ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಶುರುವಾಗುತ್ತಿದೆ ಢವಢವ!
ಬೊಮ್ಮಾಯಿ ಅವಧಿಯಲ್ಲಿ ನಡೆದ ಹಗರಣಗಳನ್ನ ಟಾರ್ಗೆಟ್ ಮಾಡುತ್ತಿದೆ ಕಾಂಗ್ರೆಸ್!
ಬಿಜೆಪಿ ನಾಯಕರ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಕೇಸ್‌ಗಳು ರೀ ಓಪನ್..!
ಬೆಂಗಳೂರು: ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಈ ಹಿಂದೆ ಇದ್ದ ಸರ್ಕಾರ ಮಾಡಿರೋ ಹಗರಣಗಳ ಕೆದಕೋದಕ್ಕೆ ‘ಕೈ’ ಪಡೆ ತಯಾರಿ ಮಾಡಿಕೊಳ್ತಿದೆ. ಬಿಜೆಪಿ ನಾಯಕರ ವಿರುದ್ಧ ಕೇಳಿ ಬಂದಿದ್ದ ಹಗರಣಗಳು, ಅಕ್ರಮ ಕೇಸ್‌ಗಳ ಫೈಲ್ ರೀ ಓಪನ್ ಆಗೋದು ಪಕ್ಕಾ ಆಗಿದೆ.
ಬಿಜೆಪಿ ಆಡಳಿತ ಕಾಲದಲ್ಲಿ ಕೇಳಿ ಬಂದಿದ್ದ ಹಗರಣಗಳು ಒಂದಾ ಎರಡಾ, ಸಾಲು ಸಾಲು ಆರೋಪಗಳು ಬೊಮ್ಮಾಯಿ ಸರ್ಕಾರದ ಬೆನ್ನೇರಿದ್ದವು. ಸರ್ಕಾರದ ಸಚಿವರ ತಲೆದಂಡಕ್ಕೂ ಕೆಲ ಆರೋಪಗಳು ಕಾರಣವಾಗಿದವು. ಜೊತೆಗೆ ಅಕ್ರಮಗಳ ಬಗ್ಗೆ ತನಿಖೆ ನಡೆಯದೇ ಫೈಲ್‌ಗಳು ಧೂಳು ಹಿಡಿದ್ದಿದ್ದವು. ಇದೀಗ ಬಿಜೆಪಿ ಸರ್ಕಾರದ ಮೇಲಿರೋ ಕೇಸ್ ಫೈಲ್‌ಗಳ ಧೂಳು ಒರೆಸೋ ಕೆಲಸಕ್ಕೆ ‘ಕೈ’ ಹಾಕಿದೆ.
ಬಿಜೆಪಿ ಹಗರಣಗಳ ತನಿಖೆಗೆ ಸಚಿವ ಸಂಪುಟ ಅಸ್ತು
ಅಕ್ರಮಗಳ ತನಿಖೆ ನಿಶ್ಚಿತ ಎಂದ ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಗಿತ್ತು. ಈ ನಿರ್ಣಯಗಳಲ್ಲಿ ಬಿಜೆಪಿ ಆಡಳಿತದಲ್ಲಿ ಕೇಳಿಬಂದಿದ್ದ ಹಗರಣಗಳ ತನಿಖೆಗೆ ಸಚಿವ ಸಂಪುಟ ಅಸ್ತು ಎಂದಿತ್ತು. ಇದೀಗ ಯಾವ ರೀತಿ ತನಿಖೆ ನಡೆಸಬೇಕು ಅಂತ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಕೇಳಿಬಂದಿದ್ದ ಹಗರಣಗಳ ತನಿಖೆ ಮಾಡೇ ಮಾಡ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಿಎಸ್‌ಐ ಕೇಸ್‌ನಲ್ಲಿ ಭ್ರಷ್ಟಾಚಾರ ನಡೆದಿದ್ದು ಪ್ರೂವ್
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ತೇವೆ ಎಂದ ಪರಮೇಶ್ವರ್
ಇನ್ನೂ ಪಿಎಸ್‌ಐ ಹಗರಣದ ಬಗ್ಗೆ ಮಾತನಾಡಿರೋ ಗೃಹ ಸಚಿವ ಡಾ. ಜಿ ಪರಮೇಶ್ವರ್, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಪ್ರೂವ್ ಆಗಿದೆ. ಈ ಕೇಸ್ ಇನ್ನೂ ಕೋರ್ಟ್‌ನಲ್ಲಿದೆ. ಕೋರ್ಟ್ ಏನ್ ಹೇಳುತ್ತೆ ನೋಡಬೇಕು ಎಂದಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಮಾತನ್ನಾಡಿದ್ದಾರೆ. ಇನ್ನೂ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಕೆ.ಆರ್.ಐ.ಡಿ.ಎಲ್ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿರೋ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಇದೀಗ ಲೋಕಾಯುಕ್ತ ಅಧಿಕಾರಿಗಳು ನಡೆಸಿರೋ ಪ್ರಾಥಮಿಕ ತನಿಖೆಯಲ್ಲಿ ಬರೋಬ್ಬರಿ 118 ಕೋಟಿ ಅಕ್ರಮ ನಡೆದಿರೋದು ಬಯಲಾಗಿದೆ. ಇದೀಗ 118 ಕೋಟಿಗೆ ಕನ್ನ ಹಾಕಿದ ಆರೋಪದಲ್ಲಿ 6 ಮಂದಿ ಇಂಜಿನಿಯರ್‌ಗಳನ್ನ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟಾರೆ, ರಾಜ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿ ಕಮಲ ಬಾಡಿ ಹೋಗಿದೆ.. ಇದೀಗ ಬಾಡಿ ಹೋದ ಕಮಲದ ಬುಡವನ್ನೇ ಅಲ್ಲಾಡಿಸಲು ‘ಕೈ’ ಸಜ್ಜಾಗಿದೆ. ಇದ್ರಿಂದ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕೆಲ ನಾಯಕರಿಗೆ ಢವಢವ ಶುರುವಾಗಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ