newsfirstkannada.com

ಪ್ರಧಾನಿ ಬಳಿ ಹೋಗೋದು ರಾಜಕೀಯ; ಕಾವೇರಿಗಾಗಿ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿ; ತೇಜಸ್ವಿ ಸೂರ್ಯ

Share :

23-08-2023

  ಬೆಂಗಳೂರು ಸಂಪೂರ್ಣವಾಗಿ ಕಾವೇರಿ ನೀರಿನ ಮೇಲೆ ಅವಲಂಬನೆ

  ಸರಿಯಾದ ವಾದ ಮಾಡಿಸದೇ ಇರುವುದರಿಂದ ತಮಿಳುನಾಡಿಗೆ ನೀರು

  ಜೀವಜಲಕ್ಕಾಗಿ ಮೊದಲು ಕಾನೂನು ಹೋರಾಟ ಪ್ರಬಲವಾಗಿ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರು ಸಂಪೂರ್ಣವಾಗಿ ಕಾವೇರಿ ನೀರಿನ ಮೇಲೆ ಅವಲಂಬನೆ ಆಗಿದೆ. ಕಾವೇರಿ ನೀರಾವರಿ ಮಂಡಳಿ ಮುಂದೆ ರಾಜ್ಯ ಸರ್ಕಾರ ಸರಿಯಾದ ವಾದ ಮಾಡಿಲ್ಲ. ಹೀಗಾಗಿ 10 ಸಾವಿರ ಕ್ಯೂಸೆಕ್ಸ್ ನೀರು ಬಿಡೋ ಹಾಗೇ ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಕರೆದಿದ್ದ ಸರ್ವ ಪಕ್ಷ ನಾಯಕರ ಸಭೆಯಲ್ಲಿ ಭಾಗಿಯಾದ ಅವರು, ತಮ್ಮ ವಿಚಾರಗಳನ್ನು ಮಂಡಿಸಿದರು. ಸಭೆ ಮುಗಿದ ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕು ಎಂದು ಹೇಳಿದರು.

ಕಾವೇರಿ ಬೋರ್ಡ್‌ ಮುಂದೆ ರಾಜ್ಯ ಸರ್ಕಾರ ಸರಿಯಾದ ವಾದ ಮಾಡಿಲ್ಲ. ಇದಕ್ಕೆ ನಾವು ವಿರೋಧ ಮಾಡಿದ್ವಿ. ಆದರೆ ನೆಲ, ಜಲ ವಿಷಯದಲ್ಲಿ ನಾವು ಸರ್ಕಾರದ ಜೊತೆಗೆ ಇರುತ್ತೇವೆ. ಇದೇ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ನೀರು ಬಿಡುಗಡೆಯ ಅರ್ಜಿ ವಿಚಾರ‌ಣೆಗೆ ಬರಲಿದೆ. ಆಗ ಸಮರ್ಥವಾಗಿ ವಾದ ಮಂಡಿಸಬೇಕು. ತಮಿಳುನಾಡು ಹೆಚ್ಚು ನೀರು ಸಂಗ್ರಹ ಮಾಡಿದ್ದ ಬಗ್ಗೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ; ಮೋದಿ ಜತೆ ಮಾತಾಡಲು ಬಿಜೆಪಿ, JDS ಬೆಂಬಲ ಕೋರಿದ CM ಸಿದ್ದು ಏನಂದ್ರು?

ಈ ಬಾರಿ ಕರ್ನಾಟಕದಲ್ಲಿ ಮುಂಗಾರು ಮುಗಿದು ಹೋಗಿದೆ. ಶೇಕಡಾ 42ರಷ್ಟು ಮಳೆ ಕೊರತೆ ಆಗಿದೆ. ಇದನ್ನ ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು. ಸರ್ವ ಪಕ್ಷ ನಾಯಕರ ಸಭೆಯಲ್ಲಿ ಇದನ್ನೇ ತಿಳಿಸಿದ್ದೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿಯೇ ಹಿಂದೆಲ್ಲ ನಿಲುವು ತಳೆದಿದೆ. ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ಕರ್ನಾಟಕದ ಪರ ಇದೆ. ಈಗ ಕರ್ನಾಟಕ ಸರ್ಕಾರ ಮೊದಲು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯದ ಹಿತಕ್ಕಾಗಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

ಇನ್ನು, ಮಹದಾಯಿ, ಮೇಕೆದಾಟು ವಿಚಾರವೂ ಕೋರ್ಟ್‌ನಲ್ಲಿದೆ. ಇದನ್ನ ಕೋರ್ಟ್ ವ್ಯಾಪ್ತಿಯಲ್ಲಿ ಇತ್ಯರ್ಥ ಮಾಡಿಕೊಳ್ಳಲು‌ ಸಲಹೆ ಕೊಡಲಾಗಿದೆ. ಪ್ರಧಾನಿ ಬಳಿಗೆ ಸರ್ವಪಕ್ಷ ನಾಯಕರ ನಿಯೋಗ ಹೋಗೋದು ರಾಜಕೀಯದ ವಿಚಾರ. ಮೊದಲು ಕೋರ್ಟ್‌ನಲ್ಲಿ ಪ್ರಬಲವಾಗಿ ವಾದ ಮಾಡಬೇಕು. ಕೋರ್ಟ್‌ನಲ್ಲಿರೋ ವಿಷಯ ಹೇಗೆ ಪ್ರಸ್ತಾಪ ಮಾಡೋಕೆ ಆಗುತ್ತೆ. ಮೊದಲು ಕಾನೂನು ಹೋರಾಟ ಪ್ರಬಲವಾಗಿ ಮಾಡಬೇಕು ಎಂದು ತೇಜಸ್ವಿ ಸೂರ್ಯ ಸಲಹೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರಧಾನಿ ಬಳಿ ಹೋಗೋದು ರಾಜಕೀಯ; ಕಾವೇರಿಗಾಗಿ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿ; ತೇಜಸ್ವಿ ಸೂರ್ಯ

https://newsfirstlive.com/wp-content/uploads/2023/08/Tejasvi-Surya-Dk-Suresh.jpg

Load More