newsfirstkannada.com

‘ಕೈ’ ಸರ್ಕಾರದ ವಿರುದ್ಧ ಕಮಲಪಡೆಯ ಆಕ್ರೋಶ; ಗ್ಯಾರಂಟಿ ಯೋಜನೆಗಳಿಗೆ SCSP, TSP ಹಣ ಬಳಕೆ..?

Share :

05-08-2023

    ಬಿಜೆಪಿಯ ಪ್ರತಿಭಟನೆಗೆ ಹೆಚ್​.ಸಿ.ಮಹದೇವ್​ ತಿರುಗೇಟು

    ಗ್ಯಾರಂಟಿ ಯೋಜನೆಗಳಿಗೆ SCSP, TSP ಹಣ ಬಳಕೆ?

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ

ಹಿಂದುಳಿದ ವರ್ಗಗಳ ಎಸ್ ಸಿಪಿ/ಟಿಎಸ್‌ಪಿ ಯೋಜನೆಯ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಸಂಬಂಧ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರದ ವಿರುದ್ಧ ಒಂದಿಲ್ಲೊಂದು ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ಬೀದಿಗಿಳಿಯುತ್ತಿದೆ. ಇದೀಗ ಹಿಂದುಳಿದ ವರ್ಗಗಳ ಎಸ್ ಸಿಪಿ/ಟಿಎಸ್‌ಪಿ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

11 ಸಾವಿರ ಕೋಟಿ ಹಣಕ್ಕೆ ‘ಕೈ’ ಹಾಕಿದ್ಯಾ ಸರ್ಕಾರ

ಚುನಾವಣಾ ಪೂರ್ವದಲ್ಲಿ ಜನತೆ ನೀಡಿದ ಮಾತನಂತೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದ್ರೆ, ಅದಕ್ಕೂ ಹಣ ಹೊಂದಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಹೀಗಾಗಿ ಇತರೆ ಅನುದಾನಗಳಿಗೆ ಕೈ ಹಾಕಿದೆ. ಅದರಂತೆ ಎಸ್​ಸಿಪಿ/ಟಿಎಸ್​ಪಿ ಯೋಜನೆಗೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 11 ಸಾವಿರ ಕೋಟಿ ಹಣವನ್ನು ಬಳಸಿಕೊಳ್ಳಲು ಜುಲೈ 31ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧಾರಕೈಗೊಂಡಿದೆ. ಇದರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು, ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನುದಾನ ಬಳಕೆ ಮಾಡಿಕೊಳ್ತಿದ್ದಾರೆ ಎಂದು ಪ್ರತಿಭಟನೆ ಮಾಡಿದೆ. ಫ್ರೀಡಂಪಾರ್ಕ್​ನಲ್ಲಿ ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಹಾಗೂ ಇದೊಂದು ದಲಿತ ವಿರೋಧ ಸರ್ಕಾರ. ದಲಿತರಿಗೆ ಮೋಸ ಮಾಡಿದೆ ಎಂದು ಕಿಡಿಕಾರಿದ್ದಾರೆ.

ದೆಹಲಿಯಲ್ಲೂ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಇನ್ನು ರಾಜ್ಯದಲ್ಲಿ ಮಾತ್ರವಲ್ಲ, ದೆಹಲಿಯಲ್ಲೂ ಬಿಜೆಪಿ ಸಂಸದರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಧರಣಿ ನಡೆಸಿ, ವಾಗ್ದಾಳಿ ನಡೆಸಿದ್ದಾರೆ. ಎಸ್​ಸಿ, ಎಸ್​ಟಿಗೆ ಮೀಸಲಿಟ್ಟ ಹಣ ವಾಪಸ್ ಪಡೆದ್ರೆ, ದಲಿತರ ಕಲ್ಯಾಣಕ್ಕೆ ಹಣದ ಕೊರತೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಸಿ, ಎಸ್.ಟಿಗಳಿಗೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಬಿಜೆಪಿ ಸರ್ಕಾರವು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು. ಆದ್ರೆ ನಮ್ಮ ಸರ್ಕಾರ ಎಸ್‌ಸಿ, ಎಸ್‌ಪಿ/ ಟಿಎಸ್‌ಪಿ ಅಧಿನಿಯಮ 2013ರ ಅನ್ವಯವೇ ನಡೆದುಕೊಂಡಿದೆ. ಆದರೆ ನೈತಿಕತೆ ಇಲ್ಲದೇ ಮಾತನಾಡುತ್ತಿರುವ ಇವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ದಲಿತ ದಂಗಲ್​ ತಾರಕಕ್ಕೇರಿದೆ. ಇತ್ತೀಚೆಗೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ರು. ಇದಕ್ಕೆ ಕಾಂಗ್ರೆಸ್​ ಪ್ರತಿಭಟನೆ ನಡೆಸಿತ್ತು. ಇದೀಗ ಅನುದಾನದ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೈ’ ಸರ್ಕಾರದ ವಿರುದ್ಧ ಕಮಲಪಡೆಯ ಆಕ್ರೋಶ; ಗ್ಯಾರಂಟಿ ಯೋಜನೆಗಳಿಗೆ SCSP, TSP ಹಣ ಬಳಕೆ..?

https://newsfirstlive.com/wp-content/uploads/2023/08/bjp-3.jpg

Load More