newsfirstkannada.com

BREAKING: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಎಸ್‌.ಟಿ ಸೋಮಶೇಖರ್‌; ಕಾಂಗ್ರೆಸ್ ಸೇರೋದು ಪಕ್ಕಾನಾ?

Share :

20-08-2023

  ಕೊನೆಗೂ ಗುರುವಿನ ಮೊರೆ ಹೋದ ಮಾಜಿ ಶಿಷ್ಯ ಎಸ್‌ಟಿಎಸ್‌

  ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ, ಸೋಮಶೇಖರ್ ಚರ್ಚೆ

  ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲು ತೆರೆಮರೆಯ ಸಿದ್ಧತೆ?

ಬೆಂಗಳೂರು: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕರ ಮೇಲೆ ಬೇಸರ ಹೊರ ಹಾಕಿದ ಮೇಲೆ ಎಸ್‌.ಟಿ ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನಲಾಗ್ತಿದೆ. ಆಪರೇಷನ್ ಹಸ್ತದ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಹೆಬ್ಬಾರ್, ಸೋಮಶೇಖರ್ ಕಾಂಗ್ರೆಸ್​ ಸೇರೋದು ಬಹುತೇಕ ಫಿಕ್ಸ್; ಡಿ.ಕೆ.ಶಿವಕುಮಾರ್ ಸ್ಫೋಟಕ ಹೇಳಿಕೆ ಏನು ಗೊತ್ತಾ..?

ಶಿವಾನಂದ ಸರ್ಕಲ್‌ ಬಳಿಯ ಸರ್ಕಾರಿ ನಿವಾಸಕ್ಕೆ ಶಾಸಕ ಎಸ್‌.ಟಿ ಸೋಮಶೇಖರ್ ತೆರಳಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಸಿದ್ದರಾಮಯ್ಯ ಜೊತೆ ಎಸ್‌.ಟಿ ಸೋಮಶೇಖರ್ ಚರ್ಚೆ ನಡೆಸಿರೋದು ಕುತೂಹಲ ಕೆರಳಿಸಿದೆ. ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಬಾಂಬೆ ಬಾಯ್ಸ್‌ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಅನ್ನೋ ವಿಷಯ ಚರ್ಚೆಯಾಗುತ್ತಿದೆ. ಘರ್‌ ವಾಪ್ಸಿ, ಆಪರೇಷನ್ ಹಸ್ತದ ಚರ್ಚೆ ಜೋರಾಗಿರುವಾಗಲೇ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನ ದಿಢೀರ್ ಭೇಟಿಯಾಗಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಜೊತೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ರಾಜಕೀಯ ನಡೆಯೋ ಸಾಧ್ಯತೆಗಳಿವೆ. ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ಮಾಡಲಿದ್ದಾರೆ ಎಂದು ಬಿಜೆಪಿ, ಜೆಡಿಎಸ್‌ ಶಾಸಕರು ಆರೋಪಿಸುತ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅವ್ರು ಮಾಡಿದ್ರೆ ಕರೆಕ್ಟ್‌ ನಾವು ಮಾಡಿದ್ರೆ ತಪ್ಪಾ ಎಂದು ಕೇಳಿದ್ದರು. ಆಪರೇಷನ್ ಹಸ್ತದ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿರುವಾಗಲೇ ಎಸ್‌.ಟಿ ಸೋಮಶೇಖರ್ ಅವರ ನಡೆ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಎಸ್‌.ಟಿ ಸೋಮಶೇಖರ್‌; ಕಾಂಗ್ರೆಸ್ ಸೇರೋದು ಪಕ್ಕಾನಾ?

https://newsfirstlive.com/wp-content/uploads/2023/08/ST-Somashekar-2.jpg

Load More