎಚ್ಚರ ವಹಿಸಿದ್ದಾರೆ. ಆದರೆ ನಟ ದರ್ಶನ್ ಅವರನ್ನು ಸೇಫ್ ಮಾಡಲು ಪ್ರಭಾವಿ ಶಾಸಕರು, ಸಚಿವರು ಪ್ರಯತ್ನಿಸಿದ್ದರು ಅನ್ನೋ ಮಾತು ಕೇಳಿ ಬಂದಿತ್ತು.

ನಟ ದರ್ಶನ್ ಬಂಧನದ ಬಳಿಕ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸಾಕಷ್ಟು ಊಹಾಪೋಹಗಳ ಮಧ್ಯೆ ದರ್ಶನ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ಅವರ ಹೆಸರು ಚರ್ಚೆಗೆ ಗುರಿಯಾಗಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಹಲವು ದಿನಗಳ ಬಳಿಕ ಶಾಸಕ ಸತೀಶ್ ರೆಡ್ಡಿ ಅವರು ಖುದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ದರ್ಶನ್ ಅವ​ರನ್ನ ಸೇಫ್ ಮಾಡುತ್ತಿದ್ದೇನೆ ಅನ್ನೋ ಸುದ್ದಿ ಸುಳ್ಳು. ನಾನು ದರ್ಶನ್‌ರನ್ನ ಭೇಟಿಯಾಗಿ 3 ತಿಂಗಳು ಆಗಿದೆ. ಈ ವಿಚಾರಕ್ಕೆ ನನ್ನನ್ನ ತಳುಕು ಹಾಕ್ತಿರೋದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್. ದರ್ಶನ್ ಅವರು ನನ್ನ ಸ್ನೇಹಿತರಾಗಿದ್ದು 3-6 ತಿಂಗಳಿಗೊಮ್ಮೆ ಭೇಟಿಯಾಗುತ್ತಿದ್ದೆ. ಪ್ರತಿದಿನ ದರ್ಶನ್ ಅವರನ್ನು ನಾನು ಭೇಟಿ ಆಗುತ್ತಿರಲಿಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗಬೇಕು.

ದರ್ಶನ್ ಪರವಾಗಿ ನಾನು ಯಾರ ಬಳಿಯೂ ಕೇಳಿಲ್ಲ. ನಾನು ಒತ್ತಡ ಹಾಕ್ತಿದ್ದೀನಿ ಅನ್ನೋದು ಸುಳ್ಳು. ನನಗೆ ಕಾಲು ಮುರಿದಿದ್ದ ಸಂದರ್ಭದಲ್ಲಿ ದರ್ಶನ್ ಅವರು ಆಸ್ಪತ್ರೆಗೆ ನನ್ನ ಭೇಟಿಯಾಗಲು ಬಂದಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ. ದರ್ಶನ್ ತಪ್ಪು ಮಾಡಿದ್ದಾರಾ ಇಲ್ವಾ ಅನ್ನೋದು ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ ಎಂದು ಸತೀಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ನನ್ನ ಸ್ನೇಹಿತ ಆದರೆ.. ಬಂಧನದ ಬಳಿಕ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಏನಂದ್ರು?

https://newsfirstlive.com/wp-content/uploads/2024/06/Satish-Reddy-BJP-MLA.jpg

Load More