newsfirstkannada.com

ಕಾಂಗ್ರೆಸ್​ ವಿರುದ್ಧ ‘ಕೈ ಕಚ್ಚಾಟ’ದ ಪೋಸ್ಟರ್​ ರಿಲೀಸ್​ ಮಾಡಿದ ಬಿಜೆಪಿ

Share :

19-06-2023

  ಬಿಜೆಪಿ ರಿಲೀಸ್​ ಮಾಡಿದೆ ‘ಕೈ ಕಚ್ಚಾಟ’ದ ಪೋಸ್ಟರ್​

  ಸಿದ್ದುvsಡಿಕೆಶಿ ನಡುವಿನ ಕಿತ್ತಾಟವನ್ನು ಬಿಂಬಿಸುವ ಪೋಸ್ಟರ್​

  ಕಾಂಗ್ರೆಸ್ ವಿರುದ್ಧ ಫೋಸ್ಟರ್ ಕದನಕ್ಕಿಳಿದ ವಿರೋಧ ಪಕ್ಷ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಯ್ತು. ಆದರೂ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಯುತ್ತಲೇ ಇದೆ. ಕೆಲವು ನಾಯಕರು ಈ ವಿಚಾರವಾಗಿ ಮಾತನಾಡುತ್ತಲೇ ಇದ್ದಾರೆ. ಆದರೆ ಇವರ ಗುದ್ದಾಟ ವಿರೋಧ ಪಕ್ಷಕ್ಕೆ ಅಸ್ತ್ರವಾಗುತ್ತಿದೆ. ಇದೀಗ ಬಿಜೆಪಿ ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಫೋಸ್ಟರ್ ಬಿಡುಗಡೆ ಮಾಡಿದೆ. ಕೈ ಕಚ್ಚಾಟ ಎಂಬ ಪೋಸ್ಟರ್​ ಅನ್ನು ಹಂಚಿಕೊಂಡಿದೆ.

ಬಿಜೆಪಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಫೋಸ್ಟರ್ ಅನ್ನು ಟ್ವಿಟ್ಟರ್​ನಲ್ಲಿ ರಿಲೀಸ್ ಮಾಡಿದೆ. ಪೋಸ್ಟರ್​ನಲ್ಲಿ ಸಿದ್ದರಾಮಯ್ಯ ಪರ ಸಚಿವ ಹೆಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಫೋಟೋ ಇದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಂಸದ ಡಿಕೆ ಸುರೇಶ್ ಇರುವ ಫೋಸ್ಟರ್ ವೈರಲ್​ ಆಗಿದೆ. ಇಬ್ಬರ ನಡುವೆ ಬಿರುಕು ಎಂಬ ಸಂದೇಶದೊಂದಿದೆ ಕೈ ಕಚ್ಚಾಟ ಎಂಬ ಫೋಸ್ಟರನ್ನು ಬಿಜೆಪಿ ರಿಲೀಸ್​ ಮಾಡಿದೆ.

ಬಿಜೆಪಿ 10 ಕೆಜಿ ಅಕ್ಕಿಯ ವಿಚಾರವಾಗಿಯು ಕಿಡಿ ಕಾರಿದೆ. ಒಂದು ವೇಳೆ 10 ಕೆಜಿ ಅಕ್ಕಿ ನೀಡದೇ ಹೋದರೆ ಕರ್ನಾಟಕ ಬಂದ್​ ಮಾಡಲು ಮುಂದಾಗಿದೆ. ಮತ್ತೊಂದೆಡೆ ಸರ್ಕಾರವು ಅಕ್ಕಿಗಾಗಿ ಕೇಂದಕ್ಕೆ ಪತ್ರ ಬರೆದರು ಕೇಂದ್ರ ಮಾತ್ರ ಅಕ್ಕಿ ನಮ್ಮ ಬಳಿ ಇಲ್ಲ ಎಂದಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಅಕ್ಕಿ ಹೋರಾಟ, ಕುರ್ಚಿಗಾಗಿ ಗದ್ದಲ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ವಿರುದ್ಧ ‘ಕೈ ಕಚ್ಚಾಟ’ದ ಪೋಸ್ಟರ್​ ರಿಲೀಸ್​ ಮಾಡಿದ ಬಿಜೆಪಿ

https://newsfirstlive.com/wp-content/uploads/2023/06/Siddaramaiah-vs-DKS.jpg

Load More