newsfirstkannada.com

ಯತೀಂದ್ರ ವಿರುದ್ಧ ಡಿಕೆಶಿ ಕೋಪ ಮಾಡಿಕೊಂಡ್ರಾ..? ಏನಿದು ಬಿಜೆಪಿ ಆರೋಪ..?

Share :

13-07-2023

  ‘ಕಾಂಗ್ರೆಸ್​​ನಲ್ಲಿ ಆಂತರಿಕ ಜಗಳ ನಡೆಯುತ್ತಿದೆ’

  ‘ಡಿಕೆಶಿ ಇಲಾಖೆಯಲ್ಲೂ ಯತೀಂದ್ರ ಹಸ್ತಕ್ಷೇಪ’

  ಬಿಜೆಪಿಯಿಂದ ಕಾಂಗ್ರೆಸ್​ ಜಗಳದ ಬಗ್ಗೆ ಟ್ವೀಟ್​​

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಪುತ್ರ ಯತೀಂದ್ರ ಸೂಪರ್​ ಸಿಎಂ ಎಂದು ಈಗಾಗಲೇ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಯತೀಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಬಿಜೆಪಿ ಮಾಡಿದ ಟ್ವೀಟ್​ವೊಂದು ಇದಕ್ಕೆ ಪುಷ್ಠಿ ನೀಡುವಂತೆ ಇದೆ.

ಈ ಸಂಬಂಧ ಟ್ವೀಟ್​ ಮಾಡಿದ ಬಿಜೆಪಿ, ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ರಾಜ್ಯದ ಎಟಿಎಂ ಸರ್ಕಾರದ ಒಳಗೆ ನಡೆಯುತ್ತಿದ್ದ ಆಂತರಿಕ ಸಮರಕ್ಕೆ ಮಹತ್ತರ ಸಾಕ್ಷಿ ಲಭಿಸಿದೆ. ಎಲ್ಲಾ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಶಾಡೋ ಸಿಎಂ ಯತೀಂದ್ರ, ಡಿಸಿಎಂ ಡಿ.ಕೆ ಶಿವಕುಮಾರ್​​​​ ಅವರನ್ನು ಬಿಟ್ಟಿಲ್ಲ. ಡಿ.ಕೆ ಶಿವಕುಮಾರ್​​​ ಅವರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡಿದ ಪರಿಣಾಮವೇ ಇದು ಎಂದು ಬರೆದುಕೊಂಡಿದ್ದಾರೆ.

ಯತೀಂದ್ರ ವಿರುದ್ಧ ಆರೋಪ

ಇತ್ತೀಚೆಗೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ವಿಧಾನಸಭಾ ಕಲಾಪದಲ್ಲಿ ಬಹಿರಂಗವಾಗಿ ಯತೀಂದ್ರ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕಾಗಿ ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್​ ಎಂಬ ಕೋಡ್​ ವರ್ಡ್​ ಕೂಡ ಬಳಸಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಆಂತರಿಕ ಜಗಳ ನಡೆದಿದೆ ಎನ್ನಲಾಗಿದೆ.

ನನ್ನ ಗಮನಕ್ಕೆ ಬಾರದೆ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ. ಯಾವುದೇ ಅಧಿಕಾರಿ, ಸಿಬ್ಬಂದಿ ನೇಮಕ ಮಾಡುವಾಗ ನನ್ನ ಗಮನಕ್ಕೆ ತರಲೇಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯತೀಂದ್ರ ವಿರುದ್ಧ ಡಿಕೆಶಿ ಕೋಪ ಮಾಡಿಕೊಂಡ್ರಾ..? ಏನಿದು ಬಿಜೆಪಿ ಆರೋಪ..?

https://newsfirstlive.com/wp-content/uploads/2023/07/DK-Shivakumar_2.jpg

Load More