newsfirstkannada.com

ಕಾಂಗ್ರೆಸ್ ‘ಗ್ಯಾರಂಟಿ’ಗಳ ಮೇಲೆ ಯಡಿಯೂರಪ್ಪ ಯುದ್ಧ; ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ ಹೇಗಿದೆ?

Share :

04-07-2023

  ಗ್ಯಾರಂಟಿಗಳ ಜಾರಿಯಲ್ಲಿ ಮೋಸ, ಅನಗತ್ಯ ಕಂಡೀಷನ್ ಆರೋಪ

  ಯಡಿಯೂರಪ್ಪ ನೇತೃತ್ವದಲ್ಲಿ ಸಂಜೆವರೆಗೂ ಬಿಜೆಪಿ ಧರಣಿ ಸತ್ಯಾಗ್ರಹ

  ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ವಾಪಸ್ ಪಡೆಯಬಾರದು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮರವನ್ನೇ ಸಾರಿದ್ದಾರೆ. 5 ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಮೋಸ, ಅನಗತ್ಯ ಕಂಡೀಷನ್ ಹೇರಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಇವತ್ತು ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಫ್ರೀಡಂಪಾರ್ಕ್‌ನಲ್ಲಿ ಇವತ್ತು ಸಂಜೆವರೆಗೂ ಬಿ.ಎಸ್ ಯಡಿಯೂರಪ್ಪರ ನೇತೃತ್ವದಲ್ಲಿ ಬಿಜೆಪಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ. ಪ್ರತಿಭಟನೆಯ ವೇದಿಕೆಯಲ್ಲಿ ಡಿ.ವಿ ಸದಾನಂದಗೌಡ, ಕೆ.ಎಸ್‌ ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಸಿ. ನಾಗೇಶ್, ಬಿ.ಸಿ‌.ಪಾಟೀಲ್, ಕೆ.ಸಿ. ನಾರಾಯಣಗೌಡ, ಮುರುಗೇಶ್ ನಿರಾಣಿ, ಎನ್.ಮಹೇಶ್ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತಿರಿದ್ದಾರೆ.

ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇವತ್ತು ಸತ್ಯಾಗ್ರಹ ಮಾಡ್ತಿದ್ದೀವಿ. ಕಾಂಗ್ರೆಸ್‌ನವರು ಕೊಟ್ಟ ಭರವಸೆಗಳನ್ನು ಷರತ್ತಿಲ್ಲದೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು, ಜನರಿಗೆ ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಬಾರದು. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು. ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು. ಈ ವಿಚಾರ ಇಟ್ಕೊಂಡು ನಾವು ಹೋರಾಟ ಮಾಡುತ್ತೇವೆ. ಇವತ್ತು ಒಂದೇ ದಿನ ಹೋರಾಟ ನಡೆಯಲಿದೆ. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ರೀತಿ ಹೋರಾಟ ಮಾಡ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ ‘ಗ್ಯಾರಂಟಿ’ಗಳ ಮೇಲೆ ಯಡಿಯೂರಪ್ಪ ಯುದ್ಧ; ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ ಹೇಗಿದೆ?

https://newsfirstlive.com/wp-content/uploads/2023/07/BS-Yediyurappa-2.jpg

Load More