newsfirstkannada.com

ಗೆದ್ದ ಮೇಲೆ ತವರನ್ನೇ ಮರೆತರಾ ಸಿಎಂ ಸಿದ್ದರಾಮಯ್ಯ?- ‘ಕುಂಭಕರ್ಣ ನಿದ್ದೆ ಬಿಡಿ, ಕೆಲಸ ಮಾಡಿ’ ಎಂದ ಬಿಜೆಪಿ

Share :

29-06-2023

    ದುಸ್ಥಿತಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡಗಳು

    ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕನಿಷ್ಠ ಬೇಕು 1 ಸಾವಿರ ಕೋಟಿ!

    ದುರಸ್ತಿ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಜೆಪಿ ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಹೇಗಾದರೂ ಮಾಡಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಈಗಾಗಲೇ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್​​ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಫ್ರೀ ಬಸ್​ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ಬೆನ್ನಲ್ಲೇ ಮುಂದಿನ ತಿಂಗಳಿನಿಂದಲೇ 5 ಕೆಜಿ ಅಕ್ಕಿಯೊಂದಿಗೆ 170 ರೂ. ರಾಜ್ಯದ ಬಿಪಿಎಲ್​​ ಕಾರ್ಡ್ ಕುಟುಂಬದ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಅನ್ನಭಾಗ್ಯ ಯೋಜನೆ ಜುಲೈನಿಂದಲೇ ಜಾರಿ ಮಾಡಲು ನಿರ್ಧರಿಸಿದೆ. ಹೀಗೆ ಇನ್ನುಳಿದ ಮೂರು ಗ್ಯಾರಂಟಿಗಳ ಜಾರಿಗೆ ಮುಂದಾಗಿರುವ ಕಾಂಗ್ರೆಸ್​ ಸರ್ಕಾರಕ್ಕೆ ಬಿಜೆಪಿ ಒಂದಲ್ಲ, ಒಂದು ರೀತಿಯ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿದೆ.

ಫ್ರೀ ಬಸ್​​ ಯೋಜನೆಯಿಂದ ರಾಜ್ಯದ ಆಟೋ, ಟ್ಯಾಕ್ಸಿ ಮತ್ತು ಖಾಸಗಿ ಬಸ್​ ಮಾಲೀಕರಿಗೆ ತೊಂದರೆ ಆಗಲಿದೆ ಎನ್ನುತ್ತಿದ್ದ ಬಿಜೆಪಿ ಮತ್ತೊಂದು ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡಗಳ ದುಸ್ಥಿತಿಯನ್ನು ಸರಿಪಡಿಸಿ ಎಂದು ಒತ್ತಾಯಿಸಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ಮೈಸೂರಿನ 214 ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿವೆ. ನಿಮ್ಮ ತವರು ಜಿಲ್ಲೆ ಮೈಸೂರು. ನೀವು ಗೆದ್ದು ಬಂದ ಜಿಲ್ಲೆಯನ್ನೇ ಈ ಪಾಟಿ ನಿರ್ಲಕ್ಷ್ಯ ಮಾಡಿದ್ದೀರಿ. ಇನ್ನು ರಾಜ್ಯದ ಪಾಡೇನು? ಇನ್ನಾದರು ಕುಂಭಕರ್ಣ ನಿದ್ದೆಯಿಂದ ಎದ್ದು ಮೈಸೂರಿನ ಪರಂಪರೆ, ಸಂಸ್ಕೃತಿ ಉಳಿಸಲು ಮುಂದಾಗಿ. ಈ ವಿಚಾರದಲ್ಲೂ ರಾಜ್ಯದ ಅದರಲ್ಲೂ ಮೈಸೂರಿನ ಜನರ ಕಿವಿಗೆ ಹೂ ಇಡಬೇಡಿ ಎಂದು ಕುಟುಕಿದೆ.

ಏನಿದು ಸಮಸ್ಯೆ..?

ಮೈಸೂರು ನಗರದಲ್ಲಿ 213 ಪಾರಂಪರಿಕ ಕಟ್ಟಡಗಳಿವೆ. ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ. ಎಲ್ಲಾ ಕಟ್ಟಡಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸಂಬಂಧ ಹಲವು ಬಾರಿ ಇತಿಹಾಸ ತಜ್ಞರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಸೇರಿ ಸಭೆ ನಡೆಸಿದ್ದರು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡಿ ಹಿಂದಿನ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿತ್ತು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕ್ಯಾರೇ ಎಂದಿರಲಿಲ್ಲ. ಈಗ ಸಿಎಂ ಸಿದ್ದರಾಮಯ್ಯ ಅವರಾದರೂ ಆದಷ್ಟು ಬೇಗ ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೆದ್ದ ಮೇಲೆ ತವರನ್ನೇ ಮರೆತರಾ ಸಿಎಂ ಸಿದ್ದರಾಮಯ್ಯ?- ‘ಕುಂಭಕರ್ಣ ನಿದ್ದೆ ಬಿಡಿ, ಕೆಲಸ ಮಾಡಿ’ ಎಂದ ಬಿಜೆಪಿ

https://newsfirstlive.com/wp-content/uploads/2023/06/Siddaramaiah_2-4.jpg

Load More