newsfirstkannada.com

ಬಿಜೆಪಿ ವಲಸೆ ಶಾಸಕರ ‘ಘರ್‌ ವಾಪಸಿ’ ಪಕ್ಕಾನಾ?; ಎಸ್‌.ಟಿ ಸೋಮಶೇಖರ್ ಕೊಟ್ರು ಸ್ಫೋಟಕ ಸುಳಿವು

Share :

17-08-2023

    2019ರಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿದ್ದವರು ವಾಪಸ್?

    ‘ಈ ನನ್ ಮಗನನ್ನ ಸೋಲಿಸಬೇಕು ಅಂತಾ ಪ್ಲಾನ್ ಮಾಡಿದ್ದಾರೆ’

    ಡಿ.ಕೆ ಶಿವಕುಮಾರ್ ಜೊತೆ ಎಸ್‌.ಟಿ ಸೋಮಶೇಖರ್ ಚರ್ಚಿಸಿದ್ದೇನು?

ಬೆಂಗಳೂರು: 2019ರಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿದ್ದ ಶಾಸಕರು 2023ರಲ್ಲೇ ವಾಪಸ್ ಕಾಂಗ್ರೆಸ್‌ಗೆ ಬರುತ್ತಾರೆ ಅನ್ನೋ ಚರ್ಚೆ ರಾಜ್ಯ ರಾಜಕೀಯದಲ್ಲಿ ಜೋರಾಗಿದೆ. ಈ ಬಗ್ಗೆ ಗುಸುಗುಸು ಕೇಳಿ ಬರುತ್ತಿರುವ ಮಧ್ಯೆ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ನನ್ ಮಗನನ್ನ ಸೋಲಿಸಬೇಕು ಅಂತಾ ಸ್ಥಳೀಯ ಬಿಜೆಪಿವರು ಆಡಿಯೋ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಬಿಜೆಪಿಯವರೇ ನನಗೆ ಕಾಂಗ್ರೆಸ್‌ಗೆ ಕಳಿಸುವಂತಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ಹೊಸ ಬಿರುಗಾಳಿ.. ಬಾಂಬೆ ಟೀಂ ‘ಘರ್​ವಾಪ್ಸಿ’ಗೆ ನಡೀತಿದೆ ಮಾಸ್ಟರ್​ ಪ್ಲಾನ್..!

ಈ ಘರ್ ವಾಪಸಿ ಚರ್ಚೆ ಹಿನ್ನೆಲೆಯಲ್ಲಿ ಶಾಸಕ‌ ಎಸ್.ಟಿ‌ ಸೋಮಶೇಖರ್ ಅವರು ತಮ್ಮ ಕ್ಷೇತ್ರದಲ್ಲಿ ಮಹತ್ವದ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಸಭೆಗೂ ಮುನ್ನ ಮಾತನಾಡಿದ ಅವರು ಇತ್ತೀಚೆಗೆ ನನ್ನ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂದಿದ್ರು. ಅವರು ಬರೋದರ ಬಗ್ಗೆ ನನಗೆ ಯಾವ ಅಧಿಕಾರಿಯೂ ಹೇಳಿರಲಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಆಗ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ರು. ಈ ವೇಳೆ ಅವರ ಬಗ್ಗೆ ಒಂದೆರೆಡು ಒಳ್ಳೆಯ ಮಾತಾಡಿದ್ದು ನಿಜ. ಅದನ್ನು ಹೊರತುಪಡಿಸಿ ನಾನು ಅವರ ಜತೆ ರಾಜಕೀಯ ಮಾತಾಡಿಲ್ಲ ಎಂದು ಎಸ್‌.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ರು.

ಡಿಸಿಎಂ ಡಿ.ಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದ ಎಸ್‌.ಟಿ ಸೋಮಶೇಖರ್

ಇನ್ನು, ಈ ನನ್ ಮಗನನ್ನ ಸೋಲಿಸಬೇಕು ಅಂತಾ ಸ್ಥಳೀಯ ಬಿಜೆಪಿವ್ರು ಆಡಿಯೋ ಮಾಡಿದ್ದಾರೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಬಿಜೆಪಿ ಬಿಟ್ ಹೋಗಲ್ಲ. ಇದರಲ್ಲಿ ಅನುಮಾನ ಇಲ್ಲ. ನಾನು ಪಕ್ಷ ಬಿಡ್ತೀನಿ ಅಂತಾ ಹೇಳಿಲ್ಲ. ರಾಜ್ಯ ಮಟ್ಟದ ಬಿಜೆಪಿ ನಾಯಕರಲ್ಲಿ ನನಗೆ ಗೌರವ ಇದೆ. ಎಲ್ಲ ನಾಯಕರೂ ಗೌರವದಿಂದ ಮಾತಾಡ್ತಾರೆ. ಆದರೆ ಸ್ಥಳೀಯರು ನನ್ನನ್ನು ಕಳಿಸಬೇಕು ಅಂತಾನೇ ಮಾಡ್ತಿದ್ದಾರೆ. ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದ್ರು. ನನ್ನ ವಿರುದ್ಧ ಸೋಲಿಸಬೇಕು ಅಂತಾ ಆಡಿಯೋ ವೈರಲ್ ಮಾಡಿದ್ರು. ಇದನ್ನೆಲ್ಲಾ ನೋಡಿದ್ರೆ ಬಿಜೆಪಿಯವರೇ ನನಗೆ ಕಾಂಗ್ರೆಸ್‌ಗೆ ಕಳಿಸುವಂತಿದೆ ಎಂದು ಎಸ್‌.ಟಿ ಸೋಮಶೇಖರ್ ಹೇಳಿದ್ದಾರೆ.

ಇದೇ ವೇಳೆ, ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಎಲ್ಲೂ ಹೇಳಿಲ್ಲ. ನಮ್ಮ ಕಾರ್ಯಕರ್ತರ ಜೊತೆಗೂ ಹೇಳಿಕೊಂಡಿಲ್ಲ. ಇವತ್ತು ಬೆಳಗ್ಗೆ ನಳಿನ್ ಕುಮಾರ್ ಕಟೀಲ್ ಹಾಗೂ ಸಿ.ಟಿ ರವಿ ಅವರು ಫೋನ್ ಮಾಡಿದ್ರು. ಸದಾನದಂದ ಗೌಡರೂ ಮನೆಗೆ ಕರೆಸಿ ಮಾತಾಡಿದ್ರು. ರಾಜ್ಯ ಮಟ್ಟದ ಬಿಜೆಪಿ ನಾಯಕರಿಗೆ ನನ್ನ ಮೇಲೆ ನಂಬಿಕೆ ಇದೆ. ಆದ್ರೆ ಸ್ಥಳೀಯವಾಗಿ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಆಗ್ತಿದೆ. ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ವಲಸೆ ಶಾಸಕರ ‘ಘರ್‌ ವಾಪಸಿ’ ಪಕ್ಕಾನಾ?; ಎಸ್‌.ಟಿ ಸೋಮಶೇಖರ್ ಕೊಟ್ರು ಸ್ಫೋಟಕ ಸುಳಿವು

https://newsfirstlive.com/wp-content/uploads/2023/08/ST-Somashekar.jpg

Load More