ಇಡೀ ರಾಜ್ಯಾದ್ಯಂತ ‘ಶಕ್ತಿ’ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್
ಸರ್ಕಾರಿ ಬಸ್ಗಳಲ್ಲಿ ನಾರಿಯರದ್ದೇ ದರ್ಬಾರ್, ಬಸ್ಗಳೆಲ್ಲ ಫುಲ್ ರಶ್..!
ಆಸ್ತಿ ಮಾರಿ ಹಣ ತರ್ತೀರಾ?- ಬಿಜೆಪಿ-ಕಾಂಗ್ರೆಸ್ ಮಧ್ಯೆ ‘ಗ್ಯಾರಂಟಿ’ ವಾಗ್ಯುದ್ಧ
ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ಜಾರಿಗೆ ಬರುತ್ತಿವೆ. ಈಗಾಗಲೇ ಭರ್ಜರಿಯಾಗಿ ಮೈಲೇಜ್ ಪಡೆದುಕೊಂಡು ರಸ್ತೆಯಲ್ಲಿ ನಾಗಾಲೋಟ ನಡೆಸುತ್ತಿವೆ. ಬೆಂಗಳೂರಿನಲ್ಲಿ ಜನರು ಮೆಟ್ರೋ ಬಿಟ್ಟು ಬಸ್ ಹಿಡಿಯುತ್ತಿದ್ದಾರೆ. ಆದ್ರೆ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಭಾರೀ ಮೊತ್ತದ ಅವಶ್ಯಕತೆ ಇದೆ. ಈ ಹಣವನ್ನ ಎಲ್ಲಿಂದ ತರುತ್ತೆ ಎಂದು ಸರ್ಕಾರ ಇದುವರೆಗೆ ಹೇಳಿಲ್ಲ. ಇದೇ ವಿಚಾರವನ್ನೇ ಮುಂದಿಟ್ಟುಕೊಂಡು ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಕಾಲಿಡಲು ಜಾಗ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸರ್ಕಾರ ಶಕ್ತಿ ಅರ್ಥಾತ್ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ತಂದಿದ್ದೇ ತಡ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಬಸ್ಗಳು ಫುಲ್ ಆಗಿಬಿಟ್ಟಿವೆ. ಕೆಲವೆಡೆ ಖಾಲಿ ಹೊಡೆಯುತ್ತಿದ್ದ ಬಸ್ಸ್ಟ್ಯಾಂಡ್ ಕೂಡ ಜನರಿಂದ ತುಂಬಿ ತುಳುಕುತ್ತಿವೆ.
ಪುರುಷರಿಗೆ 50% ರಷ್ಟು ಸೀಟ್ ರಿಸರ್ವ್ ಮಾಡದ ಅಧಿಕಾರಿಗಳು
ಫ್ರೀ ಬಸ್ ಹಿನ್ನೆಲೆ ವಿಜಯಪುರ ನಗರ ನಿಲ್ದಾಣದಲ್ಲಿ ಬಸ್ಗಳು ಅದೆಷ್ಟರಮಟ್ಟಿಗೆ ಜನರಿಂದ ತುಂಬಿವೆ ಎಂದರೆ ಬೇರೆ ಪ್ರಯಾಣಿಕರು ಕೂರುವುದು ಬಿಡಿ ಬಸ್ ಹತ್ತಕ್ಕೂ ಆಗುವುದಿಲ್ಲ. ಬೇರೆ ಬಸ್ಗೆ ಹೋಗುವ ಎಂದರೆ ಬಸ್ಗಳಿಲ್ಲದೇ ಪ್ರಯಾಣಿಕರು ನಿಲ್ದಾಣದಲ್ಲೇ ಡೇರೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಧಿಕಾರಿಗಳು, ಪುರುಷ ಪ್ರಯಾಣಿಕರಿಗೆ 50 ಶೇಕಡಾದಷ್ಟು ಸೀಟ್ ಕೂಡ ರಿಸರ್ವ್ ಮಾಡಿಲ್ಲ. ಹೀಗಾಗಿ ಸೀಟಿಗಾಗಿ ಪುರುಷ ಪ್ರಯಾಣಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹರಸಾಹಸ ಪಡ್ತಿದ್ದು ಹೆಚ್ಚು ಬಸ್ ಬಿಡಬೇಕೆಂದು ಆಗ್ರಹಿಸಿದ್ದಾರೆ.
‘ಗ್ಯಾರಂಟಿ ಕೊಟ್ಟಾಯ್ತು, ಯೋಜನೆಗೆ ಹಣ ಎಲ್ಲಿಂದ ತರ್ತಾರೆ?’
ಇನ್ನು ಗ್ಯಾರಂಟಿ ವಿಚಾರವಾಗಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ವಾಗ್ಯುದ್ಧ ಜೋರಾಗಿದೆ. ಗ್ಯಾರಂಟಿಗಳನ್ನು ಸರ್ಕಾರ ಕೊಟ್ಟಿದೆ. ಆದ್ರೆ ಈ ಎಲ್ಲ ಯೋಜನೆಗಳಿಗೆ ಸರ್ಕಾರ ಎಲ್ಲಿಂದ ಹಣ ತರುತ್ತೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
‘ಗೃಹ ಜ್ಯೋತಿ’ ಬಗ್ಗೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ
ಇನ್ನು, ಗೃಹ ಜ್ಯೋತಿಯಡಿ 200 ಯುನಿಟ್ಗೆ ಮಿತಿ ಹೇರಿರೋದಕ್ಕೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಖಾಖಾ ಸಾಹೇಬ್, ಮಹದೇವಪ್ಪಗೂ ಫ್ರೀ ಅಂದಿದ್ರು. ಸಿಎಂ ಮನೆಯಲ್ಲೂ ಇಷ್ಟೇ ಯೂನಿಟ್ ಬಳಸುತ್ತಾರಾ? ಎಂದು ಕಿಡಿಕಾರಿದ್ದಾರೆ. ಅಲ್ಲದೇ ಗ್ಯಾರಂಟಿಗೆ ಹಣವನ್ನ ಆಸ್ತಿ ಮಾರಿ ತರ್ತೀರಾ? ಅಥವಾ ಒಬ್ಬರಿಂದ ದರೋಡೆ ಮಾಡಿ ಮತ್ತೊಬ್ಬರಿಗೆ ಕೊಡುತ್ತೀರಾ? ಎಂದು ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಒಟ್ಟಾರೆ ಪಂಚಗ್ಯಾರಂಟಿಗಳ ಪೈಕಿ ಒಂದು ಶಕ್ತಿ ಜಾರಿಗೆ ಬಂದಿದೆ. ಇನ್ನುಳಿದ ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಆದ್ರೆ ಈ ಎಲ್ಲಾ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೆ ಅನ್ನೋದನ್ನ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಇದೇ ವಿಚಾರವನ್ನೇ ಇಟ್ಕೊಂಡು ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ