newsfirstkannada.com

ಕೊಟ್ಟ ಮಾತು ತಪ್ಪಿದ ಸಿಎಂ ಸಿದ್ದರಾಮಯ್ಯ; ಹಣ ಬೇಡ 10 ಕೆಜಿ ಅಕ್ಕಿ ಕೊಡಿ ಎಂದು ಬಿಜೆಪಿ ನಾಯಕರು ಪಟ್ಟು

Share :

29-06-2023

  ಈ ಹಿಂದೆ ಅಕ್ಕಿ ಇಲ್ಲ ಅಂದ್ರೆ ಹಣ ಕೊಡಿ ಎಂದಿದ್ದ ಬಿಜೆಪಿ ನಾಯಕರು

  ಹಣ ಕೊಡ್ತೀವಿ ಎನ್ನುತ್ತಿದ್ದಂತೆ ಯು-ಟರ್ನ್​ ಹೊಡೆದ ಬಿಜೆಪಿ ನಾಯಕರು

  ಅಕ್ಕಿ’ ಭಾಗ್ಯ ಬದಲಿಗೆ ‘ಲಕ್ಷ್ಮಿ’ ಭಾಗ್ಯಕ್ಕೆ ಮುಂದಾದ ಸರ್ಕಾರದ ನಡೆಗೆ ವಿರೋಧ

ಬೆಂಗಳೂರು: ನುಡಿದಂತೆ ನಡೆಯುತ್ತೇವೆ ಎಂದಿದ್ದ ಕಾಂಗ್ರೆಸ್​​ ಸರ್ಕಾರ ಮಾತು ತಪ್ಪಿದೆ. 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡಲು ಪ್ಲಾನ್​ ಮಾಡಿದೆ. ಅಕ್ಕಿ ಬದಲು ಲಕ್ಷ್ಮಿಭಾಗ್ಯ ಕೊಡ್ತೀವಿ ಎಂದ ಸರ್ಕಾರದ ವಿರುದ್ಧ ಕಮಲ ನಾಯಕರು ಮುಗಿಬಿದ್ದಿದ್ದಾರೆ.

ಕರ್ನಾಟಕದಲ್ಲಿ ಅಕ್ಕಿ ರಾಜಕೀಯ ಮತ್ತೊಂದು ಮಜಲು ಪಡೆದಿದೆ. ನಾ ಕೊಡೆ, ನೀ ಬಿಡೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿತ್ತು. ಎಷ್ಟೇ ಕಷ್ಟ ಆದ್ರೂ ಮುಂದಿನ ತಿಂಗಳು ಅಕ್ಕಿ ಕೊಡ್ತೀವಿ ಎಂದಿದ್ದ ಕಾಂಗ್ರೆಸ್​ ಸರ್ಕಾರಕ್ಕೆ ಅಕ್ಕಿ ತರಲು ಸಾಧ್ಯವಾಗಿಲ್ಲ. ಮಾತು ತಪ್ಪಿದ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಅಕ್ಕಿ ಬದಲು ಹಣ.. ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಗುದ್ದು!

5 ಅಕ್ಕಿ ಬದಲು ದುಡ್ಡು ಕೊಡ್ತೀವಿ ಅನ್ನೋ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಳಿದೊಂದು, ಮಾಡೋದೊಂದು ಎಂದು ಸಿದ್ದು ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಅಕ್ಕಿ ಬದಲು ಹಣ ನೀಡುವ ನಿರ್ಧಾರಕ್ಕೆ ಕಟೀಲ್ ಖಂಡನೆ!

ಅಕ್ಕಿ ಬದಲು ಹಣ ಕೊಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಕಿಡಿಕಾರಿದ್ದಾರೆ. ನಿಮಗೆ ಶಕ್ತಿ ಇದ್ರೆ 10 ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ. ನುಡಿದಂತೆ ನಡೆಯಬೇಕು. ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

‘ಸರ್ಕಾರ ಜನರ ಕಿವಿಗೆ ಹೂವು ಮುಡಿಸುತ್ತಿದೆ’

ಸರ್ಕಾರ ಜನರ ಕಿವಿಗೆ ಹೂವು ಮುಡಿಸುತ್ತಿದೆ. 34 ರೂಪಾಯಿಗೆ ಅಕ್ಕಿ ಎಲ್ಲಿ ಸಿಗುತ್ತೆ, 45 ರೂ.ನಂತೆ 10 ಕೆಜಿಗೆ ದುಡ್ಡು ಕೊಡಿ ಶಾಸಕ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ನೀವು ಗ್ಯಾರಂಟಿ ಕಾರ್ಡ್​​​ನಲ್ಲಿ ಸಹಿ ಹಾಕುವಾಗ ಯೋಚನೆ ಮಾಡಬೇಕಿತ್ತು, ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್​​ಎನಲ್ಲಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನುಡಿದಂತೆ ನಡೆಯುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರು ಸದ್ಯ ಬಿಜೆಪಿಗರ ಬಾಯಿಗೆ ಆಹಾರ ಆಗಿದ್ದಾರೆ. ಸದ್ಯಕ್ಕೆ ಅಕ್ಕಿ ಸಿಗೋವರೆಗೆ ಮಾತ್ರ ಸರ್ಕಾರ ಹಣ ಕೊಡ್ತೀವಿ, ಆಮೇಲೆ ಅಕ್ಕಿನೇ ಕೊಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಮುಂದೆ ಅಕ್ಕಿನೇ ಕೊಡ್ತಾರಾ, ಇಲ್ಲಾ ಹಣ ಕೊಡೋದನ್ನೇ ಮುಂದುವರಿಸ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಟ್ಟ ಮಾತು ತಪ್ಪಿದ ಸಿಎಂ ಸಿದ್ದರಾಮಯ್ಯ; ಹಣ ಬೇಡ 10 ಕೆಜಿ ಅಕ್ಕಿ ಕೊಡಿ ಎಂದು ಬಿಜೆಪಿ ನಾಯಕರು ಪಟ್ಟು

https://newsfirstlive.com/wp-content/uploads/2023/06/DKS_Siddu.jpg

Load More