/newsfirstlive-kannada/media/post_attachments/wp-content/uploads/2024/11/GANIGA_RAVIKUMAR.jpg)
ಮಂಡ್ಯ: ಬಿಜೆಪಿಯವರು ಸೇರಿ ಸರ್ಕಾರ ಕೆಡವಲು 50 ಅಲ್ಲ, 100 ಕೋಟಿ ಆಫರ್ ಮಾಡುತ್ತಿದ್ದಾರೆ ಎಂದು ಶಾಸಕ ಗಣಿಗ ರವಿಕುಮಾರ್ ಅವರು ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ 50 ಶಾಸಕಗೆ ತಲಾ 50 ಕೋಟಿ ರೂಪಾಯಿ ಆಫರ್ ಹೇಳಿಕೆ ಬೆನ್ನಲ್ಲೇ ಇದೀಗ ಗಣಿಗ ರವಿಕುಮಾರ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮಂಡ್ಯದಲ್ಲಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್ ಅವರು, ಬಿಜೆಪಿಯವರು ಆಪರೇಷನ್​​ ಕಮಲ ಮಾಡುವುದು ಬಿಡಬೇಕು. ಬಿಜೆಪಿಯವರು ಸರ್ಕಾರ ಕೆಡವಲು 50 ಅಲ್ಲ, 100 ಕೋಟಿ ಆಫರ್ ಮಾಡುತ್ತಿದ್ದಾರೆ. ಬಿಜೆಪಿ- ಜೆಡಿಎಸ್ ಸೇರಿ ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. ನಮ್ಮ ಶಾಸಕರು ಯಾರು ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ ಎಂದು ಹೇಳಿದ್ದಾರೆ.
ಕಿತ್ತೂರು, ಚಿಕ್ಕಮಗಳೂರಿನ ಶಾಸಕರನ್ನ ಇವರು ಯಾಕೆ ಸಂಪರ್ಕ ಮಾಡಿದರು?. ಆಮಿಷ ಒಡ್ಡಿದ್ದಾರೆ. ಶಾಸಕರ ಭೇಟಿಯ ಆಡಿಯೋ, ವೀಡಿಯೋ ರೆಕಾರ್ಡ್ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಹೇಳಿದ ಮಾತು ನಿಜ. ಕಾಂಗ್ರೆಸ್​ ಶಾಸಕರನ್ನು ವಿರೋಧ ಪಕ್ಷದವರು ಎಲ್ಲಿ, ಯಾವ ಗೆಸ್ಟ್‌ಹೌಸ್‌ಗೆ ಬಂದಿದ್ದರು, ಯಾವ ಏರ್​ಪೋರ್ಟ್​​ನಲ್ಲಿ ಸಿಕ್ಕಿದ್ದರು ಎನ್ನುವುದರ ಆಡಿಯೋ, ವೀಡಿಯೋ ಎಲ್ಲ ರೆಕಾರ್ಡ್ ಆಗಿವೆ. ಅವು ನಮ್ಮಲ್ಲಿವೆ. ಇದನ್ನೆಲ್ಲ ಸಿಎಂ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆ ಮಾಡಲು ಪ್ಲಾನ್.. M-UTS ಮೂಲಕ ಪ್ರಯಾಣಿಕರಿಗೆ ಟಿಕೆಟ್​ ವಿತರಣೆ
/newsfirstlive-kannada/media/post_attachments/wp-content/uploads/2024/11/HD_TAMMAYYA.jpg)
ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್ ಮಾತನಾಡಿ, ಆಫರ್ ಯಾವುದು ಇಲ್ಲ. ಅಲ್ಲಿಯು ನಮ್ಮ ಗೆಳೆಯರು ಇದ್ದಾರೆ. ಸುಮ್ಮನೇ ಮಾತು ಆಡುವಾಗ ಮಧ್ಯೆದಲ್ಲಿ ಮಾತನಾಡಿದ್ದರು ಅಷ್ಟೇ. ದುಡ್ಡು, ಅಧಿಕಾರದ ಬಗ್ಗೆ ಮಾತನಾಡಿಲ್ಲ. ನಮ್ಮ ಸರ್ಕಾರ ಬಿಟ್ಟು ಏನು ಮಾಡೋಕೆ ಆಗಲ್ಲ. ಇದು ಇವಾಗಿಂದು ಅಲ್ಲ. ಯಾವಗೋ ಮಾತನಾಡಿದ್ದು ಎಂದು ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಆರೋಪ ಸಂಬಂಧ ಮಾತನಾಡಿದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್​.ಡಿ ತಮ್ಮಯ್ಯ ಅವರು, ನಾನು 17-18 ವರ್ಷ ಬಿಜೆಪಿಯಲ್ಲಿದ್ದೆ. ನನ್ನ ನಿಷ್ಠೆ, ಪ್ರತಿಷ್ಠೇ ಬಗ್ಗೆ ಮಾತನಾಡೋಕೆ ಅವಕಾಶ ಕೊಟ್ಟಿರಲಿಲ್ಲ. ಕಾಂಗ್ರೆಸ್​​ನಲ್ಲೂ ನಿಷ್ಠೆಯಿಂದಲೇ ಇರುತ್ತೇನೆ. ರವಿ ಗಣಿಗ ಅವರು ಯಾಕೆ ಈ ತರ ಹೇಳಿಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ನಮ್ಮನ್ನ ಯಾರೂ ಕೂಡ ಸಂಪರ್ಕ ಮಾಡಿಲ್ಲ. ಆ ವಿಷಯದ ಬಗ್ಗೆ ಮಾತನಾಡಿಲ್ಲ. ನಾನು ಕಾಂಗ್ರೆಸ್​​ನ ನಿಷ್ಠಾವಂತ ಶಾಸಕ. ಸಿದ್ದರಾಮಯ್ಯ, ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಂಬಿ 136 ಸ್ಥಾನಗಳನ್ನು ಜನರು ಕೊಟ್ಟಿದ್ದಾರೆ. ಈ ರೀತಿ ಯಾಕೆ ಊಹಾಪೋಹಾ ಹೇಳಿಕೆ ಕೊಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us