newsfirstkannada.com

ಸರ್ಕಾರದ ವಿರುದ್ಧ ಬಿಜೆಪಿ ‘ಗ್ಯಾರಂಟಿ’ ವಾರ್; ಫ್ರೀಡಂ ಪಾರ್ಕ್​​ನಲ್ಲಿ BSY ಕದನ!

Share :

05-07-2023

  ಸೋತ ಶಾಸಕರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಕಹಳೆ!

  ಹೋರಾಟದ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ದರ್ಬಾರ್​​​!

  ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟ ಮಾಜಿ ಸಿಎಂ!

ಸದನದಲ್ಲಿ ಬಿಜೆಪಿ ಶಾಸಕರಿಂದ ಹೋರಾಟ ನಡೆಯುತ್ತಿದ್ದರೆ, ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಬಿಎಸ್‌ವೈ ನೇತೃತ್ವದ ಅಡಿಯಲ್ಲಿ ಕಮಲ ಕೆರಳಿ ನಿಂತಿತ್ತು. ಎಲ್ಲಾ ಸೋತ ಶಾಸಕರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ರು. ಗ್ಯಾರಂಟಿ ಅನುಷ್ಠಾನಕ್ಕೆ ಬಿಎಸ್‌ವೈ ವಾರ್ನಿಂಗ್​​ ಕೊಟ್ಟರು. ಇತ್ತ, ಸಿದ್ದು ಸರ್ಕಾರಕ್ಕೆ ಮೂರೇ ತಿಂಗಳು ಆಯುಷ್ಯ ಅಂತ ಈಶ್ವರಪ್ಪ ಹೊಸ ಬಾಂಬ್​​ ಸಿಡಿಸಿ ಅಚ್ಚರಿಗೆ ಕೆಡವಿದರು. ಅತ್ತ ಸದನದಲ್ಲಿ ಮಾತುಗಳ ಅಬ್ಬರ. ಧಿಕ್ಕಾರಗಳ ಮಾರ್ದನ. ನಾಯಕನಿಲ್ಲದೇ ಹೋರಾಟಕ್ಕೆ ಅಣಿಯಾದ ಕೇಸರಿ ಸೇನೆಗೆ ಘೋಷಣೆಗಳೇ ಆಸರೆ ಕೊಟ್ಟರು. ಆಗುವ ಮುಖಭಂಗ ತಪ್ಪಿಸಿಕೊಳ್ಳಲು ಈ ಧಿಕ್ಕಾರಗಳ ಆಶ್ರಯವೇ ಅನಿವಾರ್ಯ ಆಗಿಸಿದೆ.

ಹೋರಾಟದ ಮೂಲಕ ಬಿಜೆಪಿಯಲ್ಲಿ ಬಿಎಸ್​​ವೈ ದರ್ಬಾರ್​​​!
ಸೋತ ‘ಕೇಸರಿ ಸೇನೆ’ಗೆ ನಾಯಕತ್ವ ಕೊಟ್ಟ ಯಡಿಯೂರಪ್ಪ!

ಫ್ರೀಡಂ ಪಾರ್ಕ್​ನಲ್ಲಿ ನಿನ್ನೆ ಬಿಜೆಪಿ ಪ್ರತಿಭಟನೆ ಕಹಳೆ ಮೊಳಗಿಸ್ತು. ಗ್ಯಾರಂಟಿಗಳ ಜಾರಿ ವಿಳಂಬ, ಕಂಡೀಷನ್​ಗಳನ್ನ ಖಂಡಿಸಿ ಬೀದಿಗಿಳಿದಿತ್ತು. ಮಾಜಿ ಸಿಎಂ ಬಿಎಸ್​​ವೈ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹಾಲಿ-ಮಾಜಿ ಸಚಿವರು, ಶಾಸಕರು, ಪರಾಜಿತ ಅಭ್ಯರ್ಥಿಗಳು ಹತಾಶೆಯ ಸಾಥ್​ ನೀಡಿದ್ದರು. ಸಂಜೆ ಐದು ಗಂಟೆವರೆಗೆ ಹೋರಾಟ ನಡೆಸಿದ ಕೇಸರಿ ಸೇನೆ, ಸಂಜೆ ಮನೆಯತ್ತ, ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.

ಇದೇ ವೇಳೆ, ಗ್ಯಾರೆಂಟಿಗಳ ಮಂತ್ರ ಪಠಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್​ ವಿರುದ್ಧ ಯಡಿಯೂರಪ್ಪ ಗುಡುಗಿದರು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಯೋಜನೆ ಜಾರಿ ಮಾಡೋದಾಗಿ ಘೋಷಣೆ ಮಾಡಿ ಈಗ ಮಾತು ತಪ್ಪಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಂದ ಪ್ರತಿಭಟನೆ ಆರಂಭವಾಗಿದೆ. ಮುಂದೇ ಇಡೀ ರಾಜ್ಯಾದ್ಯಂತ ವಿಸ್ತರಣೆ ಆಗಲಿದೆ. ಸ್ವತಃ ತಾವೇ ಹೋರಾಟಕ್ಕೆ ನಾಯಕತ್ವ ನೀಡೋದಾಗಿ ಘೋಷಿಸಿದ್ದಾರೆ.

ಇದು ಕೇವಲ ಪ್ರಾರಂಭ ಮಾತ್ರ. ಎಲ್ಲಾ ಮುಖಂಡರಿಗೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ನವರು ಅಧಿಕಾರವನ್ನು ಬಿಟ್ಟು ತೊಲಗುವ ತನಕ ನಾವು ಹೋರಾಟವನ್ನು ಮಾಡಬೇಕಾಗಿದೆ.

-ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ

ಇನ್ನು, ವೇದಿಕೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಈ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದ್ದು, ಒಂದೂವರೆ ತಿಂಗಳ ಸರ್ಕಾರ ಜನ ವಿರೋಧಿ ಅಂತ ಟೀಕಿಸಿದ್ದರು.

ಇವತ್ತು ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಇದೆ. ಅದಕ್ಕಾಗಿ ಇವತ್ತು ಮಾಜಿ ಸಿಎಂ ಬಿಎಸ್ವೈ ಅವರ ನೇತೃತ್ವದಲ್ಲಿ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ. ಈ ರಾಜ್ಯದ 5 ಭ್ಯಾಗಗಳನ್ನು ಜನರ ಮನೆಗಳಿಗೆ ತಲುಪಿಸುವಂತಹ ಕೆಲಸ ಮಾಡುತ್ತೇವೆ.

-ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್

ಈ ಸರ್ಕಾರದ ಆಯಸ್ಸು ಮೂರು ತಿಂಗಳು
ಭವಿಷ್ಯ ನುಡಿದ ಮಾಜಿ ಡಿಸಿಎಂ ಈಶ್ವರಪ್ಪ

ಮಾಜಿ ಡಿಸಿಎಂ ಈಶ್ವರಪ್ಪ, ಸಿದ್ದು ಸರ್ಕಾರಕ್ಕೆ ಮೂರು ತಿಂಗಳ ಆಯುಷ್ಯದ ಭವಿಷ್ಯ ನುಡಿದಿದ್ದಾರೆ.. ಮಹಾರಾಷ್ಟ್ರ ರಾಜಕಾರಣ ಉಲ್ಲೇಖಿಸಿ ಹೊಸ ಬಾಂಬ್​​ ಎಸೆದ ಈಶ್ವರಪ್ಪ, ಕರ್ನಾಟಕದಲ್ಲೂ ಆ ದಿನಗಳು ದೂರವಿಲ್ಲ. ಇಲ್ಲಿಯೂ ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದು, ಮೂರು ತಿಂಗಳಿನಲ್ಲೇ ಸಿದ್ದು ಸರ್ಕಾರ ಪತನವಾಗಲಿದೆ ಅಂತ ಕಣಿ ಹೇಳಿದ್ದಾರೆ. ಹೋರಾಟ, ಪ್ರತಿಭಟನೆಗಳು ಪಕ್ಕಕ್ಕಿಟ್ಟು ನೋಡಿದ್ರೆ, ಒಳಾಟದ ಮರ್ಮವೇ ಕುತೂಹಲ. ಪೆನ್ಷನ್​​​​ ಪಡಸಾಲೆ ಸೇರಿದ್ದ ಮಾಜಿ ಸಿಎಂ ಯಡಿಯೂರಪ್ಪ, ಇವತ್ತು ನಿಖರ ದಾಂಗುಡಿ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಹೆಣೆದ ಎಲ್ಲಾ ಯಡವಟ್ಟಿನ ಪ್ರಯೋಗಗಳು ಸೋಲಿನ ಮೂಲೆ ಸೇರಿದ್ದು, ಮಾಸ್​​​ ಲೀಡರ್​​​ ಯಡಿಯೂರಪ್ಪ, ಪಕ್ಷವನ್ನ ಬಿಗಿಮುಷ್ಠಿಗೆ ಪಡೆದಿದ್ದಾರೆ. ಸೋತು ಸುಣ್ಣಾಗಿದ್ದ ಪಕ್ಷಕ್ಕೆ ಸರ್ಕಾರದ ವಿರುದ್ಧದ ಸಮರಕ್ಕೆ ಬಿಎಸ್​​ವೈ ಆಸರೆ ಅನಿವಾರ್ಯ ಆಗಿದೆ. ಈ ಮೂಲಕ ಹಳಿ ತಪ್ಪಿಸಿದ್ದ ಬಿಎಸ್​ವೈ ನಾಯಕತ್ವದ ಪರ್ವಕಾಲ ಮತ್ತೆ ಆರಂಭ ಆದಂತೆ ಕಾಣಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದ ವಿರುದ್ಧ ಬಿಜೆಪಿ ‘ಗ್ಯಾರಂಟಿ’ ವಾರ್; ಫ್ರೀಡಂ ಪಾರ್ಕ್​​ನಲ್ಲಿ BSY ಕದನ!

https://newsfirstlive.com/wp-content/uploads/2023/07/bjp-karnataka-3.jpg

Load More