newsfirstkannada.com

ಗೃಹ ಸಚಿವ ಪರಮೇಶ್ವರ್​​ ಮಗನ ಲಿಂಗ ಪರಿವರ್ತನೆ ಮಕ್ಕಳಾಟವೇ?- ಬಿಜೆಪಿ ಶಾಸಕ ಯಶ್​ ಪಾಲ್​​

Share :

28-07-2023

    ಗೃಹ ಸಚಿವ ಪರಮೇಶ್ವರ್​​ ಮಗನ ಬಗ್ಗೆ ವಿವಾದಾತ್ಮಕ ಹೇಳಿಕೆ

    ಪರಮೇಶ್ವರ್​​ ಮಗನ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

    ಭಾರೀ ವೈರಲ್​ ಆಯ್ತು ಬಿಜೆಪಿ ಶಾಸಕ ಯಶ್​ ಪಾಲ್​​ ಹೇಳಿಕೆ..!

ಉಡುಪಿ: ಇತ್ತೀಚೆಗೆ ಉಡುಪಿ ಖಾಸಗಿ ಕಾಲೇಜುವೊಂದರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದರು ಎನ್ನಲಾದ ಕೇಸ್​ ಸಂಬಂಧ ರಾಜ್ಯ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು. ಘಟನೆ ಖಂಡಿಸಿ ಉಡುಪಿಯಲ್ಲಿ ನಡೆದ ಬೃಹತ್​​​ ಪ್ರತಿಭಟನೆಯಲ್ಲಿ ಮಾತಾಡಿದ್ದ ಬಿಜೆಪಿ ಶಾಸಕ ಯಶ್​​ ಪಾಲ್​​​, ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಗನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಶಾಸಕ ಯಶ್​ ಪಾಲ್​​, ಖಾಸಗಿ ಕಾಲೇಜು ಶೌಚಾಲಯದಲ್ಲಿ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿದ್ದು ಖಂಡನೀಯ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದು ತಮಾಷೆ ಆಗಿರಬಹುದು. ಆದರೆ, ವಿಡಿಯೋ ರೆಕಾರ್ಡ್​ ಮಾಡಿದ್ದು ತಮಾಷೆ ವಿಚಾರವಲ್ಲ ಎಂದಿದ್ದರು.

ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟವೇ? ಇಂದು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ವಿದ್ಯಾರ್ಥಿಗಳು ನಾಳೆ ಬಾಂಬ್ ಇಡಲು ಹಿಂಜರಿಯುವುದಿಲ್ಲ ಎಂದು ಕಿಡಿಕಾರಿದ್ದರು.

ಇನ್ನು, ಶಾಸಕ ಯಶ್​​ ಪಾಲ್​​​ ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದು ತಮಾಷೆ ಆಗಿರಬಹುದು ಎಂಬ ಹೇಳಿಕೆ ಭಾರೀ ವೈರಲ್​ ಆಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್​​​ ನಿರಾಕರಿಸಿದ್ದಾರೆ.

ಏನಿದು ಉಡುಪಿ ಘಟನೆ..?

ಇತ್ತೀಚೆಗೆ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರು ಮತ್ತೊಂದು ಧರ್ಮಕ್ಕೆ ಸೇರಿದ ಯುವತಿ ವಿಡಿಯೋ ಚಿತ್ರೀಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿ, ತಮಾಷೆಗಾಗಿ ವಿಡಿಯೋ ಮಾಡಿರುವುದಾಗಿ ಯುವತಿರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಈ ಕೇಸ್​ ಸಂಬಂಧ ಪೊಲೀಸರು ಮೂವರು ವಿದ್ಯಾರ್ಥಿನಿಯರ ಮೇಲೆ ಎಫ್​ಐಆರ್​ ಮಾಡಿದ್ದಾರೆ. ಜತೆಗೆ ಸೋಷಿಯಲ್​ ಮೀಡಿಯಾದಲ್ಲಿ ಇದರ ಬಗ್ಗೆ ಪೋಸ್ಟ್​ ಹಾಕಿದ್ದ ಯುವತಿ ವಿರುದ್ಧವೂ ಸುಳ್ಳು ಸುದ್ದಿ ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದರು ಎಂದು ಕೇಸ್​ ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹ ಸಚಿವ ಪರಮೇಶ್ವರ್​​ ಮಗನ ಲಿಂಗ ಪರಿವರ್ತನೆ ಮಕ್ಕಳಾಟವೇ?- ಬಿಜೆಪಿ ಶಾಸಕ ಯಶ್​ ಪಾಲ್​​

https://newsfirstlive.com/wp-content/uploads/2023/07/Yash-Pal.jpg

Load More