newsfirstkannada.com

ಅನ್ನಭಾಗ್ಯ ‘ಅಕ್ಕಿ ಪಾಲಿಟಿಕ್ಸ್’​ ಬಗ್ಗೆ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ

Share :

21-06-2023

    ಹೀಗೆ ಹೇಳಿದ್ರೆ ಕೇಂದ್ರ ಸರ್ಕಾರ ಅಕ್ಕಿ ಕೊಡಬಹುದು

    ಇದು ಬಡವರ ವಿಷಯ‌, ನನ್ನದು, ನಿನ್ನದು ಅಲ್ಲ- ಸಂಸದ

    ಅಕ್ಕಿ ವಿಷಯದಲ್ಲೊಂದು ಬಹಳ‌ ದುರಂತ ಆಗಿದೆ-ಜಿಗಜಿಣಗಿ

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡದ ವಿಚಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ.. ನಾನು ಐದು ಕೆಜಿ ಅಕ್ಕಿ ಕೊಡ್ತೀನಿ, ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತೆ ಅಂದಿದ್ದರೆ ಆರಾಮಾಗಿ ಅಕ್ಕಿ ಸಿಗುತ್ತಿತ್ತು ಅನ್ನೋ ಮೂಲಕ ಪರೋಕ್ಷವಾಗಿ ಉದ್ದೇಶಪೂರ್ವಕವಾಗಿಯೇ ಮೋದಿ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದಿದ್ದಾರೆ.

ಅಕ್ಕಿ ವಿಷಯದಲ್ಲೊಂದು ಬಹಳ‌ ದುರಂತ. ಸಿದ್ದರಾಮಯ್ಯ ಹಿಂದೆ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ಅಷ್ಟೊಂದು ಖಬರ್ ಬ್ಯಾಡ್ವಾ? 10 ಕೆಜಿ ನಾವೇ ಕೊಡ್ತೀವಿ ಅಂತ ಲುಂಗಿ ಏರಿಸಿ ಹೇಳಿದ್ರೀ ನೀವೇ ಕೊಡ್ರಪ್ಪಾ ಈಗ. ಕೇಂದ್ರ ‌ಸರ್ಕಾರದವರು ಅಕ್ಕಿ ಕೊಡ್ತಾರೋ ಇಲ್ವೋ ಅನ್ನೋದು ಯೋಚನೆ ಮಾಡಿ ಹೇಳಬಿಕಿಲ್ವೋ? ಎಂದು ಪ್ರಶ್ನೆ ಮಾಡಿದರು.

ಈಗಲಾದರೂ ಮೋದಿ ಅವರು 5 ಕೆಜಿ, ನಮ್ಮದು ಐದು ಕೆಜಿ ಅಕ್ಕಿ ಕೊಡ್ತೀವಿ ಅಂತ ಹೇಳಿ. ನೀವು ಮೊದಲು ಇದನ್ನು ಹೇಳ್ರಿ, ಆಮೇಲೆ ಕೊಡ್ತಾರೋ, ಬಿಡ್ತಾರೋ ನೋಡೋಣ. ಇದು ಬಡವರ ವಿಷಯ‌, ನನ್ನದು ಅಲ್ಲ, ನಿನ್ನದು ಅಲ್ಲ. ಮಹಾಮಾರಿ ಬಂದಿತ್ತಲ್ಲ, ಜನರ ಬದುಕಿಸಲಿಲ್ವಾ? ಪುಕ್ಕಟೆ ಕೊಡಲಿಲ್ವಾ ಎಂದು ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನಭಾಗ್ಯ ‘ಅಕ್ಕಿ ಪಾಲಿಟಿಕ್ಸ್’​ ಬಗ್ಗೆ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2023/06/RAMESH_JIGAJINAGI.jpg

Load More