newsfirstkannada.com

ಕಂಗನಾ ಕೇಳಿದ ಒಂದೇ ಒಂದು ಬೇಡಿಕೆಗೆ ಮಹಾರಾಷ್ಟ್ರದಲ್ಲಿ ಅಲ್ಲೋಲ, ಕಲ್ಲೋಲ; ಆಗಿದ್ದೇನು?

Share :

Published June 26, 2024 at 5:55pm

Update June 26, 2024 at 5:56pm

  ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಿ ಎಂದ ಸಂಜಯ್ ರಾವತ್‌!

  ಅಧಿಕಾರಿಗಳ ಬಳಿ ವಿಶೇಷ ಬೇಡಿಕೆ ಇಟ್ಟ ಸಂಸದೆ ಕಂಗನಾ ರಣಾವತ್

  ಮಹಾರಾಷ್ಟ್ರ ಬದಲು ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಿದ್ದೇಕೆ?

ನವದೆಹಲಿ: ಸಂಸತ್ತಿಗೆ ಆಯ್ಕೆಯಾಗಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಒಂದು ವಿಶೇಷ ಮನವಿ ಮಾಡಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಬಿಜೆಪಿ ಸಂಸದೆಯ ಈ ಡಿಮ್ಯಾಂಡ್‌ಗೆ ಶಿವಸೇನೆ, ಎನ್‌ಸಿಪಿ ನಾಯಕರು ನಿಗಿನಿಗಿ ಕೆಂಡವಾಗಿದ್ದಾರೆ.

ಇದನ್ನೂ ಓದಿ: ಕಂಗನಾ ಕೆನ್ನೆಗೆ ಹೊಡೆದ CISF ಅಧಿಕಾರಿ ಯಾರು..? ಕುಲ್ವಿಂದರ್ ಕೌರ್ ಕುರಿತ 7 ವಿಚಾರಗಳು ಇಲ್ಲಿದೆ..! 

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಂಗನಾ ರಣಾವತ್‌ ಅವರಿಗೆ ದೆಹಲಿ ವಾಸ್ತವ್ಯಕ್ಕೆ ಮಹಾರಾಷ್ಟ್ರ ಸಿಎಂ ಸೂಟ್‌ ಬೇಕಂತೆ. ಇತ್ತೀಚೆಗೆ ದೆಹಲಿಯ ಮಹಾರಾಷ್ಟ್ರ ಸದನಕ್ಕೆ ಸಂಸದೆ ಕಂಗನಾ ರಣಾವತ್ ಭೇಟಿ ನೀಡಿದ್ದರು. ಎಲ್ಲಾ ರೂಮ್‌ಗಳನ್ನು ಪರಿಶೀಲಿಸಿದ ಕಂಗನಾ ಅವರು ಮಹಾರಾಷ್ಚ್ರ ಸದನದ ರೂಮುಗಳು ಕಿರಿದಾಗಿವೆ. ಆದರೆ ಸಿಎಂ ಸೂಟ್ ಮಾತ್ರ ವಿಶಾಲವಾಗಿದೆ. ಹೀಗಾಗಿ ಮಹಾರಾಷ್ಟ್ರ ಸಿಎಂ ಸೂಟ್‌ ವಾಸ್ತವ್ಯಕ್ಕೆ ಬೇಕು ಎಂದಿದ್ದಾರೆ.

ಮಹಾರಾಷ್ಟ್ರ ಸಿಎಂ ಸೂಟ್ ಅನ್ನೇ ತನ್ನ ವಾಸ್ತವ್ಯಕ್ಕೆ ನೀಡಿ ಎಂದು ಕಂಗನಾ ರಣಾವತ್ ಅವರು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಕಂಗನಾ ರಣಾವತ್‌ ಅವರ ಈ ಬೇಡಿಕೆ ಈಗ ಮಹಾರಾಷ್ಟ್ರದಲ್ಲಿ ರಾಜಕಾರಣಿಗಳ ವಾಗ್ವಾದಕ್ಕೆ ಕಾರಣವಾಗಿದೆ.

ವಿರೋಧ ಪಕ್ಷಗಳು ಕೆಂಡಾಮಂಡಲ!
ಬಿಜೆಪಿ ಸಂಸದೆ ಕಂಗನಾ ರಣಾವತ್ ಬೇಡಿಕೆಗೆ ಮಹಾರಾಷ್ಟ್ರದ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ. ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರು ಕಂಗನಾ ರಣಾವತ್ ಅವರಿಗೆ ಮಹಾರಾಷ್ಟ್ರ ಸದನದ ಸಿಎಂ ಸೂಟ್‌ ಬದಲು ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮುಂಬೈ, ಪಂಜಾಬ್, ಮನಾಲಿಯಲ್ಲಿ ಕೋಟಿ ಕೋಟಿ ಆಸ್ತಿ.. ಬಿಜೆಪಿ ಅಭ್ಯರ್ಥಿ ಕಂಗನಾ ಎಷ್ಟು ಕೋಟಿ ಒಡತಿ..? 

ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಕಂಗನಾ ತಮ್ಮ ಕರ್ಮಭೂಮಿ ಮಹಾರಾಷ್ಟ್ರ ಬದಲು ಜನ್ಮಭೂಮಿ ಹಿಮಾಚಲದಿಂದ ಸ್ಪರ್ಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಸಹ ದೆಹಲಿಯಲ್ಲಿ ವಾಸ್ತವ್ಯಕ್ಕೆ ರೂಮು ನೀಡಲು ಮಹಾರಾಷ್ಟ್ರ ಸದನದ ಬದಲು ಹಿಮಾಚಲ ಭವನದ ಅಧಿಕಾರಿಗಳನ್ನು ಕೇಳಿ ಎನ್ನುತ್ತಿದ್ದಾರೆ.

ಕಂಗನಾ ಸಿಎಂ ಸೂಟ್ ಕೇಳಿದ್ದೇಕೆ?
ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಸಂಸದರಿಗೆ ನೀಡುವ ಮನೆ ಹಂಚಿಕೆಗೂ ಮುನ್ನ ಆಯಾ ರಾಜ್ಯದ ಭವನದ ರೂಮುಗಳಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗುತ್ತೆ. ಈ ವೇಳೆ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಭವನ ಬಿಟ್ಟು ಮಹಾರಾಷ್ಟ್ರ ಸದನದ ರೂಮು ಕೇಳಿದ್ದಾರೆ. ಇದು ತೀವ್ರ ಚರ್ಚೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಗನಾ ಕೇಳಿದ ಒಂದೇ ಒಂದು ಬೇಡಿಕೆಗೆ ಮಹಾರಾಷ್ಟ್ರದಲ್ಲಿ ಅಲ್ಲೋಲ, ಕಲ್ಲೋಲ; ಆಗಿದ್ದೇನು?

https://newsfirstlive.com/wp-content/uploads/2024/06/Kangana-Ranaut-maharashtra.jpg

Load More